ಸಂಬಂಧ ಸಹಜಗೊಳಿಸಲು ಅಮೆರಿಕ ಇನ್ನಷ್ಟು ಶ್ರಮಿಸಬೇಕು’
ದ್ವಿಪಕ್ಷೀಯ ಸಂಬಂಧಗಳನ್ನು ಸಹಜಗೊಳಿಸುವ ನಿಟ್ಟಿನಲ್ಲಿ ತನ್ನ ಬೇಡಿಕೆಗಳನ್ನು ಈಡೇರಿಸುವಲ್ಲಿ ವಾಷಿಂಗ್ಟನ್ ವಿಫಲಗೊಂಡಿರುವ ಹೊರತಾಗಿಯೂ ಅಮೆರಿಕದೊಂದಿಗೆ ಸಂಬಂಧಗಳನ್ನು ಸುಧಾರಿಸಲು ಕ್ಯೂಬಾವು ಬಯಸುತ್ತದೆ ಎಂದು ಕ್ಯೂಬಾದ ಅಧ್ಯಕ್ಷ ರೌಲ್ ಕ್ಯಾಸ್ಟ್ರೊ ಹೇಳಿದ್ದಾರೆ.

ದ್ವಿಪಕ್ಷೀಯ ಸಂಬಂಧಗಳನ್ನು ಸಹಜಗೊಳಿಸುವ ನಿಟ್ಟಿನಲ್ಲಿ ತನ್ನ ಬೇಡಿಕೆಗಳನ್ನು ಈಡೇರಿಸುವಲ್ಲಿ ವಾಷಿಂಗ್ಟನ್ ವಿಫಲಗೊಂಡಿರುವ ಹೊರತಾಗಿಯೂ ಅಮೆರಿಕದೊಂದಿಗೆ ಸಂಬಂಧಗಳನ್ನು ಸುಧಾರಿಸಲು ಕ್ಯೂಬಾವು ಬಯಸುತ್ತದೆ ಎಂದು ಕ್ಯೂಬಾದ ಅಧ್ಯಕ್ಷ ರೌಲ್ ಕ್ಯಾಸ್ಟ್ರೊ ಹೇಳಿದ್ದಾರೆ.
ಕ್ಯೂಬಾದ ನಿವೃತ್ತ ನಾಯಕ ಫಿಡೆಲ್ ಕ್ಯಾಸ್ಟ್ರೊರ ಕಿರಿಯ ಸೋದರ ರೌಲ್ ಕ್ಯಾಸ್ಟ್ರೊ(84) ಪ್ರಸಾರ ಭಾಷಣದಲ್ಲಿ ಶುಕ್ರವಾರ ಸರಕಾರ ಹಾಗೂ ಪಕ್ಷದ ಹಿರಿಯ ಮುಖಂಡರನ್ನು ಉದ್ದೇಶಿಸಿ ಮಾಡನಾಡಿದರು.
ತಮ್ಮ ಹಿಂದಿನ ಶೀತಲ ಸಮರದ ಅವಧಿಯ ಭಿನ್ನಾಭಿಪ್ರಾಯಗ
ಳನ್ನು ಬದಿಗಿರಿಸಿ ದ್ವಿಪಕ್ಷೀಯ ಸಂಬಂಧಗಳನ್ನು ಉತ್ತಮಗೊಳಿಸಲು ಬಯಸುವುದಾಗಿ ಕಳೆದ ಡಿಸೆಂಬರ್ 17ರಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಘೋಷಿಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಆಗಿರುವ ಪ್ರಗತಿಯನ್ನು ಕ್ಯಾಸ್ಟ್ರೊ ಈ ಸಂದರ್ಭದಲ್ಲಿ ಶ್ಲಾಘಿಸಿದರು ಎಂದು ಮೂಲಗಳು ತಿಳಿಸಿವೆ.
ಕ್ಯೂಬಾದ ಮೇಲಿನ ವ್ಯಾಪಾರ ನಿಷೇಧ ಹಾಗೂ ಗ್ವಾಂಟನಾಮೊ ಕೊಲ್ಲಿಯಲ್ಲಿರುವ ನೌಕಾ ನೆಲೆಯ ಹಿಂದೆಗೆತ ಸೇರಿದಂತೆ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಅಗತ್ಯವೆಂದು ಕ್ಯೂಬಾ ಪರಿಗಣಿಸಿರುವ ವಿಷಯಗಳಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎಂದು ಇದೇ ವೇಳೆ ಕ್ಯಾಸ್ಟ್ರೊ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಯೂಬಾ ಹಾಗೂ ಅಮೆರಿಕ ಜುಲೈಯಲ್ಲಿ ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಪುನರಾರಂಭಿಸಿದ್ದು, ನೇರ ಅಂಚೆ ಸೇವೆ ಹಾಗೂ ಪರಿಸರ ರಕ್ಷಣೆ ಸಂಬಂಧಿಸಿ ಒಪ್ಪಂಗಳಿಗೆ ಸಹಿ ಹಾಕಿವೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ತಾನು ಕ್ಯೂಬಾಕ್ಕೆ ಭೇಟಿ ನೀಡಲು ಬಯಸುವುದಾಗಿ ಹೇಳಿಕೊಂಡಿದ್ದರು.
ಸಮಾಜವಾದದ ಬಗ್ಗೆ ಕ್ಯೂಬಾದ ಬದ್ಧತೆಯನ್ನು ಒತ್ತಿಹೇಳಿರುವ ಕ್ಯಾಸ್ಟ್ರೊ, ಭಿನ್ನಮತೀಯರನ್ನು ಬೆಂಬಲಿಸುವಂತಹ ಕ್ಯೂಬಾ ಸರಕಾರವನ್ನು ಕಡೆಗಣಿಸುವ ಉದ್ದೇಶದ ಅಮೆರಿಕದ ಕಾರ್ಯಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.