ಐಎಫ್ಎಫ್ ರಿಯಾದ್ ಇದರ ವತಿಯಿಂದ ರಕ್ತದಾನ ಶಿಬಿರ.

ಇಂಡಿಯಾ ಫ್ರೆಟರ್ನಿಟಿ ಫೋರಮ್ ರಿಯಾದ್ ಇದರ ವತಿಯಿಂದ ಡಿಸೆಂಬರ್ 18 ರ ಶುಕ್ರವಾರದಂದು "Healthy life Happy Life" ಅಭಿಯಾನ - 2015" ಇದರ ಪ್ರಯುಕ್ತ ರಕ್ತ ದಾನ ಶಿಬಿರವನ್ನು ರಿಯಾದಿನ ದಬಾಬ್ ಸ್ಟ್ರೀಟ್ ನಲ್ಲಿರುವ ಕಿಂಗ್ ಫಹದ್ ಮೆಡಿಕಲ್ ಸಿಟಿಯ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿತ್ತು.
ಇಂಡಿಯಾ ಫ್ರೆಟರ್ನಿಟಿ ಫೋರಮ್ ರಿಯಾದ್ ರೀಜನ್ ಪ್ರಧಾನ ಕಾರ್ಯದರ್ಶಿ ಜುನೈದ್ ಅನ್ಸಾರಿರವರು ರಕ್ತ ದಾನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಭಾರತದ ವಿವಿಧ ರಾಜ್ಯಗಳ ಅನಿವಾಸಿ ಭಾರತೀಯರು ಬಹಳ ಉತ್ಸಾಹದಿಂದ ಆಗಮಿಸಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಸುಮಾರು 300 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು. ಕಾರ್ಯಕ್ರಮವನ್ನು ಇಂಡಿಯಾ ಫ್ರೆಟರ್ನಿಟಿ ಫೋರಮ್ ರಿಯಾದ್ ಇದರ ದೆಹಲಿ ಕೋಡಿನೇಟರ್ ರಮ್ಸುದ್ದೀನ್ ರವರು ನಿರ್ವಹಿಸಿದರು.
ಅಗತ್ಯವಿರುವವರಿಗೆ ಸಾರಿಗೆ ವ್ಯವಸ್ತೆಯನ್ನು ಕಲ್ಪಿಸಲಾಗಿತ್ತು. ರಕ್ತ ದಾನಿಗಳಿಗೆ ಫಲಾಹಾರ ವ್ಯವಸ್ಥೆ ಮಾಡಲಾಗಿತ್ತು.
Next Story





