ಅಂಬೆಡ್ಕರ್ ಭವನದ ಹೆಸರಿಗೆ ಮಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಇಲ್ಲಿನ ಹಳೆಯಂಗಡಿ ಇಂದಿರಾನಗರದಲ್ಲಿರುವ ಅಂಬೆಡ್ಕರ್ ಭವನದ ಹೆಸರಿಗೆ ಕಳೆದ ಡಿ 13 ರಂದು ಪಂಚಾಯತ್ ಅಧಿಕಾರಿಗಳು ಹಾಗೂ ಪಂಚಾಯತ್ ಪ್ರತಿನಿಧಿಗಳು ಮಸಿ ಬಳಿದು ದಲಿತ ಸಮುದಾಯ ಹಾಗೂ ಸಂವಿದಾನ ಶಿಲ್ಪಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯ ದಲಿತ ಸಂಘರ್ಷ ಸಮಿತಿಗಳು ಬುಧವಾರ ಹಳೆಯಂಗಡಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿತು.
ಈ ಸಂದರ್ಭ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ದಡ್ಡಲ್‌ಕರ್, ಗ್ರಾಮ ಪಂಚಾಯತ್ ಕೇವಲ ಸಂವಿದಾನ ಶಿಲ್ಪಿ, ದಲಿತರ ದೇವರು ಅಂಬೆಡ್ಕರ್ ಅವರ ಹೆಸರಿಗೆ ಮಾತ್ರ ಅವಮಾನ ಮಾಡಿರುವುದಲ್ಲ. ಸಂವಿದಾನಕ್ಕೆ ಅವಮಾನ ಮಾಡಿದ್ದಾರೆ ಎಂದರು.
ದಲಿತರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿದ ಅವರು, ಮಸಿ ಬಳಿದವರ ವಿರುದ್ಧ ಶೀಘ್ರ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗ ಬೇಕು ಇಲ್ಲವಾದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ಸಂಗಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ಕಾರರನ್ನುದ್ದೇಶಿಸಿ ಮಾತನಾಡಿದ ಪರಿಶಿಷ್ಟ ಜಾತಿ ಪಂಗಡಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರ ಕಾಂತ್, ಹಳೆಯಂಗಡಿ ಇಂದಿರಾನಗರದಲ್ಲಿರುವ ಸಭಾಭವನ ದೇವರಾಜ ಅರಸು ಅವರ ಕೊಡುಗೆ, ಇದನ್ನು ಪಂಚಾಯತ್ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಅಲ್ಲದೆ, ಪಂಚಾಯತ್ ಸಮುದಾಯದ ಏಳಿಗೆಗೆ ಬಳಸಬೇಕಾಗಿರುವ ಸರಕಾರಿ ನಿಧಿಯನ್ನು ದುರುಪಯೋಗ ಪಡಿಸಿಕೊಮಡಿರುವ ಬಗ್ಗೆ ದಾಖಲಡಗಳು ಇವೆ ಎಂದರು.
ಪಂಚಾಯತ್‌ನಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದ ಅವರು, ಪಂಚಾಯತ್‌ನ ಸದಸ್ಯರೊಬ್ಬರ ಮಾತಿನಂತೆ ಅಧಿಕಾರಿಗಳನ್ನು ಗೊಮಬೆಗಳಂತೆ ನಡೆಯುತ್ತಿದ್ದಾರೆ. ಪಂಚಾಯತ್ ಸದಸ್ಯ ವಸಂತ್ ಬೆರ್ನಾರ್ಡ್ ಎಂಬವರು ಹಲವು ಬಾರಿ ಜಾತಿನಿಂದನೆ ಮಾಡುತ್ತಿದ್ದಾರೆ ಎಂದು ನೇರ ಆರೋಪಿಸಿದ ಅವರು, ಕೊನೆಯ ಎಚ್ಚರಿಕೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಕಾರರು ಮನವಿ ನೀಡಲು ಮುಂದಾದಾಗ ಪಂಚಾತ್ ಅಧಿಕಾರಿ ಮನವಿ ಪಡೆಯಲು ಹಿಂದೆಟು ಹಾಕಿದ್ದು ಸ್ದಳದಲ್ಲಿ ಸ್ವಲ್ಪ ಬುಗುವಿನ ವಾತಾವರಣ ನಿರ್ಮಾಣಕ್ಕೆ ಕಾರಣ ವಾಯಿತು. ಕೊನೆಗೆ ಪೊಲೀಸರು ಮಧ್ಯಸ್ಥಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಬಂದು ಪ್ರತಿಭಟನಾ ಕಾರರಿಮದ ಮನವಿ ಸ್ವೀಕರಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಬಳಿಕ ಮುಲ್ಕಿ ಪೊಲೀಸ್ ನಿರೀಕ್ಷಕರನ್ನು ಭೇಟಿ ಮಾಡಿದ ದಲಿತ ಸಂಘರ್ಷ ಸಮಿತಿ, ಮಸಿ ಬಳಿದವರನ್ನು ಗುರುವಾರ ಮಧ್ಯಾಹ್ನದ ಒಳಗಾಗಿ ಬಂಧಿಸಬೇಕು ಇಲ್ಲದಿದ್ದಲ್ಲಿ ಠಾಣೆಗೆ ಮುತ್ತಿಗೆ ಹಾಕುವುದಾಗಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಆನಂದ್ ಕೆರೆಕಡು, ಚಂದ್ರ ಕುಮಾರ್, ಕೆರೆಕಾಡು ಘಟಕಾಧ್ಯಕ್ಷ ಜಯ ಕೆರೆಕಾಡು, ಕೆರೆಕಾಡು, ಕೊಲ್ನಾಡು, ಹಳೆಯಂಗಡಿ, ಸುರತ್ಕಲ್ ಪರಿಸರದ ದಲಿತ ಸಂಘರ್ಷ ಸಮಿತಿಗಳ ಪದಾದಿಕಾರಿಗಳು ಸದಸ್ಯರಿ ಭಾಗವಹಿಸಿದ್ದರು.
ಪಿಡಿಒಗೆ ನಿಂದನೆ:
ಪ್ರತಿಭಟನೆಯ ವೇಳೆ ಮನವಿ ಸ್ವೀಕರಿಸಲು ಹಿಂದೇಟು ಹಾಕಿದ ಗ್ರಾಮ ಪಂಚಾಯತ್ ಪಿಡಿಒ ಅವರನ್ನು ಪ್ರತಿಭಟನಾ ನಿರತರು ತರಾಟೆಗೆ ತೆಗೆದು ಕೊಳ್ಲುತ್ತಿದ್ದಾಗ ನಾಯಕರು ಸುಮ್ಮನಿರಲು ಹೇಳಿದರೂ ಕೇಳದ ಕೆಲವೊಬ್ಬರು ಪಿಡಿಒ ಅವರನ್ನು ಏಕವಚನದಲ್ಲಿ ಸಂಭೋದಿಸುವ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಪ್ರಸಂಗವೂ ನಡೆಯಿತು.
ಘಟನೆಯಲ್ಲಿ ರಾಜಕೀಯ : ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ ಎನ್ನುವ ಆರೋಪಗಳಿದ್ದು, ಬುಧವಾರ ನಡೆದ ಪ್ರತಿಭಟನೆಯಲ್ಲೂ ಬಿಜೆಪಿಯ ಹಲವು ಮುಖಂಡರು ಕಾಣಿಸಿಕೊಳ್ಳುವ ಮೂಲಕ ಆರೋಪ ಸಾಬೀತಾದಂತಾಗಿದೆ. ಅಲ್ಲದೆ, ಬಿಜೆಪಿ ಈ ಪ್ರಕರಣದ ಲಾಭ ಪೆರದು ಕೊಂಡು ತಾಲೂಕಿ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ದಲಿತರ ಮತಪಡೆಯುವ ಲೆಕ್ಕಾಚಾರ ಹಾಕುತ್ತಿದೆ ಎನ್ನಲಾಗಿದೆ.







