ಮೂಡುಬಿದಿರೆಯಲ್ಲಿ "ಬೆದ್ರ ಬುಲ್ಸ್" ತಂಡಕ್ಕೆ ಅಭಿನಂದನೆ

ಮೂಡುಬಿದಿರೆ : ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ವಿಜಯಶಾಲಿಯಾದ ಮೂಡುಬಿದಿರೆಯ "ಬೆದ್ರಬುಲ್ಸ್""ದ ಕ್ರೀಡಾಪಟುಗಳಿಗೆ ಇಲ್ಲಿನ ಸಮಾಜ ಮಂದಿರ ಬುಧವಾರ ಅಭಿನಂದನಾ ಕಾರ್ಯಕ್ರಮ ನಡೆಯಿತು. ರಾಜ್ಯ ಕ್ರೀಡಾ ಸಚಿವ ಕೆ. ಅಭಯ ಚಂದ್ರ ಜೈನ್ ಅವರು ಅಧ್ಯಕ್ಷತೆಯನ್ನು ವಹಿಸಿ ಆಟಗಾರರನ್ನು ಅಭಿನಂಧಿಸಿ ಸಾಧಕ ಆಟಗಾರರಿಗೆ ಡಾ. ಎಂ. ಮೋಹನ್ ಆಳ್ವ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿದ ನಗದು ಬಹುಮಾನವನ್ನು ವಿತರಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಉತ್ತಮವಾದ ಭವಿಷ್ಯವಿದೆ. ಕ್ರೀಡಾ ಪಟುಗಳಿಗೆ ಮುಖ್ಯವಾಗಿ ಬೇಕಾಗಿರುವುದು ಜೋಶ್, ಜೋಶ್‌ನಿಂದ ಎಲ್ಲವನ್ನು ಯಶಸ್ವಿಯಾಗಿ ಕಂಡುಕೂಳ್ಳಬಹುದು ಇಂತಹ ಜೋಶ್ ಮೂಡಬಿದಿರೆಯ ಕ್ರೀಡಾಪಟುಗಳಲ್ಲಿದೆ ಎಂದ ಅವರು ಕ್ರೀಡಾ ಕ್ಷೇತ್ರದಲ್ಲಿ ಕಿಂಚಿತ್ ಸೇವೆ ಇರಲಿ ಎಂಬ ಭಾವನೆಯಿಂದ ಬೆದ್ರ ಬುಲ್ಸ್ ತಂಡವನ್ನು ಕಟ್ಟಿರುವ ಪ್ರಶಸ್ತಿ ಗಳಿಸುವ ಮೂಲಕ ಮೂಡುಬಿದಿರೆಯ ಹೆಸರು ಪ್ರಜ್ವಲಿಸಿದೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಮಾತಾನಾಡಿದ ದ.ಕ ಜಿಲ್ಲೆ ಶಿಕ್ಷಣ, ಸಾಂಸ್ಕೃತಿ ಮಾತ್ರವಲ್ಲದೆ ಕ್ರೀಡೆಯಲ್ಲಿ ಇತಿಹಾಸ ದಾಖಲೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು. ರಾಜ್ಯದಲ್ಲಿ 16 ಸಿಂಥೇಟಿಕ್ ಟ್ರ್ಯಾಕ್‌ಗಳಲ್ಲಿ, ಮೂಡುಬಿದಿರೆಯ ಸಿಂಥೆಟಿಕ್ ಟ್ರ್ಯಾಕ್ ಹೆಸರು ಪಡೆದುಕೊಂಡಿರುವುದು ಇಲ್ಲಿನ ಕ್ರೀಡಾಪಟ್ಟುಗಳಿಗೆ ಹೆಮ್ಮೆ ವಿಷಯವಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ,ಮಾಡುತ್ತಿರುವ ಮೂಡುಬಿದಿರೆಯಲ್ಲಿ ಕ್ರಿಕೆಟ್ ಪಿಚ್ ನಿರ್ಮಿಸಬೇಕು. ಕ್ರೀಡಾ ಪಟುಗಳಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಕ್ರಿಕೆಟ್ ಟೀಮ್‌ನಲ್ಲೂ ಆಡುವ ಶಕ್ತಿ ಮೂಡುಬಿದಿರೆಯ ಆಟಗಾರರಿಗೂ ಬರುತ್ತದೆ ಎಂದು ಹೇಳಿದ ಅವರು ಕ್ರೀಡಾಪಟುಗಳಿಗೆ ಬರುವ ಹಣ ಮಧ್ಯವರ್ತಿಗಳಿಗೆ ಪೋಲ್ ಆಗದಂತೆ ತಡೆಗಟ್ಟಿದ ಸಾಧನೆ ಕ್ರೀಡಾ ಸಚಿವ ಅಭಯ ಚಂದ್ರ ಜೈನ್ ಅವರದ್ದಾಗಿದೆ ಎಂದು ಹೇಳಿದರು. .
ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷೆ ರೂಪಾ ಎಸ್. ಶೆಟ್ಟಿ, ಬೆದ್ರಬುಲ್ಸ್ ತಂಡದ ವ್ಯವಸ್ಥಾಪಕ ಸಂದೀಪ್ ಭಂಡಾರಿ, ಉಪನಾಯಕ ರಿತೇಶ್ ಉಪಸ್ಥಿತರಿದ್ದರು. ರತ್ನಾಕರ ಮೊಯಿಲಿ ಕಾರ್ಯಕ್ರಮ ನಿರೂಪಿಸಿದರು.







