55,699 ಗ್ರಾಮಗಳು ಈಗಲೂ ಮೊಬೈಲ್ ಸೇವೆಯಿಂದ ವಂಚಿತ!
ದೇಶದ 55,669 ಗ್ರಾಮಗಳು ಈಗಲೂ ಮೊಬೈಲ್ ದೂರವಾಣಿ ಸೇವೆಯಿಂದ ವಂಚಿತವಾಗಿವೆಯೆಂದು, ಕೇಂದ್ರ ಸರಕಾರವು ಬುಧವಾರ ಲೋಕಸಭೆಗೆ ತಿಳಿಸಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಈ ಬಗ್ಗೆ ಸದನದಲ್ಲಿ ಹೇಳಿಕೆ ನೀಡಿ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳ ದೂರವಾಣಿ ಸಾಂಧ್ರತೆಯ ಮಟ್ಟವು ಕ್ರಮವಾಗಿ 48.79 ಶೇ. ಹಾಗೂ 152.36 ಶೇ. ಆಗಿದೆಯೆಂದು ತಿಳಿಸಿದರು.
ದೇಶದ ಒಟ್ಟು 5,97,608 ಗ್ರಾಮಗಳ ಪೈಕಿ ಈಗಾಗಲೇ 5,41,939 ಗ್ರಾಮಗಳು ಮೊಬೈಲ್ ಸೇವೆಯ ವ್ಯಾಪ್ತಿಗೊಳಪಟ್ಟಿವೆ. ಕೇವಲ 9.31 ಶೇ.ಅಂದರೆ 55,669 ಗ್ರಾಮಗಳು ಮೊಬೈಲ್ ಸೇವೆಯಿಂದ ವಂಚಿತವಾಗಿವೆಯೆಂದರು.
ದೇಶದ ಎಲ್ಲಾ ಗ್ರಾಮಗಳಿಗೂ ದೂರಸಂಪರ್ಕ ಸೇವೆಯು ಲಭ್ಯವಾಗುವಂತೆ ಮಾಡಲು ಸರಕಾರ ಬದ್ಧವಾಗಿದೆಯೆಂದು ಪ್ರಸಾದ್ ಲೋಕಸಭೆಗೆ ತಿಳಿಸಿದರು.
ಗ್ರಾಮೀಣ ಪ್ರದೇಶಗಳ ದೂರವಾಣಿ ಸಾಂಧ್ರತೆಯನ್ನು 2017ರಲ್ಲಿ ಶೇ.70ರಷ್ಟು ಹಾಗೂ 2020ರೊಳಗೆ ಶೇ.100ರಷ್ಟು ಹೆಚ್ಚಿಸುವ ಗುರಿಯನ್ನು ರಾಷ್ಟ್ರೀಯ ಟೆಲಿಕಾಂ ನೀತಿಯು ರೂಪಿಸಿದೆಯೆಂದರು.
ದೂರಸಂಪರ್ಕ ಸೇವೆಗಳಲ್ಲಿ ಸುಧಾರಣೆ ತರಲು ಕೇಂದ್ರ ಸರಕಾರವು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಪ್ರಸಾದ್, ಎಡಪಂಥೀಯ ತೀವ್ರವಾದದಿಂದ ಪೀಡಿತವಾದ ರಾಜ್ಯಗಳಲ್ಲಿ 3,567.58 ಕೋಟಿ ರೂ. ವೆಚ್ಚದಲ್ಲಿ 2199 ಮೊಬೈಲ್ ಗೋಪುರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು. 2015ರ ನವೆಂಬರ್ 30ರೊಳಗೆ 1134 ಮೊಬೈಲ್ ಟವರ್‌ಗಳು ಕಾರ್ಯನಿರ್ವಹಿಸಲಿವೆಯೆಂದರು.