ಪಾಕ್ ಸಿಂಗರ್ ಸಮಿ ಜ.1ರಿಂದ ಭಾರತದ ಪ್ರಜೆ

ಹೊಸದಿಲ್ಲಿ, ಡಿ.31: ಪಾಕಿಸ್ತಾನದ ಸಿಂಗರ್ ಅದ್ನಾನ್ ಸಮಿ ಕೊನೆಗೂ ಭಾರತದ ಪೌರತ್ವ ಪಡೆದಿದ್ದಾರೆ. ಜನವರಿ 1ರಿಂದ ಅವರು ಭಾರತದ ಪ್ರಜೆಯಾಗಲಿದ್ದಾರೆ.
ಅವರು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಮನವಿಯಂತೆ ಮಾನವೀಯ ನೆಲೆಯಲ್ಲಿ ಅವರಿಗೆ ಪೌರತ್ವ ನೀಡಲಾಗಿದೆ. ಸಮಿ ಭಾರತದ ಪ್ರಜೆಯಾಗಲಿದ್ದಾರೆ. ಈ ಆದೇಶ ಶುಕ್ರವಾರದಿಂದ ಜಾರಿಗೆ ಬರಲಿದೆ ಎಂದು ಕೆಂದ್ರ ಗೃಹ ಸಚಿವಾಲಯ ತಿಳಿಸಿದೆ.
ಸಮಿ ಅವರಿಗೆ ಮೂರು ತಿಂಗಳ ವೀಸಾವನ್ನು ಕಳೆದ ಅಕ್ಟೋಬರ್‌ನಲ್ಲಿ ನೀಡಲಾಗಿತ್ತು. 46ರ ಹರೆಯದ ಸಿಂಗರ್ ಸಮಿಗೆ ಭಾರತ ಹಲವು ವರ್ಷಗಳಿಂದ ಎರಡನೆ ಮನೆಯಾಗಿದೆ.
ಭಾರತದಲ್ಲಿ ನೆಲೆಸಲು ತನಗೆ ಅನುಕೂಲವಾಗುವಂತೆ ಭಾರತದ ಪೌರತ್ವವನ್ನು ನೀಡುವಂತೆ ಮೇ26ರಂದು ಸಮಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.
ಲಾಹೋರ್‌ನಲ್ಲಿ ಜನಿಸಿರುವ ಸಮಿ 2001, ಮಾರ್ಚ್ 13ರಂದು ವಿಸಿಟರ್ಸ್ ವೀಸಾದಲ್ಲಿ ಭಾರತಕ್ಕೆ ಮೊದಲ ಬಾರಿ ಆಗಮಿಸಿದ್ದರು. ಈ ವೀಸಾದ ಕಾಲಾವಧಿ ಒಂದು ವರ್ಷವಾಗಿದ್ದು, ಪ್ರತಿವರ್ಷ ವೀಸಾವನ್ನು ನವೀಕರಿಸುತ್ತಿದ್ದರು. ಪಾಕಿಸ್ತಾನವು ಮೇ 27, 2010ರಂದು ಅವರಿಗೆ ಪಾಸ್‌ಪೋರ್ಟ್ ನೀಡಿತ್ತು. ಇದರ ಅವಧಿ 2015 , ಮೇ 26 ಕೊನೆಗೊಂಡಿತ್ತು. ಆದರೆ ಪಾಕಿಸ್ತಾನ ಸರಕಾರ ಇದನ್ನು ನವೀಕರಣ ಮಾಡಲಿಲ್ಲ. ಈ ಕಾರಣದಿಂದಾಗಿ ಸಮಿ ಸಮಸ್ಯೆಯಲ್ಲಿ ಸಿಲುಕಿದ್ದರು. ಸಮಿ ಬಳಿಕ ಭಾರತ ಸರಕಾರಕ್ಕೆ ಮನವಿ ಸಲ್ಲಿಸಿ ಭಾರತದ ಪೌರತ್ವ ನೀಡುವಂತೆ ವಿನಂತಿಸಿದ್ದರು.
ಈ ವರ್ಷ ಸಮಿ ಸಲ್ಮಾನ್ ಖಾನ್‌ರ ಬಜರಂಗಿ ಭಾಯಿಜಾನ್ ಚಿತ್ರದ ‘ಭರ್ ದೋ ರೆಲಿ ಮೇರಿ’ ಹಾಡು ಹಿಟ್ ಆಗಿತ್ತು.