ಸೌದಿ-ಟರ್ಕಿ ವ್ಯೆಹಾತ್ಮಕ ಸಹಕಾರ ಮಂಡಳಿ ಸ್ಥಾಪನೆ
ರಿಯಾದ್, ಡಿ.30: ಉಭಯ ರಾಷ್ಟ್ರಗಳ ನಡುವೆ ಸೇನೆ, ಅರ್ಥವ್ಯವಸ್ಥೆ ಹಾಗೂ ಹೂಡಿಕೆ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ವ್ಯೆಹಾತ್ಮಕ ಸಹಕಾರ ಮಂಡಳಿಯೊಂದನ್ನು ಸ್ಥಾಪಿಸುವ ಅಗತ್ಯವಿರುವುದಾಗಿ ಸೌದಿ ಅರೇಬಿಯ ಹಾಗೂ ಟರ್ಕಿ ಒಪ್ಪಿಕೊಂಡಿವೆ ಎಂದು ಸೌದಿ ಅರೇಬಿಯದ ವಿದೇಶಾಂಗ ಸಚಿವ ಆದಿಲ್ ಅಲ್ ಝುಬೈರ್ ತಿಳಿಸಿದ್ದಾರೆ.
‘‘ಉಭಯ ರಾಷಟ್ಟೆಗಳ ನಡುವೆ ಉನ್ನತ ಮಟ್ಟದ ವ್ಯೆಹಾತ್ಮಕ ಸಹಕಾರ ಮಂಡಳಿಯೊಂದನ್ನು ಸ್ಥಾಪಿಸುವ ಅಪೇಕ್ಷೆ ಚರ್ಚೆಯ ವೇಳೆ ಮೂಡಿಬಂತು’’ ಎಂದು ಟರ್ಕಿಯ ತನ್ನ ಸೋದ್ಯೋಗಿಯೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ನೀಡಿರುವ ಹೇಳಿಕೆಯಲ್ಲಿ ಅಲ್ ಜುಬೈರ್ ತಿಳಿಸಿದ್ದಾರೆ.
ರಿಯಾದ್‌ನಲ್ಲಿ ಸೌದಿಯ ದೊರೆ ಸಲ್ಮಾನ್ ಹಾಗೂ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಬ್ ಎರ್ದೊಗಾನ್ ನಡುವೆ ಮಾತುಕತೆ ನಡೆದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ಭದ್ರತೆ, ಸೇನೆ, ಆರ್ಥಿಕತೆ, ವ್ಯಾಪಾರ, ಇಂಧನ ಹಾಗೂ ಬಂಡವಾಳ ಹೂಡಿಕೆಗೆ ಸಂಬಂಧಿಸಿ ಸಹಕಾರ ನೀಡುವ ನಿಟ್ಟಿನಲ್ಲಿ ಮಂಡಳಿಯು ಶ್ರಮಿಸಲಿದೆ ಎಂದವರು ಹೇಳಿದ್ದಾರೆ.
ಎರಡನೆ ಉಪಪ್ರಧಾನಿ ಹಾಗೂ ರಕ್ಷಣಾ ಸಚಿವರಾಗಿರುವ ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು. ಸಿರಿಯ ಹಾಗೂ ಇರಾಕ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಲಿಬಿಯ ಹಾಗೂ ಯಮನ್‌ನಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಮಾತುಕತೆ ನಡೆದಿರುವುದಾಗಿ ಅವರು ತಿಳಿಸಿದ್ದಾರೆ.