ನಾನು ಕ್ಷಮೆ ಕೇಳುವಂಥಹದ್ದೇನನ್ನೂ ಹೆಳಿಲ್ಲ: ಶಾರುಖ್ ಖಾನ್.

ನಾನು ಕ್ಷಮೆ ಕೇಳುವಂಥಹದ್ದೇನನ್ನೂ ಹೆಳಿಲ್ಲ, ಆದರೆ, 'ದಿಲ್ ವಾಲೆ' ಗಳಿಕೆಗೆ ಹೊಡೆತ ಬಿದ್ದಿದೆ': ಶಾರುಖ್ ಖಾನ್.
ಕೊಲ್ಕತಾ: 'ನಾನು ಕ್ಷಮೆ ಕೇಳುವಂತಹದ್ದೇನನ್ನೂ ಹೇಳಿಲ್ಲ' ಎಂದು ಬಾಲಿವಡ್ ಸೂಪರ್ ಸ್ಟಾರ್ ಶಾ ರುಖ್ ಖಾನ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, 'ಅಸಹಿಷ್ಣತೆಯ ಮೇಲಿನ ನನ್ನ ಹೇಳಿಕೆಯನ್ನು ತಿರುಚಿ ತಪ್ಪಾಗಿ ಪ್ರತಿಬಿಂಭಿಸಿ ಪ್ರತಿಭಟನೆ ನಡೆಸಿದ ಪರಿಣಾಮ 'ದಿಲ್ ವಾಲೆ' ಸಿನಾಮದ ಗಳಿಗೆಯ ಮೇಲೆ ಒರಿಣಾಮ ಬೀರಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಅವರು ತನ್ಬ ದಿಲ್ ವಾಲೆ ಹೊಸ ಸಿನಿಮಾದ ಕುರಿತ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತದ್ದರು.
ಸಿನಿಮಾದ ವಿರುದ್ಧವಾಗಿ ನಡೆಯುತ್ತಿರುವ ಪ್ರತಿಭಟನೆಗೆ ಆತಂಕ ವ್ಯಕ್ತಪಡಿಸಿದ ಅವರು, ನಾವು ಮಾಡಿದ ಕೆಲಸ ಜನರಿಗೆ ತಲುಪದಿದ್ದಾಗ ಬೇಸರವಾಗುತ್ತದೆ, ಅದು ತಲುಪಿದಾಗ ಮಾತ್ರ ಜನರ ಪ್ರೀತಿ ನಮಗೆ ದೊರೆಯುತ್ತದೆ ಹಾಗಾಗಿ ಸಿನಿಮಾ ನೋಡಿ ಸಂತೋಷ ಪಡಬೇಕೆಂದು ತನ್ನ ಅಭಿಮಾನಿಗಳಿಗೆ ಶಾರುಖ್ ಮನವಿ ಮಾಡಿಕೊಂಡರು.
ಅಸಹಿಷ್ಣುತೆಯ ಮೇಲಿನ ನನ್ನ ಅಭಿಪ್ರಾಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದಕ್ಜೆ ವಿಷಾದ ವ್ಯಕ್ತಪಡಿಸಿದರು. ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿದ್ದರಿಂದ ಜನರ ಭಾವನೆಗೆ ನೋವಾಗಿದ್ದರೆ, ಅದಕ್ಕಾಗಿ ತಾನು ವಿಷಾದಿಸುವುದಾಗಿ ತಿಳುಸಿದರು.
'ಸಿನಿಮಾ ನೋಡಲು ಕೆಲವರಿಂದ ಅಡಚಣೆಯಾಗಿರುವುದಕ್ಕೆ ನಾನು ಕ್ಷಮೆ ಕೋರುತ್ತೇನೆ. ದಯವಿಟ್ಡು ಸಿನಿಮಾ ನೋಡಿ ಸಂತೋಷಪಡಿ, ಕಾರಣ ಇದು ನನ್ನೊಬ್ಬನ ಸಿನಿಮಾ ಅಲ್ಲ, ಸಾವಿರಾರು ಜನ ಸೇರಿ ತುಂಬಾ ಪ್ರೀತಿಯಿಂದ ಮಾಡಿರುವ ಸಿನಿಮಾ ಇದು ಎಂದಿದ್ದಾರೆ.
ಶಾರುಖ್ ಖಾನ್ ರವರ ಧಾರ್ಮಿಕ ಅಸಹಿಷ್ಣುತೆಯ ಮೇಲಿನ ಹೇಳಿಕೆಯಿಂದ ಸಿಟ್ಟಿಗೆದ್ದಿರುವ ಬಜರಂಗದಳ ಕಾರ್ಯಕರ್ತರು, ಪಟ್ನ, ಗಾಜಿಯಾಬಾದ್, ವಾರಣಾಸಿ, ಜಬಲ್ಪರ್ ಮತ್ತಿತರೆ ನಗರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅಡ್ಡಪಡಿಸಿ ಪ್ರತಿಭಟನೆ ನಡೆಸಿದರು.
ಕಪ್ಪ ಸೀರ ಧರಿಸಿ ಬಂದಿದ್ದ ತನ್ನ 'ದಿಲ್ ವಾಲೆ' ಸಿನಿಮಾದ ಸಹ ಕಲಾವಿದೆ ಕಾಜೊಲ್ ಜೊತೆ ಕಪ್ಪು ಸೂಟ್ ಧರಿಸಿ ಮಾಧ್ಯಮ ಗೋಷ್ಠಿಗೆ ಬಂದಿದ್ದ 50 ವರ್ಷದ ಶಾರುಖ್ ಖಾನ್ ರವರು, 'ಅಸಹಿಷ್ಣುತೆಯ ವಿವಾದ ದೇಶದ ಕೆಲ ಪ್ರದೇಶಗಳಲ್ಲಿ ಸಿನಿಮಾದ ಗಳಿಕೆಗೆ ಹೊಡೆತ ಕೊಟ್ಟದೆ ಎಂದರು. 'ನಾನು ಸಾಮಾಜಿಕ ಮಾಧ್ಯಮಗಲ್ಲಿ ಬರುತ್ತಿರುವ ಸಂದೇಶ, ಅಭಿಪ್ರಾಯ, ಚರ್ಚೆಗಳನ್ನು ಗಮನಿಸುತ್ತಿದ್ದೇನೆ' ಎಂದರು.
'ನಾನು ದೇಶದಲ್ಲಿ ಕಳೆದ 25 ವರ್ಷಗಳಿಂದ ನಟನಾಗಿದ್ದೇನೆ. ಧರ್ಮ, ಪ್ರದೇಶ, ಜಾತಿ, ಪಂಥ, ಲಿಂಗ ಇವೆಲ್ಲವನ್ನೂ ಮೀರಿ ದೇಶದ ಎಲ್ಲಾ ಮೂಲೆಯಿಂದಲೂ ಜನರ ಪ್ರೀತಿ ಪಡೆದಿದ್ದೇನೆ. ಅದನ್ನು ಹಿಂದುರಿಗುಸಲು ನನಗಿರುವ ಒಂದೇ ಮಾರ್ಗವೆಂದರೆ, ಅದು ನನ್ನ ಕೆಲಸ ಇದರಲ್ಲಿ ನಾನು ಕೆಲವೊಮ್ಮೆ ಗೆದ್ದಿದ್ದೇನೆ ಹಾಗೂ ಕೆಲವೊಮ್ಮೆ ಸೋತಿದ್ದೇನೆ ಕೂಡ.
ನಾನು ನನ್ನ ದೇಶವನ್ನು ಪ್ರತಿನಿಧಿಸುತ್ತೇನೆ. ಯಾರೋ ನನ್ನ ಹಾಗೂ ನನ್ನ ಕೆಲಸಕ್ಜೆ ಸಂಬಂದಿಸದ ಹಾಗೂ ತಿರುಚಿದ ಹೇಳಿಕೆಗಳಿಗೆ ನಾನು ಪ್ರತಿಕ್ರಿಸುವುದಿಲ್ಲ ಏಕೆಂದರೆ ನಾನು ಹಂತ ಹಾಗೂ ವಯಸ್ಸನ್ನು ಮೀರಿದ್ದೇನೆ ನನ್ನ ದೇಶದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ' ಎಂದರು.







