ಭಯೋತ್ಪಾದನೆ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಫ್ರೆಂಚ್ ವರದಿಗಾರ್ತಿಯನ್ನು ಹೊರದಬ್ಬಿದ ಚೀನಾ

ಉರ್ಸುಲಾ ಗಾಯ್ತರ್ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಬೆಂಬಲಿಸಿದ್ದರು,ಇದರಿಂದಾಗಿ ನಾಗರೀಕರು ಕೊಲ್ಲಲ್ಪಟ್ಟಿದ್ದರಾದರೂ ,ಆಕೆ ಕ್ಷಮೆಯಾಚಿಸಲು ನಿರಾಕರಿಸಿದ್ದರು ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.
ಪಶ್ಚಿಮ ಚೀನಾದ ಮುಸ್ಲಿಂ ಪ್ರಾಂತ್ಯದಲ್ಲಿ ನಡೆದ ಜನಾಂಗೀಯ ಹಿಂಸಾಚಾರವನ್ನು ಜಾಗತಿಕ ಭಯೋತ್ಪಾದನೆಯೊಂದಿಗೆ ತಳುಕು ಹಾಕಿದ್ದನ್ನು ಅಧಿಕೃತವಾಗಿ ಪ್ರಶ್ನಿಸಿದ್ದನ್ನು ಮಾಧ್ಯಮಗಳ ಮುಖಾಂತರ ಉಗ್ರ ಪ್ರಚಾರ ಮಾಡಿದುದರ ಪರಿಣಾಮ ಫೆಂಚ್ ವರದಿಗಾರ್ತಿಯ ಮಾದ್ಯಮ ಪರವಾನಿಗೆಯನ್ನು ನವೀಕರಿಸುವುದಿಲ್ಲ ಎಂದು ಚೀನಾ ಹೇಳಿದೆ.
ಫ್ರೆಂಚ್ ನಿಯತಕಾಲಿಕೆಯ ವರದಿಗಾರ್ತಿ ಉರ್ಸುಲಾ ಗಾಥಿಯರ್ 2012 ರ ನಂತರ ಚೀನಾವನ್ನು ತೊರೆದ ಮೊದಲ ವಿದೇಶಿ ಪತ್ರಕರ್ತೆ ಎನಿಸಿಕೊಳ್ಳಲಿದ್ದಾರೆ. ಹಿಂದೆ ಅಲ್ ಜಜೀರಾ ದ ಬಿಜಿಂಗ್ ನ ವರದಿಗಾರ್ತಿ ಅಮೇರಿಕಾದ ಮೆಲಿಸ್ಸಾ ಚಾನ್ ಅವರು ಚೀನಾದಿಂದ ಹೊರ ಹಾಕಲ್ಪಟ್ಟಿದ್ದರು.
ಅವರು ನಾನು ಯಾವುದನ್ನು ಬರೆದಿಲ್ಲಅದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಬಯಸುತ್ತಿದ್ದಾರೆ ಹಾಗೂ ನನ್ನನ್ನು ನಿಂದಿಸುತ್ತದ್ದಾರೆ ಎಂದು ಗಾಥಿಯರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಲೂ ಕಾಂಗ್ ‘ಗಾಥಿಯರ್ ಚೀನಾದಲ್ಲಿ ಕೆಲಸ ಮಾಡುವ ಅರ್ಹತೆಯನ್ನು ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಬೆಂಬಲಿಸಿರುವುದಲ್ಲದೇ ,ಅ ಬಗ್ಗೆ ಕ್ಷಮೆಯಾಚಿಸಲು ನಿರಾಕರಿಸಿವುದರ ಮುಖಾಂತರ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಚೀನಾ ಯಾವಾಗಲೂ ವಿದೇಶಿ ಮಾಧ್ಯಮ ಮತ್ತು ವರದಿಗಾರರ ಕಾನೂನಾತ್ಮಕ ಹಕ್ಕುಗಳ ರಕ್ಷಣೆಗೆವಾಗಿದೆ ಆದರೆ ಭಯೋತ್ಪಾದನೆಗೆ ಕಮ್ಮಕ್ಕು ನಿಡುವುದನ್ನು ಚೀನಾ ಸಹಿಸುವುದಿಲ್ಲವೆಂದು ಲು ತಿಳೀಸಿದ್ದಾರೆ.