ತೈಲ ದರ ಇಳಿಕೆ: ಪೆಟ್ರೋಲ್ ಲೀ. 63 ಪೈಸೆ, ಡೀಸೆಲ್ 1.06 ರೂ. ಇಳಿಕೆ

ಹೊಸದಿಲ್ಲಿ, ಡಿ.31: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ, ಸರಕಾರಿ ಸ್ವಾಮ್ಯದ ತೈಲಸಂಸ್ಥೆಗಳು ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 63 ಪೈಸೆ ಹಾಗೂ ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ 1.06 ರೂ. ಕಡಿತ ಮಾಡಿವೆ. ಗುರುವಾರ ಮಧ್ಯರಾತ್ರಿಯಿಂದಲೇ ನೂತನ ತೈಲ ದರಗಳು ಜಾರಿಗೆ ಬಂದಿವೆ.
ಇದರಿಂದಾಗಿ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 59.35 ಪೈಸೆ ಆಗಲಿದ್ದು, ಡೀಸೆಲ್ 45.03 ರೂ. ಆಗಲಿದೆ. ಡಿಸೆಂಬರ್ ತಿಂಗಳಲ್ಲಿ ತೈಲ ದರ ಕುಸಿದಿರುವುದು ಇದು ಮೂರನೆ ಸಲವಾಗಿದೆ. ಈ ಮೊದಲು ಡಿಸೆಂಬರ್ 16ರಂದು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಲೀಟರ್‌ಗೆ ಕ್ರಮವಾಗಿ 50 ಪೈಸೆ ಹಾಗೂ 40 ಪೈಸೆ ಇಳಿಕೆಯಾಗಿತ್ತು.
Next Story





