ಭಟ್ಕಳ: ಜೀವಮಾನದ ಸಾಧನೆಗಾಗಿಡಾ.ಹನೀಫ್ ಶಬಾಬ್‌ರಿಗೆ ಸನ್ಮಾನ

ಭಟ್ಕಳ: ಇಲ್ಲಿನ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕಳೆದ 30 ವರ್ಷಗಳಿಂದ ವಿವಿಧ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾಗುತ್ತಿರುವ ಸಾಹಿತಿ ಅಂಕಣಕಾರ ಡಾ. ಮುಹಮ್ಮದ್ ಹನೀಫ್ ಶಾಬಾಬರನ್ನು ಅವರ ಜೀವಮಾನದ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ಕಾದಿರ್ ಬಾಷಾ ರುಕ್ನುದ್ದೀನ್ ಸನ್ಮಾನಿಸಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು.
ಡಾ.ಹನೀಫ್ ಶಾಬಾಬ್ ಭಟ್ಕಳದ ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದು ಸಾಲಾರ್‌ಉರ್ದು ಪತ್ರಿಕೆಯಲ್ಲಿ ಅಂಕಣಕಾರರಾಗಿಯೂ, ಅನ್ನವಾಯತ್ ಪಾಕ್ಷಿಕದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ 30 ವರ್ಷಗಳಿಂದ ತರಬಿಯತ್‌ಎಜ್ಯೂಕೇಶನ್ ಸೂಸೈಟಿಯಲ್ಲಿ ಸಕ್ರೀಯರಾಗಿ ಶಿಕ್ಷಣ ಸೇವೆ ಮಾಡುತ್ತಿದ್ದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉರ್ದು ಸಾಹಿತ್ಯವನ್ನು ಬೋಧಿಸುತ್ತಿದ್ದರು.ಕಳೆದ ಐದು ವರ್ಷಗಳಿಂದ ಎಸ್.ಎಸ್.ಎಲ್.ಸಿ ಉರ್ದು ಭಾಷೆಯಲ್ಲಿ ಶೇ.100ಫಲಿತಾಂಶ ಪಡೆಯುವಂತೆ ಮಾಡಿದಕೀರ್ತಿಇವರದು.
ಈ ಸಂದರ್ಭದಲ್ಲಿ ಡಾ.ಅನಸ್ ಮೊಹತೆಶಮ್, ಕಾದಿರ್ ಮೀರಾ ಪಟೇಲ್, ಸೈಯ್ಯದ್‌ಅಶ್ರಫ್ ಬರ್ಮಾವರ್, ಜ.ಇ.ಹಿಂ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ರಝಾ ಮಾನ್ವಿ, ಇಕ್ಬಾಲ್ ಇಕ್ಕೇರಿ, ತಲ್ಹಾ ಸಿದ್ದಿಬಾಪ, ಮುಸಾಬ್ ಆಹ್ಮದ್ ಆಬಿದಾ ಮುತ್ತಿತರರು ಉಪಸ್ಥಿತರಿದ್ದರು.





