Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬಂಟ್ವಾಳ: 3,987 ಬಿಪಿಎಲ್ ಪಡಿತರ ಚೀಟಿ...

ಬಂಟ್ವಾಳ: 3,987 ಬಿಪಿಎಲ್ ಪಡಿತರ ಚೀಟಿ ರದ್ದು!

ಬಂಟ್ವಾಳ ತಾಲೂಕಿನಲ್ಲಿ ಒಟ್ಟು 3,987 ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಿದ್ದು, ಇವುಗಳಲ್ಲಿ ವಿದ್ಯುತ್ ಬಿಲ್ ಹೆಚ್ಚು ಬಂದ ಕಾರಣಕ್ಕೆ 2,587 ಹಾಗೂ ನವೀಕರಿಸಿಕೊಳ್ಳದ ಕಾರಣಕ್ಕೆ 1,400 ಬಿಪಿಎಲ್ ಪಡಿತರ ಚೀಟಿಗಳು ರದ್ದುಗೊಂಡಿವೆ.

ಎಂ.ಇಮ್ತಿಯಾಝ್ ತುಂಬೆಎಂ.ಇಮ್ತಿಯಾಝ್ ತುಂಬೆ21 Dec 2015 3:21 PM IST
share
ಬಂಟ್ವಾಳ: 3,987 ಬಿಪಿಎಲ್ ಪಡಿತರ ಚೀಟಿ ರದ್ದು!

ರಾಜ್ಯ ಸರಕಾರದ ಗೊಂದಲಮಯ ನೀತಿ ಯಿಂದಾಗಿ ರಾಜ್ಯಾದ್ಯಂತ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗು ತ್ತಿದ್ದು, ಮಧ್ಯಮ ವರ್ಗದ ಕುಟುಂಬಗಳು ತೀವ್ರ ತೊಂದರೆ ಅನುಭವಿ ಸುವಂತಾಗಿದೆ. ಸರಕಾರದ ಹೊಸ ನಿಯಮಾವಳಿಯಂತೆ ಈಗಾಗಲೇ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 3,987 ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಿದ್ದು, ಇವುಗಳಲ್ಲಿ ವಿದ್ಯುತ್ ಬಿಲ್ ಹೆಚ್ಚು ಬಂದ ಕಾರಣಕ್ಕೆ 2,587 ಹಾಗೂ ನವೀಕರಿಸಿಕೊಳ್ಳದ ಕಾರಣಕ್ಕೆ 1,400 ಬಿಪಿಎಲ್ ಪಡಿತರ ಚೀಟಿಗಳು ರದ್ದುಗೊಂಡಿವೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ವೇಳೆ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬವೊಂದಕ್ಕೆ 1 ರೂ.ಗೆ 1 ಕೆ.ಜಿ.ಯಂತೆ 30 ಕೆ.ಜಿ. ಅಕ್ಕಿ ವಿತರಿಸುವ ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತಂದಿತ್ತು. ಅಲ್ಲದೆ, ಪ್ರತೀ ತಾಲೂಕು ಮಟ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಪಿಎಲ್ ಪಡಿತರ ಚೀಟಿ ಹಂಚುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು, ಮನೆನಂಬರ್, ಚುನಾವಣಾ ಚೀಟಿ ಸಹಿತ ಸೂಕ್ತ ದಾಖಲೆಗಳಿಲ್ಲದಿದ್ದರೂ ಕೇವಲ ವಾಸ್ತವ್ಯದ ಮನೆ ಹೊಂದಿದ ಆಧಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ರಾಜ್ಯಾದ್ಯಂತ ವಿತರಿಸಿದ್ದರು.

ಸರಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ಕೇವಲ ದಿನಸಿ ಸಾಮಾನು ಮಾತ್ರವಲ್ಲದೆ, ವೈದ್ಯಕೀಯ ಸೌಲಭ್ಯ ಸೇರಿದಂತೆ ಹತ್ತು ಹಲವು ಸವಲತ್ತುಗಳನ್ನು ಘೋಷಿಸಿತ್ತು. ಇದರಿಂದ ಸಹಜವಾಗಿಯೇ ಉತ್ಸಾಹಿತರಾದ ಮಧ್ಯಮ ಹಾಗೂ ಬಡ ವರ್ಗದ ಜನರು ದಂಬಾಲು ಬಿದ್ದು ಪಡಿತರ ಚೀಟಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದೀಗ ಅದೇ ಸರಕಾರ ಬಿಪಿಎಲ್ ಪಡಿತರ ಚೀಟಿ ಹೊಂದಿದವರ ಬಗ್ಗೆ ಪುನರ್ ಸರ್ವೇ ನಡೆಸಲು ಅಧಿಕಾರಿಗಳಿಗೆ ಸೂಚಿಸಿದೆ. ತಿಂಗಳಿಗೆ 450 ರೂ. ನಂತೆ ಹತ್ತು ತಿಂಗಳುಗಳಿಗೆ 4,500 ರೂ.ಗೂ ಹೆಚ್ಚು ವಿದ್ಯುತ್ ಬಿಲ್ ಪಾವತಿಸುವ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಸರಕಾರದ ಆದೇಶದ ಮೇರೆಗೆ ಇದೀಗ ಕಾರ್ಯಾಚರಣೆಗಿಳಿದಿರುವ ಅಧಿಕಾರಿಗಳು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುತ್ತಿದ್ದಾರೆ.

ಇನ್ನೊಂದೆಡೆ ಸರಕಾರ 100 ಸಿಸಿ ಗಿಂತ ಹೆಚ್ಚಿನ ಸಾಮರ್ಥ್ಯದ ವಾಹನ ಹೊಂದಿರುವ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿ ಗಳನ್ನು ಕೂಡಾ ರದ್ದುಗೊಳಿಸುವಂತೆ ಆದೇಶ ನೀಡಿದೆ. ಈ ನಿಯಮ ದಂತೆ ಆಟೊ ಚಲಾಯಿಸಿಕೊಂಡು ಕುಟುಂಬ ಪೋಷಣೆ ಮಾಡುವ ಮಧ್ಯಮ ವರ್ಗದ ಜನರ ಪಡಿತರ ಚೀಟಿಗಳು ಕೂಡಾ ರದ್ದಾಗುತ್ತಿದೆ. ದುಡಿದು ತಿನ್ನುವ ಮಧ್ಯಮ ವರ್ಗವೂ ಬಿಪಿಎಲ್ ಕುಟುಂಬ ಪಡಿತರ ಚೀಟಿಯಿಂದ ವಂಚಿತವಾಗುತ್ತಿದೆ.


10 ತಿಂಗಳಿಗೆ 4,500 ರೂ. ಗಿಂತ ಅಧಿಕ ವಿದ್ಯುತ್ ಬಿಲ್ ಕಾರಣಕ್ಕಾಗಿ ಬಂಟ್ವಾಳ ತಾಲೂಕಿನಾದ್ಯಂತ 2015ರ ನವೆಂಬರ್ 15ರವರೆಗೆ ಒಟ್ಟು 2,587 ಬಿಪಿಎಲ್ ಪಡಿತರ ಚೀಟಿಗಳು ರದ್ದುಗೊಂಡಿವೆ. ಅವು ಗಳೆಂದರೆ ಅರಳ ಹಾಗೂ ಅಮ್ಟಾಡಿ ಗ್ರಾಮದಲ್ಲಿ 22, ಕುರಿಯಾಳದಲ್ಲಿ 1, ಅರಳ 48, ಸಿದ್ದಕಟ್ಟೆ 34, ರಾಯಿ 18, ಪಂಜಿಕಲ್ಲು 2, ವಾಮಪದವು 25, ಅಜ್ಜಿಬೆಟ್ಟು 18, ಪಿಲಾತಬೆಟ್ಟು 34, ಕಜೆಕಾರು 19, ಕಾವಳಕಟ್ಟೆ 26, ವಗ್ಗ 39, ನಾವೂರು 32, ಅಲ್ಲಿಪಾದೆ 2, ಸರಪಾಡಿ 1, ಕಡೇಶ್ವಾಲ್ಯ 6, ಬಾಳ್ತಿಲ 9, ಪಾಣೆಮಂಗಳೂರು 94, ನರಿಕೊಂಬು 56, ಕಳ್ಳಿಗೆ 67, ಸಜಿಪಮುನ್ನೂರು 120, ಉಳಿ 6, ಮಣಿ ನಾಲ್ಕೂರು 6, ಬಡಗಬೆಳ್ಳೂರು 40, ಪೊಳಲಿ 136, ಬೆಂಜನಪದವು 20, ಮೇರಮಜಲು 7, ಕೊಡ್ಮಣ್ 233, ಪುದು 160, ತುಂಬೆ 132, ಚೇಳೂರು 22, ಸಜಿಪನಡು 105, ಸಜಿಪಮೂಡ 132, ಮಂಚಿ- ಕುಕ್ಕಾಜೆ 27, ನಂದಾವರ 109, ಮಂಚಿ 12, ಇರಾ 24, ಪಜೀರು 102, ಮುಡಿಪು 25, ಕೈರಂಗಳ 43, ನರಿಂಗಾನ 221, ಬಾಳೆಪುಣಿ 62, ಕೊಳ್ನಾಡು 11, ಬೋಳಂತೂರು 37, ಕುಡ್ತಮುಗೇರು 2, ಕೊಡಂಗಾಯಿ 8, ವೀರಕಂಭ 17, ಮಾಣಿ 6, ಪೆರ್ನೆ 3, ಕೆದಿಲ 4, ನೇರಳಕಟ್ಟೆ 4, ಮಿತ್ತೂರು 1, ಇಡ್ಕಿದು 6, ವಿಟ್ಲಮುಡ್ನೂರು 8, ವಿಟ್ಲ 49, ಅಡ್ಯನಡ್ಕ 4, ಪುಣಚ 5, ಪರಿಯಲ್ತಡ್ಕ 7, ಪೆರುವಾಯಿ 2, ಅಳಿಕೆ 4, ಬೈರಿಕಟ್ಟೆ-ಕನ್ಯಾನ 1, ಕರೋಪಾಡಿ-ಕನ್ಯಾನ 9, ಕನ್ಯಾನ 5, ಮಿತ್ತನಡ್ಕ 6, ಶಂಭೂರು 6, ಅಮ್ಟೂರು 16, ನಾರ್ಶ 23, ಧನುಪೂಜೆ 6, ಆಚಾರಿಪಲ್ಕೆ 5, ಅಜಿಲಮೊಗರು 1, ಪೇರಮೊಗರು 9, ಕಾವಳ ಪಡೂರು 10, ಬಂಟ್ವಾಳ 13, ಮೆಲ್ಕಾರ್ 3, ಶಾಂತಿಅಂಗಡಿ 1 ಹಾಗೂ ಬುಡೋಳಿಯಲ್ಲಿ 1 ಬಿಪಿಎಲ್ ಪಡಿತರ ಚೀಟಿಗಳು ರದ್ದುಗೊಂಡಿ ರುತ್ತವೆ ಎಂದು ತಾಲೂಕು ಕಚೇರಿಯ ಮೂಲಗಳು ಮಾಹಿತಿ ನೀಡಿವೆ.

ಬಿಪಿಎಲ್ ಕಾರ್ಡ್ ರದ್ದು ಸರಿಯಲ್ಲ
‘ಅನ್ನಭಾಗ್ಯ’ ಯೋಜನೆಯಡಿ ಉಚಿತ ಅಕ್ಕಿ ನೀಡುತ್ತಿರುವ ಸರಕಾರ ಆರ್ಥಿಕ ಹೊರೆಯಾಗುವುದನ್ನು ತಪ್ಪಿಸಲು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುತ್ತಿ ರುವ ಕ್ರಮ ಸರಿಯಲ್ಲ. 10 ತಿಂಗಳಿಗೆ 4,500 ರೂ.ಗಿಂತ ಹೆಚ್ಚಿನ ವಿದ್ಯುತ್ ಬಿಲ್ ಹಾಗೂ 100 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ವಾಹನ ಹೊಂದಿದ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದರಿಂದ ಮಧ್ಯಮ ವರ್ಗದ ಜನರು ಸರಕಾರದ ಇತರ ಸವಲತ್ತುಗಳಿಂದ ವಂಚಿತರಾಗುತ್ತಾರೆ. ಕೆಲವೊಂದು ವಿದ್ಯಾರ್ಥಿ ವೇತನ ಹಾಗೂ ಶಾಲಾ-ಕಾಲೇಜು ಪ್ರವೇಶ ಶುಲ್ಕದಲ್ಲಿ ರಿಯಾಯಿತಿಗೆ ಕೂಡಾ ಬಿಪಿಎಲ್ ಕಾರ್ಡ್ ಅಗತ್ಯವಾಗಿದ್ದು, ಕಾರ್ಡ್ ರದ್ದಾಗುವುದರಿಂದ ಮದ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ತೊಡಕುಂಟಾಗಲಿದೆ. ಆದ್ದರಿಂದ ಸರಕಾರ ತನ್ನ ಆದೇಶವನ್ನು ವಾಪಸ್ ಪಡೆದು ಮಧ್ಯಮ ವರ್ಗದ ಹಿತ ಕಾಯಬೇಕಾಗಿದೆ ಎಂದು ತುಂಬೆ ಗ್ರಾಪಂ ಸದಸ್ಯ ಝಹೂರ್ ಅಹ್ಮದ್ ಅಭಿಪ್ರಾಯಪಡುತ್ತಾರೆ.

ಪುನರ್ ಅರ್ಜಿ ಸಲ್ಲಿಸಲು ಅವಕಾಶ
10 ತಿಂಗಳಿಗೆ 4,500 ರೂ. ಗಿಂತಲೂ ಅಧಿಕ ವಿದ್ಯುತ್ ಬಿಲ್ ಬಂದರೆ ಬಿಪಿಎಲ್ ಪಡಿತರ ಚೀಟಿ ರದ್ದಾಗಲಿದೆ. 4,500 ರೂ. ಗಿಂತ ಅಧಿಕ ವಿದ್ಯುತ್ ಬಿಲ್ ಬಂದು ರದ್ದಾದ ಬಿಪಿಎಲ್ ಪಡಿತರ ಚೀಟಿಯವರು, ಮುಂದೆ ಮಿತವಾಗಿ ವಿದ್ಯುತ್ ಉಪಯೋಗಿಸಿ ತಿಂಗಳಿಗೆ 450 ರೂ.ಗಿಂತ ಕಡಿಮೆ ವಿದ್ಯುತ್ ಬಿಲ್ ಬಂದರೆ ಮತ್ತೊಮ್ಮೆ ಬಿಪಿಎಲ್ ಪಡಿತರ ಚೀಟಿಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ತಾಲೂಕು ಕಚೇರಿಯ ಆಹಾರ ಶಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

share
ಎಂ.ಇಮ್ತಿಯಾಝ್ ತುಂಬೆ
ಎಂ.ಇಮ್ತಿಯಾಝ್ ತುಂಬೆ
Next Story
X