ಬಂಟ್ವಾಳ ತಾಲೂಕಿನಾದ್ಯಂತ ಶಾಂತಿಯುತ ಮೀಲಾದ್‌ಆಚರಣೆ

* ಬಿಗಿ ಪೊಲೀಸ್ ಬಂದೋಬಸ್ತ್ * ವಾಹನ ಜಾಥಗಳಿಗೆ ಬ್ರೇಕ್
ಬಂಟ್ವಾಳ, ಡಿ. 24: ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.) ರವರಜನ್ಮ ದಿನಾಚರಣೆಯನ್ನುಗುರುವಾರತಾಲೂಕಿನಾದ್ಯಂತ ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು. ಮೀಲಾದ್ ಹಿನ್ನೆಲೆಯಲ್ಲಿತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್‌ಏರ್ಪಡಿಸಲಾಗಿದ್ದು, ಯಾವುದೇಅಹಿತಕರಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
ಬಹುತೇಕ ಮಸೀದಿಗಳಲ್ಲಿ ಬೆಳಗ್ಗೆ 8 ಗಂಟೆಯ ಸುಮಾರಿಗೆದ್ವಜಾರೋಹನ ಕಾರ್ಯಕ್ರಮಗಳು ನಡೆದವು.ಆ ಬಳಿಕ ಮದ್ರಸಾ ಮಕ್ಕಳು, ಜಮಾತ್ ಬಾಂಧವರು, ಮಸೀದಿ ಮದ್ರಸಾ ಆಡಳಿತ ಕಮಿಟಿಯವರು, ನಾಡಿನ ಹಿರಿಯರಿಂದ ಮೀಲಾದ್‌ಜಾಥಾ ನಡೆದವು.
ಮೆರವಣಿಗೆಯಲ್ಲಿ ಸಮವಸ್ತ್ರ ಧರಿಸಿದ ಮದ್ರಸಾ ಮಕ್ಕಳಿಂದ ಮಾರ್ಚ್‌ಫಾಸ್ಟ್, ದಫ್, ತಾಲೀಮು ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಕಂಡುಬಂದವು.ಅಲ್ಲದೆ, ಮೆರವಣಿಗೆಯಉದ್ದಕ್ಕೂಅಲ್ಲಲ್ಲಿತಂಪು ಪಾನಿಯಾಗಳು, ಸಿಹಿ ತಿಂಡಿಗಳು ಹಂಚುತ್ತಿರುವ ದೃಶ್ಯಗಳು ಕಂಡು ಬಂದವು.
ಮೆರವಣಿಗೆಯಲ್ಲಿ ಪ್ರವಾದಿಯವರ ಮದ್ಹ್ ಗೀತೆಗಳು, ಹಾಡುಗಳ ಮೂಲಕ ಪ್ರವಾದಿಯವರನ್ನು ಸ್ಮರಿಸಿದರು.ಮದ್ರಸಾಗಳ ಪುಟಾಣಿ ಮಕ್ಕಳು ಮೆರವಣಿಗೆಗೆಇನ್ನಷ್ಟು ಸೊಬಗು ನೀಡಿದರು.
ವಾಹನ ಜಾಥಗೆ ಬ್ರೇಕ್: ನವಂಬರ್ 10ರಂದು ನಡೆದಟಿಪ್ಪುಜಯಂತಿ ಸಂದರ್ಭದಲ್ಲಿಉಂಟಾದಅಹಿತಕರಘಟನೆಯ ಹಿನ್ನೆಲೆಯಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಕಾಪಾಡುವದೃಷ್ಟಿಯಿಂದ ಜಿಲ್ಲಾಡಳಿತ ಮೀಲಾದ್‌ಆಚರಣೆಯ ಸಂದರ್ಭದಲ್ಲಿ ವಾಹನ ಜಾಥಗಳಿಗೆ ನಿರ್ಬಂಧ ಹೇರಿತ್ತು. ಕಾಲ್ನಡಿಗೆಜಾಥ ಹಾಗೂ ಒಂದು ವಾಹನ ಮತ್ತುಒಂದು ಮೈಕ್ ಬಳಸಲು ಅನುಮತಿ ನೀಡಿದ್ದ ಜಿಲ್ಲಾಡಳಿತ, ವಾಹನ ಜಾಥ ಹಾಗೂ ಸಂಚಾರಿ ನಿಯಮಗಳು ಉಲ್ಲಂಘಿಸುವವರ ವಿರುದ್ಧಕಠಿಣಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.ಆದ್ದರಿಂದತಾಲೂಕಿನಾದ್ಯಂತ ವಾಹನ ಜಾಥಗಳು ಕಂಡುಬರಲಿಲ್ಲ. ಆದರೆ, ಕೆಲವೊಂದು ಕಡೆಗಳಲ್ಲಿ ಕೆಲವು ಬೈಕ್‌ಗಳು ರ್ಯಾಲಿ ನಡೆಸಿರುವುದು ಕಂಡು ಬಂದವು.
ಬಿಗಿ ಬಂದೋಬಸ್ತ್: ಮೀಲಾದ್ ಹಿನ್ನೆಲೆಯಲ್ಲಿತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲಿಸಲಾಗಿತ್ತು. ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರಠಾಣೆ ಉಪ ನಿರೀಕ್ಷರಕ್ಷಿತ್, ನಗರಠಾಣೆ ಉಪ ನಿರೀಕ್ಷ ನಂದಕುಮಾರ್, ವಿಟ್ಲಠಾಣೆ ಉಪ ನಿರೀಕ್ಷಕ ಪ್ರಕಾಶ್‌ದೇವಾಡಿಗತಾಲೂಕಿನಾದ್ಯಂತ ಭದ್ರತೆಯಉಸ್ತುವಾರಿ ವಹಿಸಿದ್ದರು. ತಾಲೂಕಿನಾದ್ಯಂತ ಮಸೀದಿ, ಮದ್ರಸಾ, ಪಟ್ಟಣ, ಸೂಕ್ಷ್ಮ ಪ್ರದೇಶಗಳಲ್ಲಿ ಒಟ್ಟು ನೂರಕ್ಕೂ ಹೆಚ್ಚು ಪೊಲೀಸರು, 2 ಕೆಎಸ್‌ಆರ್‌ಪಿ, 2 ಡಿಎಆರ್ ತುಕಡಿಗಳು ಭದ್ರತೆಗೆ ನಿಯೋಜಿಸಲಾಗಿತ್ತು. ಟ್ರಾಫಿಕ್ ಸಮಸ್ಯೆ ಹಾಗೂ ಸಂಚಾರಿ ನಿಯಮಉಲ್ಲಂಘನೆಯಾಗದಂತೆ ಬಂಟ್ವಾಳ ಟ್ರಾಫಿಕ್ ಉಪ ನಿರೀಕ್ಷಕಚಂದ್ರಶೇಖರಯ್ಯ ನೇತೃತ್ವದಲ್ಲಿ ನಗರ ಪಟ್ಟಣಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.







