Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಪ್ರೇಯಸಿ ಭೇಟಿಗೆ ಭಾರತದಿಂದ ಸ್ವೀಡನ್ ಗೆ...

ಪ್ರೇಯಸಿ ಭೇಟಿಗೆ ಭಾರತದಿಂದ ಸ್ವೀಡನ್ ಗೆ ಸೈಕಲ್ ಯಾತ್ರೆ!

ಐದು ತಿಂಗಳ ಕಾಲ ಸೈಕಲ್‌ಯಾತ್ರೆ ನಡೆಸಿ, ಭಾರತದಿಂದ ಇಲ್ಲಿಗೆ ಬಂದ ವಿಷಯವನ್ನು ತಿಳಿದ ಚಾರ್ಲೊಟ್ ತಕ್ಷಣ ಗುಟೆನ್‌ಬರ್ಗ್‌ಗೆ ಬಂದು, ತನ್ನ ಪತಿಯನ್ನು ಪ್ರೀತ್ಯಾದರಗಳಿಂದ ಬರಮಾಡಿಕೊಂಡಳು. ಆಕೆಯ ತಂದೆ- ತಾಯಿ ಕೂಡಾ ರಾಜಮನೆತನದ ಸಂಪ್ರದಾಯವನ್ನು ಮುರಿದು ತಮ್ಮ ಕುಟುಂಬದ ಸದಸ್ಯನಾಗಿ ಪ್ರದ್ಯುಮ್ನ ಕುಮಾರ್‌ನನ್ನು ಸೇರಿಸಿಕೊಂಡರು. ಬಿಳಿಯರನ್ನು ಹೊರತುಪಡಿಸಿ, ಬೇರೆಯವರು ರಾಜಮನೆತನದ ಜೊತೆಗೆ ವಾಸಿಸಬಾರದು ಎಂಬ ಸಂಪ್ರದಾಯಕ್ಕೆ ಆ ರಾಜಕುಟುಂಬ ತಿಲಾಂಜಲಿ ಕೊಟ್ಟಿತು.

ನಾರಯಣ ಪತ್ರಿನಾರಯಣ ಪತ್ರಿ19 Dec 2015 6:21 PM IST
share
ಪ್ರೇಯಸಿ ಭೇಟಿಗೆ ಭಾರತದಿಂದ ಸ್ವೀಡನ್ ಗೆ ಸೈಕಲ್ ಯಾತ್ರೆ!

ಒಬ್ಬ ಬಡ ಯುವಕ ಶ್ರೀಮಂತ ಯುವತಿಯನ್ನು ಭೇಟಿಯಾಗುತ್ತಾನೆ. ಅವರಲ್ಲಿ ಪ್ರೇಮಾಂಕುರವಾಗುತ್ತದೆ. ಯುವತಿ ಆಕೆಯ ದೇಶಕ್ಕೆ ಮರಳುತ್ತಾಳೆ. ಆಕೆಯನ್ನು ಮರಳಿ ಅದ್ದೂರಿಯಾಗಿ ಭೇಟಿ ಮಾಡುವುದಾಗಿ ಯುವಕ ಆಶ್ವಾಸನೆ ಕೊಡುತ್ತಾನೆ. ಕಾಲ ಉರುಳುತ್ತದೆ. ಆದರೆ ಇವರಿಬ್ಬರ ಭೇಟಿಗೆ ಯುವಕ ಕಷ್ಟಪಡುತ್ತಾನೆ. ಆಕೆಗೆ ನೀಡಿದ ಭರವಸೆ ಉಳಿಸಿಕೊಳ್ಳುವ ದೃಢನಿರ್ಧಾರಕ್ಕೆ ಬರುತ್ತಾನೆ. ಸೈಕಲ್ ಮೂಲಕ ಎಂಟು ದೇಶಗಳನ್ನು ದಾಟಿ ಬಂದು ತನ್ನ ಜೀವದ ಪ್ರೇಯಸಿಯನ್ನು ಭೇಟಿ ಮಾಡುತ್ತಾನೆ!

ಇದು ಸದ್ಯದಲ್ಲೇ ತೆರೆ ಕಾಣಲಿರುವ ಬಾಲಿವುಡ್ ಚಿತ್ರದ ಕಥೆಯಲ್ಲ. ಆದರೂ ಇದು ಬಾಲಿವುಡ್ ಕಥೆಯಾಗುವ ಎಲ್ಲ ಅರ್ಹತೆಯನ್ನೂ ಪಡೆದ ವಾಸ್ತವ ಘಟನೆ. ಇದು ಭಾರತದ ಡಾ. ಪ್ರದ್ಯುಮ್ನ ಕುಮಾರ್ ಮಹಾನಂದಿಯಾ ಹಾಗೂ ಸ್ವೀಡನ್‌ನ ಚಾರ್ಲೆಟ್ ವೊನ್ ಸ್ಲೆಡ್ವಿನ್ ಅವರ ಪ್ರೇಮಕಥೆ. ಬಾಲಿವುಡ್‌ನ ಹಿಟ್ ಚಿತ್ರವಾಗಲು ಬೇಕಾದ ಎಲ್ಲ ಭಾವನಾತ್ಮಕ ಅಂಶಗಳು, ನಾಟಕೀಯ ತಿರುವುಗಳು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ- ಪ್ರಣಯದ ಎಳೆಗಳು ಇಲ್ಲಿವೆ. ಈ ಪ್ರಣಯಭರಿತ ಕಥಾನಕದಲ್ಲಿ, ಪ್ರೀತಿಯಲ್ಲಿ ಬದ್ಧತೆ ಇದ್ದರೆ ಎಲ್ಲ ಎಲ್ಲೆಗಳನ್ನೂ ಮೀರಿ ಯಶಸ್ವಿಯಾಗಬಲ್ಲದು ಎನ್ನುವುದನ್ನು ಪ್ರದ್ಯುಮ್ನ ತೋರಿಸಿಕೊಟ್ಟಿದ್ದಾರೆ.


1949ರಲ್ಲಿ ಒಡಿಶಾದ ಧೇನ್‌ಕನಾಲ್ ಎಂಬ ಅತ್ಯಂತ ಬಡ ನೇಕಾರರ ಕುಟುಂಬದಲ್ಲಿ ಹುಟ್ಟಿದ ಪ್ರದ್ಯುಮ್ನ ಕುಮಾರ್, ಅಭಿಜಾತ ಕಲಾವಿದ. ಆದರೆ ಈತನ ಶಿಕ್ಷಣಕ್ಕೆ ಅಗತ್ಯ ಹಣಕಾಸು ಹೊಂದಿಸಲು ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಅಸ್ಪಶ್ಯ ಎನ್ನಲಾದ ಕುಟುಂಬಕ್ಕೆ ಸೇರಿದ ಇವರು ಜಾತಿಪದ್ಧತಿಯ ಬಲಿಪಶುವಾದರು. ಇದರಿಂದ ಹಲವು ಅವಮಾನಗಳನ್ನೂ ಎದುರಿಸಬೇಕಾಯಿತು. 1971ರಲ್ಲಿ, ಹೊಸದಿಲ್ಲಿಯ ಕಲಾ ಕಾಲೇಜ್‌ನಲ್ಲಿ ಪ್ರವೇಶ ಪಡೆದು, ಅಲ್ಲಿ ವ್ಯಕ್ತಿಚಿತ್ರ ರಚನೆಯಲ್ಲಿ ಅತ್ಯಂತ ಜನಪ್ರಿಯತೆ ಪಡೆದರು.


1975ರಲ್ಲಿ ಲಂಡನ್‌ನಲ್ಲಿ ವಿದ್ಯಾರ್ಥಿನಿಯಾಗಿದ್ದ 19 ವರ್ಷದ ಚಾರ್ಲೊಟ್ ವೊನ್ ಸ್ಲೆಡ್ವಿನ್, ಈತನ ಬಗ್ಗೆ ತಿಳಿದುಕೊಂಡು, ತನ್ನ ವ್ಯಕ್ತಿಚಿತ್ರವನ್ನು ಬರೆಸಿಕೊಳ್ಳುವ ಸಲುವಾಗಿ ಭಾರತಕ್ಕೆ ಬಂದಳು. ಆತನ ಗ್ರಹಗತಿಯಂತೆ, ಆಕೆಯ ವ್ಯಕ್ತಿಚಿತ್ರವನ್ನು ರಚಿಸುವ ವೇಳೆ, ಆಕೆಯ ಮೋಹಕ ಚೆಲುವಿಗೆ ಮನಸೋತರು. ಆಕೆಯೂ ಪ್ರದ್ಯುಮ್ನ ಅವರ ಸರಳತೆಗೆ ಮಾರುಹೋದಳು. ಅಲ್ಲಿಗೆ ಅವರಿಬ್ಬರ ಪ್ರೇಮ ಕುಡಿಯೊಡೆಯಿತು.


ಚಾರ್ಲೊಟ್ ಅಪ್ಪಟ ಭಾರತೀಯ ಹೆಸರು ಪಡೆದು ಚಾರುಲತಾ ಆದಳು. ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಇಬ್ಬರೂ ವಿವಾಹವಾದರು. ಚಾರ್ಲೊಟ್ ತನ್ನ ದೇಶಕ್ಕೆ ಮರಳಬೇಕಾಗಿ ಬಂದಾಗ, ಪತಿಯನ್ನು ಕೂಡಾ ತನ್ನ ಜೊತೆ ಬರುವಂತೆ ಕೋರಿದಳು. ಇನ್ನೂ ವಿದ್ಯಾರ್ಥಿಯಾಗಿದ್ದ ಪ್ರದ್ಯುಮ್ನ ಕುಮಾರ್, ತಮ್ಮ ಅಧ್ಯಯನ ಪೂರ್ಣಗೊಳಿಸಲು ಬಯಸಿದರು. ಮುಂದೆ ಆಕೆ ಈತನ ಪ್ರಯಾಣಕ್ಕೆ ವಿಮಾನದ ಟಿಕೆಟ್ ಕಳುಹಿಸಲು ಮುಂದಾದಾಗ, ಅದನ್ನು ನಯವಾಗಿ ತಿರಸ್ಕರಿಸಿ, ತಾವೇ ಸ್ವಂತ ಖರ್ಚಿನಿಂದ ಬಂದು ಭೇಟಿ ಮಾಡುವುದಾಗಿ ಭರವಸೆ ನೀಡಿದರು. ಆಕೆ ಸ್ವದೇಶಕ್ಕೆ ಮರಳಿದ ಬಳಿಕ, ಪತ್ರ ಮೂಲಕ ಅವರು ಸಂಪರ್ಕ ಉಳಿಸಿಕೊಂಡರು.


ಚಾರ್ಲೊಟ್ ಬಗೆಗಿನ ಪ್ರೇಮ ಹೃದಯತುಂಬಿ ಬಂದಾಗ, ಪ್ರದ್ಯುಮ್ನ ಆ ಭರವಸೆ ನೀಡಿದ್ದರು. ಆದರೆ ಆ ಆಶ್ವಾಸನೆ ಈಡೇರಿಸಲು ಬೇಕಾಗುವಷ್ಟು ಹಣ ಈ ನತದೃಷ್ಟ ಕಲಾವಿದನ ಬಳಿ ಇರಲಿಲ್ಲ. ಆದರೆ ಬಿಟ್ಟುಬಿಡುವ ಜಾಯಮಾನ ಅವರದ್ದಲ್ಲ. ತನ್ನೆಲ್ಲ ವಸ್ತುಗಳನ್ನು ಮಾರಾಟ ಮಾಡಿ ಹಳೆ ಸೈಕಲ್ ಖರೀದಿಸಿದರು. ತಮ್ಮ ಎಲ್ಲ ಚಿತ್ರಗಳು ಹಾಗೂ ಕುಂಚದೊಂದಿಗೆ ಅವರು ಯಾರು ಯೋಚಿಸಲೂ ಸಾಧ್ಯವಿಲ್ಲದ ಸಾಹಸಕ್ಕೆ ಕೈಹಾಕಿದರು.
ದೂರದ ಪಾಶ್ಚಿಮಾತ್ಯ ದೇಶಕ್ಕೆ ತಮ್ಮ ಜೀವದ ಪ್ರೀತಿಯನ್ನು ಭೇಟಿಯಾಗಲು ಸೈಕಲ್ ಯಾತ್ರೆ ಆರಂಭಿಸಿದರು. ಇದು 1978ರಲ್ಲಿ. ಹೊಸದಿಲ್ಲಿಯಿಂದ ಅಮೃತಸರ ಮಾರ್ಗವಾಗಿ ಅಫ್ಘಾನಿಸ್ತಾನ, ಇರಾನ್, ಟರ್ಕಿ, ಬಲ್ಗೇರಿಯಾ, ಯುಗೋಸ್ಲಾವಿಯಾ, ಜರ್ಮನಿ, ಆಸ್ಟ್ರಿಯಾ ಮತ್ತು ಡೆನ್ಮಾರ್ಕ್‌ಗೆ ಯಾತ್ರೆ ಕೈಗೊಂಡರು. ದಾರಿಮಧ್ಯದಲ್ಲಿ ಹಲವು ಬಾರಿ ಅವರ ಹಳೆ ಸೈಕಲ್ ಕೈಕೊಟ್ಟಿತು. ದಾರಿಮಧ್ಯದಲ್ಲಿ ಹಲವು ದಿನಗಳ ಕಾಲ ಊಟವಿಲ್ಲದೆಯೂ ಸೈಕಲ್ ಸವಾರಿ ಮುಂದುವರಿಸಿದರು. ಇಂಥ ಯಾವ ಕಷ್ಟ ಕೂಡಾ ಅವರ ಇಚ್ಛಾಶಕ್ತಿ ತಡೆಯಲು ಸಾಧ್ಯವಾಗಲಿಲ್ಲ.


ನಾಲ್ಕು ತಿಂಗಳು ಮೂರು ವಾರಗಳ ಸುದೀರ್ಘ ಸೈಕಲ್ ಸಾಹಸದ ಬಳಿಕ ಅಂತಿಮವಾಗಿ ಸ್ವೀಡನ್‌ನ ಗುಟೆನ್‌ಬರ್ಗ್‌ಗೆ ಪ್ರದ್ಯುಮ್ನ ಅಡಿ ಯಿಟ್ಟರು. ಆ ದಿನಗಳಲ್ಲಿ ಹಲವು ದೇಶಗಳಲ್ಲಿ ಪ್ರಯಾಣಕ್ಕೆ ವೀಸಾ ಅಗತ್ಯವಿರಲಿಲ್ಲ.
ಸ್ವೀಡನ್ ತಲುಪುತ್ತಿದ್ದಂತೇ ಅಲ್ಲಿನ ವಲಸೆ ಅಧಿಕಾರಿಗಳು, ಭಾರತದಿಂದ ಸೈಕಲ್ ಯಾತ್ರೆ ಮೂಲಕ ಬಂದ ಈ ಅದ್ಭುತ ವ್ಯಕ್ತಿಯನ್ನು ಪ್ರಶ್ನಿಸಿದರು. ಆತನ ಭೇಟಿಯ ಉದ್ದೇಶ ತಮ್ಮ ಮದುವೆಯ ಭಾವಚಿತ್ರಗಳನ್ನು ಚಾರ್ಲೊಟ್‌ಗೆ ಸಮರ್ಪಿಸುವುದು ಎಂದು ಉತ್ತರಿಸಿದರು.


ಆದರೆ ಅಧಿಕಾರಿಗಳು ಇದನ್ನು ನಂಬಲಿಲ್ಲ. ಯೂರೋಪಿಯನ್ ರಾಜಮನೆತನದ ಯುವತಿ ಈ ಬಡ ಭಾರತೀಯನನ್ನು ಮದುವೆಯಾಗಿದ್ದನ್ನು ಅವರು ನಂಬುವುದು ಸಾಧ್ಯವೇ ಇರಲಿಲ್ಲ.


ಹೀಗೆ ಈ ರಹಸ್ಯವನ್ನು ದಿಢೀರನೇ ಬಿಚ್ಚಿಟ್ಟಾಗ, ತನ್ನ ಪ್ರೀತಿಯ ಮಡದಿ, ತನ್ನನ್ನು ಒಪ್ಪಿಕೊಳ್ಳುತ್ತಾಳೋ ಇಲ್ಲವೋ ಎಂಬ ಸಂದೇಹ ಆತನನ್ನು ಕಾಡಲಾರಂಭಿಸಿತು. ಐದು ತಿಂಗಳ ಕಾಲ ಸೈಕಲ್‌ಯಾತ್ರೆ ನಡೆಸಿ, ಭಾರತದಿಂದ ಇಲ್ಲಿಗೆ ಬಂದ ವಿಷಯವನ್ನು ತಿಳಿದ ಚಾರ್ಲೊಟ್ ತಕ್ಷಣ ಗುಟೆನ್‌ಬರ್ಗ್‌ಗೆ ಬಂದು, ತನ್ನ ಪತಿಯನ್ನು ಪ್ರೀತ್ಯಾದರಗಳಿಂದ ಬರಮಾಡಿಕೊಂಡಳು. ಆಕೆಯ ತಂದೆ- ತಾಯಿ ಕೂಡಾ ರಾಜಮನೆತನದ ಸಂಪ್ರದಾಯವನ್ನು ಮುರಿದು ತಮ್ಮ ಕುಟುಂಬದ ಸದಸ್ಯನಾಗಿ ಪ್ರದ್ಯುಮ್ನ ಕುಮಾರ್‌ನನ್ನು ಸೇರಿಸಿಕೊಂಡರು. ಬಿಳಿಯರನ್ನು ಹೊರತುಪಡಿಸಿ, ಬೇರೆಯವರು ರಾಜಮನೆತನದ ಜೊತೆಗೆ ವಾಸಿಸಬಾರದು ಎಂಬ ಸಂಪ್ರದಾಯಕ್ಕೆ ಆ ರಾಜಕುಟುಂಬ ತಿಲಾಂಜಲಿ ಕೊಟ್ಟಿತು.
ಮದುವೆ ಕಳೆದು 40 ವರ್ಷಗಳ ಬಳಿಕ ಡಾ.ಪಿ.ಕೆ.ಮಹಾನಂದಿಯಾ, ಭಾರತದ ಒಡಿಯಾ ಸಂಸ್ಕೃತಿಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪ್ರೀತಿಯ ಮಡದಿ ಚಾರ್ಲೊಟ್ ಹಾಗೂ ಇಬ್ಬರು ಮಕ್ಕಳೊಂದಿಗೆ ಸ್ವೀಡನ್‌ನಲ್ಲಿ ಸುಖಿಸಂಸಾರ ನಡೆಸುತ್ತಿದ್ದಾರೆ. ಹಿಂದೆ ಆತನನ್ನು ಅಸ್ಪಶ್ಯ ಎಂದು ದೂರವಿಟ್ಟಿದ್ದ ಅವರ ಗ್ರಾಮ, ಅವರು ಭಾರತಕ್ಕೆ ಪ್ರತೀ ಬಾರಿ ಭೇಟಿ ನೀಡಿದಾಗಲೂ ಅದ್ದೂರಿ ಸ್ವಾಗತ ನೀಡುತ್ತಿದೆ.


ಪ್ರದ್ಯುಮ್ನ ಕುಮಾರ್ ಇದೀಗ ಸ್ವೀಡನ್‌ನಲ್ಲಿ ಅತ್ಯಂತ ಜನಪ್ರಿಯ ಕಲಾವಿದರಾಗಿದ್ದು, ಸ್ವೀಡಿಷ್ ಸರಕಾರದಲ್ಲಿ ಕಲೆ ಹಾಗೂ ಸಂಸ್ಕೃತಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವೀಡಿಷ್ ಸರಕಾರ ಅವರ ಪ್ರೇಮದ ಗೌರವಾರ್ಥ ಅವರ ಪ್ರೀತಿಯ ಬಗ್ಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದು, ಇದನ್ನು ಶತಮಾನದ ಅಮರ ಪ್ರೇಮ ಎಂದು ಗುರುತಿಸಿದೆ. ಇವರ ಚಿತ್ರಗಳನ್ನು ವಿಶ್ವದ ಪ್ರಮುಖ ನಗರಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಂಡಿದ್ದು, ಇವು ಯುನಿಸೆಫ್ ಶುಭಾಶಯ ಪತ್ರಗಳಾಗಿಯೂ ಆಯ್ಕೆಯಾಗಿವೆ. 2012ರ ಜನವರಿ 4ರಂದು ಅವರಿಗೆ ಒಡಿಶಾದ ಭುವನೇಶ್ವರದಲ್ಲಿರುವ ಉತ್ಕಲ್ ಸಂಸ್ಕೃತಿ ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಇವರನ್ನು ಒಡಿಶಾ ಸರಕಾರ, ಸ್ವೀಡನ್‌ನಲ್ಲಿ ಭಾರತದ ಒಡಿಶಾ ಸಾಂಸ್ಕೃತಿಕ ರಾಯಭಾರಿಯಾಗಿಯೂ ನೇಮಕ ಮಾಡಿದೆ. ಖ್ಯಾತ ಬಾಲಿವುಡ್ ಚಿತ್ರನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿಯವರು ಪ್ರದ್ಯುಮ್ನ- ಚಾರ್ಲೊಟ್ ಪ್ರೇಮಕಥೆಯನ್ನು ಚಲನಚಿತ್ರವಾಗಿ ಮಾಡುವ ಯೋಜನೆ ಹೊಂದಿದ್ದಾರೆ.

share
ನಾರಯಣ ಪತ್ರಿ
ನಾರಯಣ ಪತ್ರಿ
Next Story
X