ರಮಾದಿ ವಿಮೋಚನೆ ಇರಾಕಿ ಪಡೆಗಳಿಗೆ ಅಬಾದಿ ಅಭಿನಂದನೆ

ಲಂಡನ್,ಡಿ.29: ಐಸಿಸ್ ಉಗ್ರರ ಹಿಡಿತದಿಂದ ರಮಾದಿ ನಗರದ ವಿಮೋಚನೆಗೊಂಡಿದೆಯೆಂದು ಇರಾಕ್ ಮಂಗಳವಾರ ಘೋಷಿಸಿದೆ ಹಾಗೂ ಅಲ್ಲಿರುವ ಸರಕಾರಿ ಕಟ್ಟಡ ಸಂಕೀರ್ಣದ ಮೇಲೆ ಇರಾಕಿ ರಾಷ್ಟ್ರಧ್ವಜವನ್ನು ಹಾರಿಸಿರುವುದಾಗಿ ಅದು ಹೇಳಿದೆ.
ರಮಾದಿ ಪಟ್ಟಣದ ವಿಮೋಚನೆಗಾಗಿ ಧೀರೋದಾತ್ತವಾಗಿ ಹೋರಾಡಿದ ಇರಾಕಿ ಸೈನಿಕರನ್ನು, ಪ್ರಧಾನಿ ಹೈದರ್ ಅಲ್ ಅಬಾದಿ ಅಭಿಂದಿಸಿದ್ದಾರೆ. 2016ರೊಳಗೆ ಇಡೀ ಇರಾಕ್‌ನಿಂದ ಐಸಿಸ್‌ನ್ನು ಮೂಲೋತ್ಪಾಟನೆ ಮಾಡುವುದಾಗಿ ಅವರು ಘೋಷಿಸಿದ್ದಾರೆ.
ತನ್ಮಧ್ಯೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡ್ ಹೇಳಿಕೆಯೊಂದನ್ನು ನೀಡಿ, ಇರಾಕಿ ಪಡೆಗಳಿಂದ ರಮಾದಿ ನಗರದ ಮರುಸ್ವಾಧೀನವು, ಐಸಿಸ್ ವಿರುದ್ಧದ ಮಹತ್ವದ ವಿಜಯವೆಂದು ಬಣ್ಣಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್‌ಕೆರ್ರಿ , ಇರಾಕಿ ಪಡೆಗಳ ಸಾಹಸ ಹಾಗೂ ಕೆಚ್ಚನ್ನು ಪ್ರಶಂಸಿಸಿದ್ದಾರೆ.
Next Story