ಪಾಕ್‌ನಲ್ಲಿ ಬಾಜಿರಾವ್‌ಮಸ್ತಾನಿಗೆ ಸೆನ್ಸಾರ್ ಮಂಡಳಿಯ ರೆಡ್ ಸಿಗ್ನಲ್
ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಬಾಜಿರಾವ್ ಮಸ್ತಾನಿ ಚಿತ್ರ ಮರಾಠ ಪೇಶ್ವೆ ಬಾಜಿ ರಾವ್ ಜೀವನದ ಕಥೆಯಾಧಾರಿತವಾಗಿದ್ದು, ಇದರಲ್ಲಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ.

,ಬಾಲಿವುಡ್ ತಾರೆ ದಿಪೀಕಾ ಪಡುಕೊಣೆ ಮತ್ತು ರಣವೀರ್ ಸಿಂಗ್ ಅಭಿನಯದ ಚಿತ್ರ ಬಾಜಿರಾವ್ ಮಸ್ತಾನಿಗೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ ನಿಷೇಧ ಹೇರಿದೆ.ಇದೇ ವೇಳೆ ಶಾರೂಕ್ ಖಾನ್ ಮತ್ತು ಕಾಜೋಲ್ ಅಭಿನಯದ ದಿಲ್‌ವಾಲ್ ಚಿತ್ರಕ್ಕೆ ಪಾಕ್ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ.
ಇಸ್ಲಾಂ ವಿರೋಧಿ ಅಂಶಗಳು ಬಾಜಿರಾವ್ ಮಸ್ತಾನಿ ಚಿತ್ರದಲ್ಲಿರುವ ಹಿನ್ನೆಲೆಯಲ್ಲಿ ಪಾಕ್‌ನ ಸೆನ್ಸಾರ‍್ ಮಂಡಳಿಯು ನಿಷೇಧ ವಿಧಿಸಿದೆ ಎಂದು ತಿಳಿದು ಬಂದಿದೆ.
ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಬಾಜಿರಾವ್ ಮಸ್ತಾನಿ ಚಿತ್ರ ಮರಾಠ ಪೇಶ್ವೆ ಬಾಜಿ ರಾವ್ ಜೀವನದ ಕಥೆಯಾಧಾರಿತವಾಗಿದ್ದು, ಇದರಲ್ಲಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ.