ನೈಜೀರಿಯಾದಲ್ಲಿ ಟ್ಯಾಂಕರ್ ಗೆ ಬೆಂಕಿ - ನೂರು ಜನರ ದುರ್ಮರಣ

ನೈಜೀರಿಯಾದ ಕೈಗಾರಿಕಾ ಅನಿಲ ಸ್ಥಾವರದಲ್ಲಿ ಟ್ಯಾಂಕರ್ ಗೆ ಬೆಂಕಿ ಹೊತ್ತು ಕೊಂಡ ಪರಿಣಾಮ ,ಅಡುಗೆ ಅನಿಲ ತುಂಬಿಸಿಕೊಳ್ಳಲು ನಿಂತಿದ್ದ ನೂರಾರು ಜನರ ಸಾವಿಗೆ ಕಾರಣವಾಗಿದೆ.
ಈ ದುರ್ಘಟನೆಯು ದಕ್ಷಿಣ ನೈಜೇರಿಯಾದ ,ಪ್ರಧಾನವಾಗಿ ಕ್ರಿಶ್ಚೀಯನ್ನರೆ ವಾಸಿಸುವ ಎನ್ ನೇವಿ ಎಂಬ ಪ್ರದೇಶದಲ್ಲಿ ನಡೆದಿದೆ .ಕ್ರಿಸ್ಮಸ್ ಅಂಗವಾಗಿ ಅಲ್ಲಿನ ಜನರು ತಮ್ಮ ಅಡುಗೆ ಸಿಲಿಂಢರ್ ಗಳನ್ನು ತುಂಬಿಸುವ ತರಾತುರಿಯಲ್ಲಿದ್ದರು ಎನ್ನಲಾಗಿದೆ.
ಅಗ್ನಿ ಶಾಮಕ ದಳದವರು ಬೆಂಕಿ ಆರಿಸುವ ಹೊತ್ತಿಗೆ ನೂರಕ್ಕೂ ಹೆಚ್ಚು ಮೃತದೇಹಗಳನ್ನು ಪತ್ತೆಯಾಗಿವೆ ಎಂದು ವರದಿಯಾಗಿದೆ.
Next Story