ಮತ ಖರೀದಿ ಮಾಡದೆ ಸೋಲಾಯ್ತು : ಜೆಡಿಎಸ್ ಪರಾಭವ ಅಭ್ಯರ್ಥಿ ಸಂಕೇತ್ ಪೂವಯ್ಯ
ಮಡಿಕೇರಿ: ಡಿ.30 :ಮತಗಳನ್ನು ಖರೀದಿಸದೆ ಚುನಾವಣೆಯನ್ನು ಪ್ರಾಮಾಣಿಕವಾಗಿ ಎದುರಿಸಬೇಕೆನ್ನುವ ತಮ್ಮ ಉದ್ದೇಶ ವಿಫಲವಾಗಿದ್ದು, ಬಂದಿರುವ ಮತಗಳು ಅಲ್ಪ ಸಂಖ್ಯೆಯಲ್ಲಿದ್ದರೂ ಅವುಗಳು ಮಹತ್ವದ ಮತಗಳಾಗಿವೆ ಎಂದು ಜೆಡಿಎಸ್‌ನ ಪರಾಭವ ಅಭ್ಯರ್ಥಿ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಧಿಕಾರದ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಮತಗಳನ್ನು ಮಾರಾಟ ಮಾಡಿಕೊಳ್ಳುವವರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ಬರುವುದಿಲ್ಲವೆಂದು ತಿಳಿಸಿದರು.
ಚುನಾವಣೆಯಲ್ಲಿ ಮತಗಳನ್ನು ಖರೀದಿಸುವ ಪ್ರಯತ್ನ ಮಾಡದೆ ಇದ್ದುದರಿಂದಪ್ರಾಮಾಣಿಕ ಪ್ರತಿನಿಧಿಗಳುನನಗೆ ಪ್ರಾಶಸ್ತ್ಯದಮತಗಳನ್ನು ನೀಡಿದ್ದಾರೆ.ಅವರಿಗೆ ನಾನು ಸದಾ ಚಿರಋಣಿಯಾಗಿರುವುದಾಗಿ ತಿಳಿಸಿದ ಸಂಕೇತ್ ಪೂವಯ್ಯಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧಜನರಲ್ಲಿ ತೀವ್ರ ಅಸಮಾಧಾನ ಹಾಗೂ ಭ್ರಮನಿರಸನವಿದೆಎಂದು ಆರೋಪಿಸಿದರು.
ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಸುನಿಲ್ ಸುಬ್ರಮಣಿ ಅವರಿಗೆ ಮುಂದೆ ಬಹಳಷ್ಟು ಮಹತ್ವದ ಜವಬ್ದಾರಿಗಳಿದ್ದು,ಪಂಚಾಯಿತಿಗಳ ಸಬಲೀಕರಣಕ್ಕಾಗಿ ಸರಕಾರ ಹಾಗೂ ವಿಧಾನಪರಿಷತ್ತು ನಡುವೆ ಸಂಪರ್ಕದ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.ಹಿಂದೆ ಅಧಿಕಾರದಲ್ಲಿದ್ದ ವಿಧಾನ ಪರಿಷತ್ ಸದಸ್ಯರು ಬೆಂಗಳೂರಿನಲ್ಲೇ ಉಳಿದುಕೊಳ್ಳುತ್ತಿದ್ದರು, ಅಲ್ಲದೆ ಜಿಲ್ಲೆಯ ಯಾವುದೇ ಪಂಚಾಯಿತಿಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸದ ಕಾರಣಈ ಚುನಾವಣೆಯಲ್ಲಿ ಭ್ರಮನಿರಸನಗೊಂಡ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು
ಟೀಕಿಸಿದರು. ಆರು ವರ್ಷಗಳ ಕಾಲಾವಧಿಯ ಮೇಲ್ಮನೆಯಲ್ಲಿ ಚಿಂತಕರು ಇರುವುದರಿಂದ ಬಹಳಷ್ಟು ಜವಬ್ದಾರಿಗೆದ್ದವರ ಮೇಲಿರುತ್ತದೆ. ಪಕ್ಷಬೇಧ ಮರೆತು ಸುನಿಲ್ ಸುಬ್ರಮಣಿಅವರು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣಸಹಕಾರ ನೀಡುವುದಾಗಿಸಂಕೇತ್ ಪೂವಯ್ಯಭರವಸೆ ನೀಡಿದರು.
ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದಅವರುಪಕ್ಷದಲ್ಲಿ ಉತ್ತಮ ಸಂಘಟನೆ ಇರುವುದರಿಂದ ಯಾವುದೇ ರೀತಿಯ ಆಮಿಷಗಳನ್ನುನೀಡುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಕೊಡಗಿನಲ್ಲಿ ಜೆಡಿಎಸ್ ಭದ್ರವಾಗಿದ್ದು,ಮಾಜಿ ಸಚಿವ ಎಂ.ಸಿ.ನಾಣಯ್ಯ ಮತ್ತು ಅವರ ಬೆಂಬಲಿಗರು ನೀಡಿದ ವ್ಯತಿರಿಕ್ತ ಹೇಳಿಕೆಯಿಂದಚುನಾವಣೆಯಲ್ಲಿ ಯಾವುದೇಪರಿಣಾಮ ಬೀರಿಲ್ಲ, ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ನನ್ನನ್ನ ಎಲ್ಲರೂ ಬೆಂಬಲಿಸಿ ಸಹಕರಿಸಬೇಕಿತ್ತು ಎಂದು ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ವಕ್ತಾರ ಪಿ.ಎಸ್.ಭರತ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಡಾ ಮನೋಜ್ ಬೋಪಯ್ಯ, ಪದಾಧಿಕಾರಿಗಳಾದ ಲೋಕೇಶ್ ಹಾಗೂಅಮೃತ್ ಉಪಸ್ಥಿತರಿದ್ದರು.
==================================================







