'ಆಶಿಕಿ-3'ಗೆ ಹೃತಿಕ್ ನಾಯಕ

ಬಾಲಿವುಡ್‌ನ ಎವರ್‌ಗ್ರೀನ್ ಚಿತ್ರಗಳಲ್ಲಿ ಒಂದೆನಿಸಿರುವ ಆಶಿಕಿ ಮತ್ತೆ ಮತ್ತೆ ಚಿತ್ರ ನಿರ್ಮಾಪಕರನ್ನು ಕಾಡುತ್ತಿದೆ. 1990ರಲ್ಲಿ ತೆರೆಕಂಡ ಮಹೇಶ್ ಭಟ್ ನಿರ್ದೇಶನದ ಆಶಿಕಿ ಚಿತ್ರವು ಇಂಪಾದ ಹಾಡುಗಳು ಹಾಗೂ ಸೊಗಸಾದ ಪ್ರೇಮಕತೆಯಿಂದಾಗಿ, ಚಿತ್ರರಸಿಕರ ಮನದಲ್ಲಿ ಶಾಶ್ವತವಾದ ಸ್ಥಾನ ಪಡೆದಿದೆ.
ಅದೇ ಚಿತ್ರದ ಕಥೆಯನ್ನು ಆಧರಿಸಿ ನಿರ್ಮಾಣವಾದ ಆಶಿಕಿ-2 ಕೂಡಾಬಾಕ್ಸ್ ಆಫೀಸಿನಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ. ಇದೀಗ ‘ತೇವರ್’ ಚಿತ್ರದ ಖ್ಯಾತಿಯ ನಿರ್ದೇಶಕ ಅಮಿತ್ ಶರ್ಮಾ, ಆಶಿಕಿ-3 ನಿರ್ಮಿಸಲು ಸಿದ್ಧರಾಗಿದ್ದಾರೆ. ಅದರೆ ಈ ಚಿತ್ರವು ಆಶಿಕಿ2 ಚಿತ್ರದ ಮುಂದುವರಿದ ಭಾಗವೇ ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ.
ಬಾಲಿವುಡ್‌ನಲ್ಲಿ ಈಗ ಕೇಳಿಬರುತ್ತಿರುವ ಲೇಟೆಸ್ಟ್ ಸುದ್ದಿಯೆಂದರೆ, ಅಶೀಕಿ 3ಯಲ್ಲಿ ಹೃತಿಕ್ ಹಾಗೂ ಸೋನಮ್ ಕಪೂರ್ ಜೊತೆಯಾಗಿ ನಟಿಸಲಿದ್ದಾರೆಂಬುದು. ಇತ್ತೀಚೆಗೆ ಇವರಿಬ್ಬರೂ ಜೊತೆಯಾಗಿ ನಟಿಸಿದ್ದ ‘ಧೀರೆ ಧೀರೆ ಸೆ’ ಮ್ಯೂಸಿಕ್ ವೀಡಿಯೋಗೆ ಅಭಿಮಾನಿಗಳ ಮುಕ್ತಕಂಠದ ಪ್ರಶಂಸೆ ಲಭಿಸಿತ್ತು.
ಆಶಿಕಿ ಚಿತ್ರದಲ್ಲಿ ಹೊಸಮುಖಗಳಾದ ರಾಹುಲ್‌ರಾಯ್ ಹಾಗೂ ಅನು ಅಗರ್‌ವಾಲ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು. ಅಶೀಕಿ-2ನಲ್ಲಿ ಆದಿತ್ಯ ರಾಯ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ನಾಯಕ, ನಾಯಕಿಯ ರಾಗಿದ್ದರು. ಹನಿಸಿಂಗ್ ನಿರ್ದೇಶನದ ಧೀರೆ ಧೀರೆ ಸೆ ಮ್ಯೂಸಿಕ್ ವಿಡಿಯೋದ ಯಶಸ್ಸಿನಿಂದ ಉತ್ತೇಜಿತರಾಗಿರುವ ಅಮಿತ್ ಶರ್ಮಾ, ಹೃತಿಕ್- ಸೋನಮ್ ಕಪೂರ್ ಜೋಡಿಯ ಅಭಿನಯದಲ್ಲಿ ಆಶಿಕಿ-3 ನಿರ್ಮಿಸಲು ಮುಂದಾಗಿದ್ದಾರೆ.
ಇತ್ತೀಚೆಗೆ ಹೃತಿಕ್ ಕೂಡಾ, ಒಳ್ಳೆಯ ಕತೆ ದೊರೆತಲ್ಲಿ, ತಾನು ಸೋನಮ್ ಜೊತೆ ನಟಿಸಲು ಆಸಕ್ತನಾಗಿರುವುದಾಗಿ ಹೇಳಿದ್ದರು. ಪ್ರಸ್ತುತ ಹೃತಿಕ್ ಮೊಹೆಂಜೊದಾರೊ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಅದು ಮುಗಿದ ಬಳಿಕ ಅವರು ಆಶಿಕಿ-3ಗೆ ಬಣ್ಣ ಹಚ್ಚುವ ಸಾಧ್ಯತೆಯಿದೆ.







