Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಅಳಿಸಲಾರದ ಹೆಸರು..

ಅಳಿಸಲಾರದ ಹೆಸರು..

ವಾರ್ತಾಭಾರತಿವಾರ್ತಾಭಾರತಿ20 Dec 2015 4:37 PM IST
share
ಅಳಿಸಲಾರದ ಹೆಸರು..

ಒಂದಿನ, ದೊಡ್ಡವರಿಗೆ ಏರ್ಪಡಿಸಿದ್ದ ಮನೋಶಾಸ್ತ್ರ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮನಃಶಾಸ್ತ್ರ ಶಿಕ್ಷಕ ‘ಇವತ್ತು ಒಂದು ಆಟ ಆಡೋಣ’ ಎನ್ನುತ್ತಾನೆ.

‘ಯಾವ ಆಟ?

ವಿದ್ಯಾರ್ಥಿನಿಯೊಬ್ಬಳಿಗೆ ಬರಲು ಹೇಳುತ್ತಾನೆ ಶಿಕ್ಷಕ.

ಹೇಮಾ ಎಂಬ ಹೆಣ್ಣುಮಗಳು ಎದ್ದು ಬರುತ್ತಾಳೆ.

ನಿನ್ನ ಜೀವನದಲ್ಲಿ ತುಂಬಾ ಮುಖ್ಯ ಅನಿಸುವ 30 ಜನರ ಹೆಸರುಗಳನ್ನು ಬೋರ್ಡ್ ಮೇಲೆ ಬರಿ ಎಂದ ಶಿಕ್ಷಕ.

ಹೇಮಾ 30 ಹೆಸರು ಬರೆದಳು. ಅದರಲ್ಲಿ ಆಕೆಯ ಕುಟುಂಬದ ಸದಸ್ಯರು, ಸಂಬಂಧಿಕರು, ಗೆಳೆಯ-ಗೆಳತಿಯರು, ಸಹೋದ್ಯೋಗಿಗಳು ಹಾಗೂ ನೆರೆಹೊರೆಯವರ ಹೆಸರುಗಳಿದ್ದವು.

‘ಇವುಗಳ ಪೈಕಿ ಯಾವುದಾದರೂ ಮೂರನ್ನು ಅಳಿಸು’

ಆಕೆ ತನ್ನ ಸಹೋದ್ಯೋಗಿಗಳ ಹೆಸರು ಅಳಿಸಿದಳು.

‘ಮುಖ್ಯ ಅನಿಸದ ಐದು ಹೆಸರುಗಳನ್ನು ಅಳಿಸು’

ತನ್ನ ನೆರೆಹೊರೆಯವರ ಹೆಸರುಗಳನ್ನು ಅಳಿಸಿದಳು ಹೇಮಾ.

ಹೀಗೆ ಅಳಿಸುವ ಕೆಲಸ ಮುಂದುವರಿದು, ಕೊನೆಗೆ ಕೇವಲ ನಾಲ್ಕು ಹೆಸರುಗಳು ಮಾತ್ರ ಬೋರ್ಡ್ ಮೇಲೆ ಉಳಿದವು. ಅವು, ಹೇಮಾಳ ತಂದೆ, ತಾಯಿ, ಗಂಡ ಮತ್ತು ಮಗನದಾಗಿತ್ತು.

ಇಷ್ಟೊತ್ತಿಗೆ ಇಡೀ ಕ್ಲಾಸು ಸ್ತಬ್ಧವಾಗಿತ್ತು. ಏಕೆಂದರೆ, ಈ ಅಳಿಸುವ ಆಟ ಕೇವಲ ಹೇಮಾಳೊಬ್ಬಳಿಗೇ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟವಾಗಿತ್ತು.

ಈಗ, ಶಿಕ್ಷಕ ಪ್ರಮುಖ ಅನಿಸದ ಇನ್ನೆರಡು ಹೆಸರು ಅಳಿಸಲು ಹೇಳಿದ.

ಇದು ನಿಜಕ್ಕೂ ಸವಾಲಿನದಾಗಿತ್ತು.ಅತ್ಯಂತ ಕಷ್ಟದಿಂದ ಹೇಮಾ ತನ್ನ ತಂದೆ ತಾಯಿಗಳ ಹೆಸರುಗಳನ್ನು ಅಳಿಸಿದಳು.

ಉಳಿದಿದ್ದು ಗಂಡ ಮತ್ತು ಮಗನ ಹೆಸರುಗಳು ಮಾತ್ರ.

‘ದಯವಿಟ್ಟು ಹೇಮಾ, ಇನ್ನೊಂದು ಹೆಸರನ್ನೂ ಅಳಿಸಿ’

ನಿಸ್ತೇಜಳಾದಳು ಹೇಮಾ. ಕೈಗಳು ನಡುಗಲಾರಂಭಿಸಿದವು. ಕಣ್ಣುಗಳು ತುಂಬಿ ಬಂದವು. ಅಳುತ್ತಲೇ ಆಕೆ ತನ್ನ ಮಗನ ಹೆಸರನ್ನು ಅಳಿಸಿದಳು. ನಂತರ ಜೋರಾಗಿ ಅತ್ತುಬಿಟ್ಟಳು.

ಹೇಮಾಳನ್ನು ಆಕೆಯ ಸೀಟ್‌ನಲ್ಲಿ ಕೂರಲು ಹೇಳಿದ ಶಿಕ್ಷಕ ತರಗತಿ ಉದ್ದೇಶಿಸಿ ಕೇಳಿದ: ‘ನಿನ್ನ ಗಂಡನ ಹೆಸರನ್ನಷ್ಟೇ ಏಕೆ ಉಳಿಸಿಕೊಂಡೆ? ತಂದೆ ತಾಯಿ ನಿನಗೆ ಜನ್ಮವಿತ್ತು, ಸಾಕಿ ಸಲಹಿದವರು. ಇನ್ನು ಒಬ್ಬ ಮಗನಿಗೆ ನೀನೇ ಜನ್ಮವಿತ್ತಿದ್ದೀ. ಅವರ್ಯಾರೂ ನಿನಗೆ ಮತ್ತೆ ಸಿಗುವವರಲ್ಲ. ಆದರೆ, ಬೇಕೆಂದರೆ ಬೇರೊಬ್ಬನನ್ನು ನೀನು ಗಂಡನನ್ನಾಗಿ ಮಾಡಿಕೊಳ್ಳುವ ಅವಕಾಶ ಇದ್ದೇ ಇದೆ’

ಇಡೀ ತರಗತಿ ಉಸಿರು ಬಿಡದೇ ಹೇಮಾಳ ಉತ್ತರಕ್ಕಾಗಿ ಕಾಯುತ್ತಿತ್ತು.

ಹೇಮಾ ಶಾಂತಳಾಗಿ,ನಿಧಾನವಾಗಿ ಉತ್ತರಿಸಿದಳು:

‘ಒಂದಿನ ತಂದೆ ತಾಯಿ ನನ್ನನ್ನು ಬಿಟ್ಟು ಹೋಗುವರು.

‘ಮಗ ಕೂಡ ದೊಡ್ಡವನಾದ ಮೇಲೆ ತನ್ನ ಓದು, ಕೆಲಸ ಅಥವಾ ಇತರ ಕಾರಣಗಳಿಗಾಗಿ ನನ್ನನ್ನು ಬಿಟ್ಟು ಹೋಗಬಹುದು.

‘ಆದರೆ, ಗಂಡ ಜೀವನದುದ್ದಕ್ಕೂ ನನ್ನ ಜೊತೆಗೇ ಇರುವವನು’

ಇಡೀ ತರಗತಿ ಎದ್ದು ನಿಂತು ಚಪ್ಪಾಳೆ ತಟ್ಟಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X