Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹಳಿ ದಾಟಿದವರಿಗೆ ದಂಡ, ಹುಲಿ ಕೊಂದವರಿಗೆ...

ಹಳಿ ದಾಟಿದವರಿಗೆ ದಂಡ, ಹುಲಿ ಕೊಂದವರಿಗೆ ಹೆಚ್ಚು ಶಿಕ್ಷೆ

ಶ್ರಿನಿವಾಸ್ ಜೋಕಟ್ಟೆಶ್ರಿನಿವಾಸ್ ಜೋಕಟ್ಟೆ22 Dec 2015 7:59 PM IST
share
ಹಳಿ ದಾಟಿದವರಿಗೆ ದಂಡ, ಹುಲಿ ಕೊಂದವರಿಗೆ ಹೆಚ್ಚು ಶಿಕ್ಷೆ

ದಾನಿಗಳ ಸಹಾಯವನ್ನು ನಿರ್ಲಕ್ಷಿಸುತ್ತಿರುವ ರೈಲ್ವೆ

ರೈಲ್ವೆಮಂತ್ರಿ ಸುರೇಶ್ ಪ್ರಭು ಅವರ ಮನವಿಯ ಮೇರೆಗೆ ಅನೇಕ ಸಂಸ್ಥೆಗಳು ಮುಂಬೈಯ ರೈಲ್ವೆ ಸ್ಟೇಷನ್‌ಗಳಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದೆ ಬಂದಿವೆ. ಇವುಗಳಲ್ಲಿ ವ್ಯಾಪಾರಿಗಳ ಸಂಸ್ಥೆ ಭಾರತ್ ಮರ್ಚೆಂಟ್ಸ್ ಚೇಂಬರ್ ಕೂಡಾ ಒಂದು. ಇದು ಪಶ್ಚಿಮ ರೈಲ್ವೆಯ ಉಪನಗರ ರೈಲ್ವೆ ಸ್ಟೇಷನ್‌ಗಳಲ್ಲಿ ವಾಟರ್ ಕೂಲರ್ ದಾನ ಮಾಡಿತ್ತು. ಆದರೆ ಕೆಲವೇ ದಿನಗಳಲ್ಲಿ ವಾಟರ್ ಕೂಲರ್ ಸ್ಥಿತಿ ಶೋಚನೀಯವಾಯಿತು. ದಾನಿಗಳು ರೈಲ್ವೆಯ ಈ ನಿರ್ಲಕ್ಷ್ಯಕ್ಕೆ ಬೇಸರಗೊಂಡಿದ್ದಾರೆ.

ಮುಂಬೈ ಸೆಂಟ್ರಲ್‌ನ ಈ ವಾಟರ್ ಕೂಲರ್ ಅನ್ನು ಈ ವರ್ಷ ಎಪ್ರಿಲ್ 18ರಂದು ರೈಲ್ವೆ ಮಂತ್ರಿ ಸುರೇಶ್ ಪ್ರಭು ಉದ್ಘಾಟಿಸಿದ್ದರು. ಆದರೆ ಅದೀಗ ಕೆಲಸ ಮಾಡುತ್ತಿಲ್ಲ. ಇಲ್ಲಿನ ಶರ್ತದ ಪ್ರಕಾರ ದಾನ ಮಾಡಿದ ನಂತರ ಆ ಯಂತ್ರದ ಪೂರ್ಣ ಅಧಿಕಾರ ರೈಲ್ವೆಯದ್ದಾಗಿರುತ್ತದೆ. ಹೀಗಾಗಿ ಅದರ ಮೇಲ್ವಿಚಾರಣೆಯ ಜವಾಬ್ದಾರಿ ಕೂಡಾ ರೈಲ್ವೆಯದ್ದಾಗಿರುತ್ತದೆ. ಲೋವರ್ ಪರೇಲ್‌ನಲ್ಲಿ 2015ರ ಎಪ್ರಿಲ್‌ನಲ್ಲಿ ವಾಟರ್ ಕೂಲರ್ ತಾಗಿಸಲಾಗಿತ್ತು. ಅದರ ಮರುದಿನವೇ ಮೂರು ನಳ್ಳಿ ಕಾಣೆಯಾಗಿತ್ತು. 2 ಬಾರಿ ರೈಲ್ವೆ ತನ್ನ ವತಿಯಿಂದ ನಳ್ಳಿ ತಾಗಿಸಿತ್ತು. ಆದರೆ ಇಂದಿಗೂ ಈ ವಾಟರ್ ಕೂಲರ್‌ನಲ್ಲಿ ಯಾವುದೇ ನಳ್ಳಿ ಇಲ್ಲ!

ದಾನಿಗಳ ವಿಷಯದಲ್ಲಿ ರೈಲ್ವೆ ಇಷ್ಟು ನಿರ್ಲಕ್ಷ್ಯ ವಹಿಸಿದರೆ ಭವಿಷ್ಯದಲ್ಲಿ ಯಾರು ಸಹಾಯ ಮಾಡಲು ಮುಂದೆ ಬರುತ್ತಾರೆ? ಎನ್ನುತ್ತಾರೆ ಭಾರತ್ ಮರ್ಚೆಂಟ್ಸ್ ಚೇಂಬರ್‌ನ ರಾಜೀವ್ ಸಿಂಘಾಲ್. ಈ ಸಂಸ್ಥೆ ಪಶ್ಚಿಮ ರೈಲ್ವೆಗೆ 26 ವಾಟರ್ ಕೂಲರ್ ಯಂತ್ರಗಳನ್ನು ದಾನ ಮಾಡಿದೆ. ಅಕ್ಟೋಬರ್ 27ರಂದು ಚೇಂಬರ್ ವತಿಯಿಂದ ರೈಲ್ವೆಗೆ ಪತ್ರ ಬರೆದು ದಾನ ಮಾಡಲಾದ ಯಂತ್ರಗಳ ಸ್ಥಿತಿ ಶೋಚನೀಯವಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿತ್ತು. ಈ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲವಂತೆ.

* * *

ರೈಲು ಹಳಿ ದಾಟಿದವರಿಗೆ ದಂಡ

ಮುಂಬೈ ಉಪನಗರಗಳಲ್ಲಿ ಹೆಚ್ಚುತ್ತಿರುವ ರೈಲು ಪ್ರಯಾಣಿಕರ ಸಾವಿನ ಸಂಖ್ಯೆಯಿಂದ ಚಿಂತಿತರಾಗಿರುವ ಆರ್‌ಪಿಎಫ್ ಇದೀಗ ಪಶ್ಚಿಮ ಮತ್ತು ಮಧ್ಯ ರೈಲ್ವೆಯಲ್ಲಿ ವಿಶೇಷ ಅಭಿಯಾನ ನಡೆಸುತ್ತಿದೆ. ಈ ಯಾತ್ರಿ ಜಾಗರೂಕತಾ ಅಭಿಯಾನದಲ್ಲಿ ರೈಲು ಹಳಿ ದಾಟುವ ಪ್ರಯಾಣಿಕರ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸುತ್ತಿದೆ. ಮಧ್ಯ ಮತ್ತು ಪಶ್ಚಿಮ ರೈಲ್ವೆ ಆರ್‌ಪಿಎಫ್ ಕಳೆದ ಒಂದು ವಾರದಲ್ಲಿ ಹಳಿ ದಾಟಿದ 6,398 ರೈಲು ಪ್ರಯಾಣಿಕರನ್ನು ಬಂಧಿಸಿದ್ದಾರೆ.

ಪ್ರಯಾಣಿಕರು ರೈಲು ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಹೆಚ್ಚಿನ ದುರ್ಘಟನೆಗಳು ನಡೆಯುತ್ತಿವೆ. ಡಿಸೆಂಬರ್ 6ರಿಂದ ಪಶ್ಚಿಮ ರೈಲ್ವೆೆ ಮತ್ತು ಡಿಸೆಂಬರ್ 9ರಿಂದ ಮಧ್ಯರೈಲ್ವೆ ಆರ್‌ಪಿಎಫ್ ಅಭಿಯಾನ ನಡೆಸುತ್ತಿದೆ. ಬಂಧಿತ 6,398 ರೈಲು ಪ್ರಯಾಣಿಕರಿಂದ 25,24,500 ರೂಪಾಯಿ ತನಕ ದಂಡ ವಸೂಲಿ ಮಾಡಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಸಂಬಂಧಿಸಿದ ಸುರಕ್ಷಾ ಅಭಿಯಾನಕ್ಕಾಗಿ ಹೆಲ್ಪ್‌ಲೈನ್ ನಂಬರ್ 1311 ಚಾಲನೆಯಲ್ಲಿದೆ. ಇತ್ತೀಚೆಗೆ ಮಧ್ಯರೈಲ್ವೆಯಲ್ಲಿ ಓರ್ವ ಯುವಕ ಕೆಳಗೆ ಬಿದ್ದು ಸಾವನ್ನಪ್ಪಿದ್ದು ಅದುವೀಡಿಯೊ ವೈರಲ್ ಆದ ನಂತರ ರೈಲ್ ಮಂತ್ರಿ ಸಮಿತಿ ರಚಿಸಿದ್ದಾರೆ. ಇತ್ತ ಹೈಕೋರ್ಟ್ ಲೋಕಲ್ ರೈಲ್‌ನಲ್ಲಿ ಪ್ರಯಾಣಿಕರ ನೂಕುನುಗ್ಗಲು ಕಡಿಮೆ ಮಾಡಲು ಸರಕಾರಕ್ಕೆ ಕಚೇರಿ ಸಮಯ ಬದಲಿಸಲು ಸಲಹೆ ನೀಡಿದೆ. ಆರ್‌ಪಿಎಫ್ ಕಾರ್ಯಾಚರಣೆ ನಂತರ ಪ್ರತಿದಿನ, 10 ಜನ ಸಾಯುತ್ತಿದ್ದವರು ಈಗ 3, 4ಕ್ಕೆ ಇಳಿದಿದೆ.

* * *
ಮುಂಬೈ ವಿ.ವಿ.ಯಲ್ಲಿ ಬಾಳಾ ಠಾಕ್ರೆ ಅಧ್ಯಯನ ಕೇಂದ್ರ

ಮಹಾರಾಷ್ಟ್ರ ರಾಜ್ಯ ಸರಕಾರವು ಮುಂಬೈ ಯುನಿವರ್ಸಿಟಿಯಲ್ಲಿ ಶಿವಸೇನಾ ಪ್ರಮುಖ ದಿ. ಬಾಳಾ ಸಾಹೇಬ ಠಾಕ್ರೆಯವರ ಹೆಸರಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ತೀರ್ಮಾನಿಸಿದೆ. ಈ ಅಧ್ಯಯನ ಕೇಂದ್ರದ ಸ್ಥಾಪನೆಗಾಗಿ ಸರಕಾರವು ಒಂದು ಕೋಟಿ ರೂಪಾಯಿಯನ್ನು ಇರಿಸಿದೆ. ವಿಧಾನ ಮಂಡಲದ ಶೀತಕಾಲೀನ ಅಧಿವೇಶನದಲ್ಲಿ ಮಂಡಿಸಲಾದ 16ಸಾವಿರ ಕೋಟಿ ರೂಪಾಯಿ ಪೂರಕ ಬೇಡಿಕೆಗಳಲ್ಲಿ ಅಧ್ಯಯನ ಕೇಂದ್ರದ ಸ್ಥಾಪನೆಗಾಗಿ ಒಂದು ಕೋಟಿ ರೂಪಾಯಿಯ ಬೇಡಿಕೆ ಇಡಲಾಯಿತು.

ಈ ಅಧ್ಯಯನ ಕೇಂದ್ರದಲ್ಲಿ ಬಾಳಾ ಠಾಕ್ರೆಯವರ ಸಾಹಿತ್ಯದ ಅಧ್ಯಯನ ಮಾಡಬಹುದಾಗಿದೆ. ಇದರಲ್ಲಿ ಅವರು ಬರೆದ ಲೇಖನಗಳು, ಮೊದಲ ವ್ಯಂಗ್ಯ ಸಾಪ್ತಾಹಿಕ ಮಾರ್ಮಿಕ್ ಮತ್ತು ಅವರು ರಚಿಸಿದ ವ್ಯಂಗ್ಯ ಚಿತ್ರಗಳ ಜೊತೆ ವಿಭಿನ್ನ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಷಯಗಳಲ್ಲಿ ಸಾಂದರ್ಭಿಕ ಪರಿಸ್ಥಿತಿಗಳ ಅನುಸಾರ ಅವರ ವಿಚಾರಗಳು, ಪ್ರಭಾವ..... ಇತ್ಯಾದಿಗಳ ಅಧ್ಯಯನ ನಡೆಸಬಹುದಾಗಿದೆ.

* * *

ಮುಂಬೈಯಲ್ಲಿ ಎಸಿ ಬಸ್ಸುಗಳ ಓಡಾಟ ನಿಲ್ಲಿಸಲು ಆಗ್ರಹ

ಮುಂಬೈ ಮಹಾನಗರ ಪಾಲಿಕೆಯ ಬೆಸ್ಟ್ ಸಮಿತಿಯ ಬೈಠಕ್‌ನಲ್ಲಿ ಎಸಿ ಬಸ್ಸುಗಳನ್ನು ಬಂದ್ ಮಾಡುವಂತೆ ಆಗ್ರಹಿಸಲಾಗಿದೆ. ಎಸಿ ಬಸ್ಸುಗಳ ಕಾರಣ ಪ್ರತೀ ವರ್ಷ 27 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇಂದು ಮುಂಬೈ ಮಹಾನಗರದಲ್ಲಿ 280ರಲ್ಲಿ ಕೇವಲ 109 ಎಸಿ ಬಸ್ಸುಗಳಷ್ಟೇ ಓಡಾಡುತ್ತಿವೆ. ಪ್ರತೀ ದಿನ ಕೇವಲ 8 ಸಾವಿರ ಪ್ರಯಾಣಿಕರು ಮಾತ್ರ ಎಸಿ ಬಸ್ಸುಗಳನ್ನು ಬಳಸುತ್ತಿದ್ದಾರೆ.

ಕಾಂಗ್ರೆಸ್‌ನ ನಗರ ಸೇವಕರಾದ ರವಿರಾಜಾ ಅವರು ಎಸಿ ಬಸ್ಸುಗಳನ್ನು ಬಂದ್ ಮಾಡುವ ಬೇಡಿಕೆಯನ್ನು ಮುಂದಿಟ್ಟು ನೋಟಿಸ್ ಅಫ್ ಮೋಶನ್ ಮಂಡಿಸಿದ್ದರು. ಈ ಬಗ್ಗೆ ಚರ್ಚೆ ನಡೆಸಿದ ಆಡಳಿತ ಪಕ್ಷಗಳಾದ ಶಿವಸೇನೆ - ಬಿಜೆಪಿ ಸಹಿತ ಎಸ್‌ಪಿ, ಎಂಎನ್‌ಎಸ್ ಅವರೂ ಎಸಿ ಬಸ್ಸುಗಳ ಕಾರಣ ಆಡಳಿತಕ್ಕೆ ಪ್ರತೀ ವರ್ಷ 27 ರಿಂದ 28 ಕೋಟಿ ರೂಪಾಯಿಯ ನಷ್ಟವಾಗುತ್ತಿರುವುದರಿಂದ ಬಂದ್ ಮಾಡುವುದೇ ಒಳ್ಳೆಯದು ಎಂದರು.

ಬೆಸ್ಟ್‌ನ ಆರ್ಥಿಕ ಸ್ಥಿತಿ ಸುಧಾರಿಸಲು ಬೆಸ್ಟ್ ಆಡಳಿತಕ್ಕೆ ಉಚಿತ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಬೆಸ್ಟ್ ಸಮಿತಿಯ ಸದಸ್ಯ ಶಿವಾಜಿ ಸಿಂಗ್ ತಿಳಿಸಿದಂತೆ ಬೆಸ್ಟ್ ಸಾರಿಗೆ ವಿಭಾಗದ ಬಳಿ ಹತ್ತು ವರ್ಷದ ಹಳೆಯ ಬಸ್ಸುಗಳೇ ಇವೆ. ನಿಯಮದಂತೆ ಎಂಟು ವರ್ಷಗಳ ನಂತರದ ಹಳೆಯ ಬಸ್ಸುಗಳನ್ನು ಬಳಸಬಾರದು. ಹೀಗಾಗಿ ಹತ್ತು ವರ್ಷ ಹಳೆಯ ಬಸ್ಸುಗಳು ರಸ್ತೆಯಲ್ಲಿ ಓಡಾಡಲು ಯೋಗ್ಯವಿದೆಯೇ? ಎಂಬ ಬಗ್ಗೆ ಉತ್ತರಿಸಬೇಕಾಗಿದೆ.

ಇತ್ತ ಶಿವಸೇನೆಯ ನಗರ ಸೇವಕ ಸುನೀಲ್ ಗಣಾಚಾರ್ಯ ಹೇಳುತ್ತಾರೆ: ಎಸಿ ಬಸ್ಸುಗಳನ್ನು 3 ಲಕ್ಷಕ್ಕೂ ಖರೀದಿಸಲು ಯಾರೂ ತಯಾರಿಲ್ಲ. ಬೆಸ್ಟ್ ಆಡಳಿತ 65 ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ಎಸಿ ಬಸ್ಸನ್ನು ಖರೀದಿಸಿತ್ತು. ಬೆಸ್ಟ್ ಆಡಳಿತವು ವಾರದಲ್ಲಿ ಎರಡು ದಿನ ಎಸಿ ಡೇ ಹೆಸರಲ್ಲಿ ಬಸ್ಸುಗಳನ್ನು ಓಡಿಸಬೇಕು. ಆವಾಗ ಜನರಿಗೆ ಎಸಿ ಬಸ್ಸುಗಳ ಆನಂದವನ್ನು ಸವಿಯಬಹುದಾಗಿದೆ. ಹಾಗೂ ಬೆಸ್ಟ್ ಆಡಳಿತಕ್ಕೆ ಆದಾಯವೂ ದೊರೆಯಲಿದೆ ಎಂದಿದ್ದಾರೆ.

ಜನವರಿ 2016ರಿಂದ ಎಸಿ ಬಸ್ಸುಗಳಿಗಾಗಿ ಹ್ಯಾಪಿ ಅವರ್ಸ್ ಆರಂಭಿಸಬೇಕು. ಅದರಂತೆ ನೂರು ರೂಪಾಯಿಗೆ ದಿನವಿಡೀ ತಿರುಗಲು ಪ್ರಯಾಣಿಕರಿಗೆ ಅವಕಾಶ ಕೊಡಬೇಕು ಎಂದು ಬೆಸ್ಟ್ ಸಮಿತಿ ಸದಸ್ಯ ಶಿವಾಜಿ ಸಿಂಗ್ ಒತ್ತಾಯಿಸಿದ್ದಾರೆ. ಇದೀಗ ಪಬ್ಲಿಕ್ ರೆಸ್ಪಾನ್ಸ್ ನಂತರ ಯೋಜನೆಗಳು ಕಾರ್ಯರೂಪಕ್ಕೆ ತರಲು ಬೆಸ್ಟ್ ಜನರಲ್ ಮ್ಯಾನೇಜರ್ ಜಗದೀಶ್ ಪಾಟೀಲ್ ನಿರ್ಧರಿಸಿದ್ದಾರೆ.

* * *

ಹುಲಿ ಕೊಂದವರ ಶಿಕ್ಷೆ ವೃದ್ಧಿ

 ಮಹಾರಾಷ್ಟ್ರ ರಾಜ್ಯ ಸರಕಾರವು ಹುಲಿಗಳನ್ನು ಕೊಲ್ಲುವ ವ್ಯಕ್ತಿಗಳಿಗೆ 7 ವರ್ಷದ ಸಜೆಯನ್ನು ವೃದ್ಧಿಗೊಳಿಸಿ 10 ವರ್ಷ ಮಾಡಿದೆ. ಮತ್ತು ದಂಡ 25 ಸಾವಿರದ ಬದಲು 5 ಲಕ್ಷ ರೂ. ಮಾಡಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ರಾಜ್ಯವು ಪತ್ರ ಬರೆದಿದೆ. ಜೊತೆಗೆ ಹುಲಿಗಳ ಸಂರಕ್ಷಣೆ ಬಗ್ಗೆ ವಿಶೇಷ ಗಮನ ನೀಡಲಾಗಿದೆ ಎಂದು ಅರಣ್ಯ ಮಂತ್ರಿ ಸುಧೀರ್ ಮುನ್‌ಗಂಟೀವಾರ್ ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ.

2013ರಲ್ಲಿ 3 ಹುಲಿಗಳನ್ನು ಹತ್ಯೆ ನಡೆಸಲಾಗಿತ್ತು. ಆ ಸಮಯ 17 ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಎಲ್ಲ ಆರೋಪಿಗಳ ತನಿಖೆ ಈಗಲೂ ಮುಂದುವರಿಯುತ್ತಿದೆ.

* * *

ಬೀದಿ ನಾಯಿಗಳ ಹತ್ಯೆ ಮತ್ತು ನಸ್‌ಬಂದೀ ಚರ್ಚೆ

ಕಳೆದ ಹಲವು ವರ್ಷಗಳಿಂದ ಮುಂಬೈ ಜನಕ್ಕೆ ಬೀದಿ ನಾಯಿಗಳ ಭಯ ಹೆಚ್ಚಾಗಿದೆ. ಮುಂಬೈ ಮಹಾನಗರದಲ್ಲಿ ಬೀದಿ ನಾಯಿಗಳ ಕಾಟ ಶೀಘ್ರವೇ ಸಮಾಪ್ತಿಯಾಗಲಿದೆ ಎಂದಿತ್ತು ಕೆಲವು ದಿನಗಳ ಹಿಂದೆ ಮಹಾನಗರಪಾಲಿಕೆ ಮೂಲಗಳು. ಆದರೆ ಇದು ಕಾರ್ಯಗತವಾಗಿಲ್ಲ. ಸುಪ್ರೀಂ ಕೋರ್ಟ್‌ನ ಅನುಮತಿಯ ನಂತರ ಮಹಾನಗರ ಪಾಲಿಕೆಯು ಬೀದಿ ನಾಯಿಗಳನ್ನು ಕೊಲ್ಲಲು ತಯಾರಿ ನಡೆಸಿತ್ತು. ಯಾವ ಕ್ಷೇತ್ರದಲ್ಲಿ ಬೀದಿ ನಾಯಿಗಳು ಕಚ್ಚುವ ದೂರುಗಳು ಬರುತ್ತವೆಯೋ ಅಲ್ಲಿಗೆ ಮಹಾನಗರ ಪಾಲಿಕೆಯ ಒಂದು ಟೀಮ್ ತಲುಪುವುದು. ಹಾಗೂ ಅಂತಹ ಬೀದಿ ನಾಯಿಗಳಿಗೆ ವಿಷ ನೀಡಿ ಸಾಯಿಸಲು ಮುಂದಾಗಲಿದೆ ಎಂದು ಪ್ರಚಾರವಾಯಿತು. ಆದರೆ ಈ ಸಂಗತಿ ಅನಂತರ ಸುಳ್ಳು ಎನ್ನಲಾಯ್ತು! ಮುಂಬೈಯಲ್ಲಿ ಪ್ರತೀದಿನ ಸರಾಸರಿ 150 ಜನರಿಗೆ ಬೀದಿನಾಯಿ ಕಚ್ಚುತ್ತಿವೆ. ನಸ್‌ಬಂದಿ ನಿಲ್ಲಿಸಿದ್ದ ಕಾರಣ ಕಳೆದ 2 ವರ್ಷಗಳಲ್ಲಿ 50 ಸಾವಿರ ಬೀದಿನಾಯಿಗಳು ವೃದ್ಧಿಯಾಗಿವೆ.

ಅಂಕಿಅಂಶದಂತೆ ಕಳೆದ 21 ವರ್ಷಗಳಲ್ಲಿ 429 ಜನರು ಬೀದಿ ನಾಯಿಗಳ ಕಾರಣ ಸಾವನ್ನಪ್ಪಿದ್ದಾರೆ. ಈ 21 ವರ್ಷಗಳಲ್ಲಿ 13,12,160 ಜನರಿಗೆ ಬೀದಿನಾಯಿ ಕಚ್ಚಿತ್ತು. ಇವರಲ್ಲಿ 429 ಜನ ಸತ್ತಿದ್ದಾರೆ. ಕಳೆದ ವರ್ಷ 2014ರ ತುಲನೆಯಲ್ಲಿ ಬೀದಿ ನಾಯಿಗಳು ಕಚ್ಚಿದ ಘಟನೆಗಳು ಕಡಿಮೆ ವರದಿಯಾಗಿವೆ. ಹಾಗಿದ್ದೂ ಜನವರಿಯಿಂದ ಅಕ್ಟೋಬರ್ 2015 ತನಕ ಹತ್ತು ತಿಂಗಳಲ್ಲಿ 46,647 ಜನರಿಗೆ ಬೀದಿ ನಾಯಿಗಳು ಕಚ್ಚಿವೆ. ಇವರಲ್ಲಿ ಐವರು ಸಾವನ್ನಪ್ಪಿದ್ದಾರೆ. 2014ರಲ್ಲಿ 81,165 ಜನರಿಗೆ ಬೀದಿ ನಾಯಿ ಕಚ್ಚಿತ್ತು.

ಮನಪಾ ಮೂಲಗಳಿಂದ ತಿಳಿದು ಬಂದಂತೆ ಆರೋಗ್ಯ ವಿಭಾಗವು ಈ ತನಕ 96,112 ಬೀದಿ ನಾಯಿಗಳಿಗೆ ನಸ್‌ಬಂದಿ ಮಾಡ ಬೇಕಿದ್ದರೂ 69,239 ನಾಯಿಗಳಿಗೆ ಮಾತ್ರ ಮಾಡಲಾಗಿದೆ. ಈ ಬೀದಿ ನಾಯಿಗಳ ಕಾರಣ ಬೈಕ್ ಸವಾರರು ಕೂಡಾ ಹೆಚ್ಚಿಗೆ ಕಿರಿಕಿರಿ ಅನುಭವಿಸುತ್ತಿದ್ದಾರೆ.

share
ಶ್ರಿನಿವಾಸ್ ಜೋಕಟ್ಟೆ
ಶ್ರಿನಿವಾಸ್ ಜೋಕಟ್ಟೆ
Next Story
X