ಭಾರತದ ಮುಸ್ಲಿಮರು ಈ ನೆಲದ ಮಕ್ಕಳು : ಸಚಿವ ರಾಜನಾಥ್ ಸಿಂಗ್

ಉಗ್ರರ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್)ಗೆ ಭಾರತದಲ್ಲಿ ತನ್ನ ಜಾಲವನ್ನು ಹರಡಲು ಸಾಧ್ಯವಿಲ್ಲ.. ಭಾರತದ ಮುಸ್ಲಿಮರು ತಮ್ಮ ಮಕ್ಕಳನ್ನು ತಪ್ಪು ದಾರಿಗಿಳಿಯಲು ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸ ನನಗಿದೆ "ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲಕ್ನೋದಲ್ಲಿ ಆಯೋಜಿಸಲಾಗಿದ್ದ "ತಲೀಮ್ ಕಿ ತೌಕತ್" ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಚಿವ ರಾಜನಾಥ ಸಿಂಗ್ " ಭಾರತದ ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳು ಇಲ್ಲಿ ಗಟ್ಟಿಯಾಗಿರುವುದರಿಂದ ಭಯೋತ್ಪಾದಕ ಸಂಘಟನೆಗಳಿಗೆ ನೆಲೆಯೂರಲು ಸಾಧ್ಯವಿಲ್ಲ " ಎಂದು ಸ್ಪಷ್ಟಪಡಿಸಿದರು.
. ಭಾರತದ ಮುಸ್ಲಿಮರು ಈ ನೆಲದ ಮಕ್ಕಳು ಎಂದು ಹೇಳಿದ ಅವರು ಮುಸ್ಲಿಮ್ ಯುವಕನೊಬ್ಬ ಇತ್ತೀಚೆಗೆ ಮುಂಬಯಿಯಲ್ಲಿ ಉಗ್ರ ಸಂಘಟನೆಯೊಂದರಿಂದ ಆಕರ್ಷಣೆಗೊಳಗಾಗಿದ್ದ. ಕೂಡಲೇ ಆತನ ಹೆತ್ತವರು ನನ್ನನ್ನು ಸಂಪರ್ಕಿಸಿ ತಮ್ಮ ಮಗನನ್ನು ರಕ್ಷಿಸುವಂತೆ ಕೋರಿದರು. ಭಾರತದಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಮೌಲ್ಯಗಳು ಅಷ್ಟು ಗಟ್ಟಿಯಾಗಿರುವುದರಿಂದ ಉಗ್ರ ಸಂಘಟನೆಗಳಿಗೆ ಇಲ್ಲಿ ಅವಕಾಶ ಇಲ್ಲ ಎಂದರು.





