Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಹಿಂಸೆ -ವಲಸೆಗಳ ನಡುವೆ ಒಡಂಬಡಿಕೆಗಳ...

ಹಿಂಸೆ -ವಲಸೆಗಳ ನಡುವೆ ಒಡಂಬಡಿಕೆಗಳ ಭರವಸೆ

ವಾರ್ತಾಭಾರತಿವಾರ್ತಾಭಾರತಿ1 Jan 2016 12:17 AM IST
share
ಹಿಂಸೆ -ವಲಸೆಗಳ ನಡುವೆ ಒಡಂಬಡಿಕೆಗಳ ಭರವಸೆ

2015  ಸಂದಿದೆ. 2016 ಬಂದಿದೆ. ಕಳೆದ ವರ್ಷ ಹಲವು ಸಿಹಿಕಹಿ ಸುದ್ದಿಗಳನ್ನು ದಾಖಲಿಸಿದೆ. ಹೊಸತನದ ಕನಸು ಜೊತೆಗಿದ್ದರೂ ಕಳೆದು ಹೋದ ವರ್ಷದ ಕೆಲವು ನೆನಪುಗಳು ನಮ್ಮಲ್ಲಿ ಉಳಿದುಕೊಂಡು ಬಿಡುತ್ತವೆ. ಜಾಗತಿಕ ಸನ್ನಿವೇಶದಲ್ಲಿ ಸಿಹಿಕಹಿ ಸುದ್ದಿಗಳ ಮಹಾಪೂರವೇ ಹರಿದು ಬಂದಿದೆ. ಸಿರಿಯ ನಿರಾಶ್ರಿತರ ಬಿಕ್ಕಟ್ಟು ಮತ್ತು ಐರೋಪ್ಯ ಹಾಗೂ ಇತರ ರಾಷ್ಟ್ರಗಳಿಗೆ ಸಂತ್ರಸ್ತರ ವಲಸೆ ಜಾಗತಿಕ ಸಮಸ್ಯೆಯಾಗಿ ತಲೆದೋರಿದೆ. ವಿವಾದಿತ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಇರಾನ್ ಹಾಗೂ ಪಾಶ್ಚಿಮಾತ್ಯ ಪ್ರಬಲ ರಾಷ್ಟ್ರಗಳ ನಡುವಿನ ಒಪ್ಪಂದ ಒಂದು ಐತಿಹಾಸಿಕ ಬೆಳವಣಿಗೆ. ವರ್ಷಾಂತ್ಯದಲ್ಲಿ ಏರ್ಪಟ್ಟ ಜಾಗತಿಕ ಹವಾಮಾನ ಬದಲಾವಣೆ ಒಪ್ಪಂದ ಜಗತ್ತಿನ ಭವಿಷ್ಯದ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಒಂದು ಪ್ರಮುಖ ನಡೆಯಾಗಿ ಪರಿಣಮಿಸಿದೆ. ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ 190ಕ್ಕೂ ಅಧಿಕ ರಾಷ್ಟ್ರಗಳು ಐತಿಹಾಸಿಕ ಒಪ್ಪಂದವೊಂದಕ್ಕೆ ಸಹಿ ಮಾಡಿವೆ. ನೇಪಾಳದಲ್ಲಿ ನೂತನ ಸಂವಿಧಾನವು 2015ರ ಸೆಪ್ಟಂಬರ್ 20ರಂದು ಜಾರಿಗೊಂಡಿರುವುದು ಒಂದು ಐತಿಹಾಸಿಕ ಬೆಳವಣಿಗೆಯಾಗಿದೆ. ಮಧ್ಯಪ್ರಾಚ್ಯದ ನಿರಾಶ್ರಿತ ವಲಸಿಗರಿಗೆ ಆಸರೆಯಾಗುವ ನಿಟ್ಟಿನಲ್ಲಿ ಯುರೋಪ್‌ನ ಗಡಿಗಳನ್ನು ತೆರೆದಿಡುವಲ್ಲಿ ಜರ್ಮನಿಯ ಚಾನ್ಸೆಲರ್ ಆ್ಯಂಜೆಲಾ ಮರ್ಕೆಲ್ ತೆಗೆದುಕೊಂಡಿರುವ ದಿಟ್ಟ ನಿಲುವು ಪ್ರಶಂಸೆಗೆ ಪಾತ್ರವಾಗಿದೆ. ಹಲವು ದಶಕಗಳ ಕಾಲ ಬದ್ಧವೈರಿಗಳಂತೆ ವರ್ತಿಸಿದ್ದ ಕ್ಯೂಬಾ ಹಾಗೂ ಅಮೆರಿಕ ನಡುವೆ ಸ್ನೇಹದ ತಂಗಾಳಿ ಬೀಸತೊಡಗಿದೆ. ಕ್ಯೂಬಾದ ರಾಜಧಾನಿ ಹವಾನಾದಲ್ಲಿ ಮತ್ತು ಅಮೆರಿಕದ ವಾಷಿಂಗ್ಟನ್‌ನಲ್ಲಿ ಪರಸ್ಪರ ರಾಷ್ಟ್ರಗಳ ರಾಜತಾಂತ್ರಿಕ ಕಚೇರಿಗಳು 2015ರಲ್ಲಿ ಕಾರ್ಯಾರಂಭಿಸುವ ಮೂಲಕ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಸಂಚಲನ ಮೂಡಿಸಿದೆ. ದಕ್ಷಿಣ ಚೀನಾ ಸಮುದ್ರ ವಿವಾದ 2015ರಲ್ಲಿ ಮತ್ತೆ ತೀವ್ರಗೊಂಡು ಮುಂದುವರಿದಿದೆ. ಐಸಿಸ್ ಉಗ್ರರ ದಾಳಿಗಳು ಈ ವರ್ಷದ ಅತಿ ಭಯಾನಕ ಘಟನೆಗಳಾಗಿ ದಾಖಲಾಗಿವೆ. ಐಸಿಸ್ ತನ್ನ ಉಗ್ರ ಹಸ್ತವನ್ನು ವ್ಯಾಪಕವಾಗಿ ಚಾಚತೊಡಗಿದ್ದು ಕುವೈತ್, ಲೆಬನಾನ್, ಟರ್ಕಿ, ಈಜಿಪ್ಟ್, ಸೌದಿ ಅರೇಬಿಯ, ಲಿಬಿಯ, ಟ್ಯುನಿಶಿಯಾ ಹಾಗೂ ಪ್ಯಾರಿಸ್‌ನಲ್ಲೂ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ.
ಗ್ರೀಸ್ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿ ಪಾರುಗಾಣಿಕೆ ಒಪ್ಪಂದದ ಮೂಲಕ ತನ್ನ ಅರ್ಥವ್ಯವಸ್ಥೆಯನ್ನು ಮುಂದುವರಿಸಿದೆ.

ರಾಜಕೀಯ ಬೆಳವಣಿಗೆಯಲ್ಲಿ ಆಸ್ಟ್ರೇಲಿಯದಲ್ಲಿ ತನ್ನ ಪಕ್ಷದಿಂದಲೇ ಆಂತರಿಕ ಬಂಡಾಯದಲ್ಲಿ ಹೊರದೂಡಲ್ಪಟ್ಟ ಟೋನಿ ಅಬೊಟ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅಮೆರಿಕದಲ್ಲಿ 2016ರಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಅದಕ್ಕೆ ವೇದಿಕೆ ಸಜ್ಜುಗೊಂಡಿದೆ. ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸ್ಪರ್ಧೆಗಿಳಿದು ಜಯ ಗಳಿಸಿದಲ್ಲಿ ಅಮೆರಿಕದ ಮೊತ್ತ ಮೊದಲ ಮಹಿಳಾ ಅಧ್ಯಕ್ಷರೆಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ರಿಪಬ್ಲಿಕನ್ ಪಕ್ಷದ ಮುಂಚೂಣಿ ಅಭ್ಯರ್ಥಿಯಾಗಿರುವ ಉದ್ಯಮಿ ಡೊನಾಲ್ಡ್ ಟ್ರಂಪ್, ‘ಮುಸ್ಲಿಮರಿಗೆ ಅಮೆರಿಕ ಪ್ರವೇಶ ನಿಷೇಧಿಸಬೇಕು’ ಎಂಬ ಪ್ರಚಾರಾಭಿಯಾನದಲ್ಲಿ ನೀಡಿರುವ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ.


ಸಿರಿಯ ಸಂಘರ್ಷ; ನಿರಾಶ್ರಿತರ ಗೋಳು
ಸಿರಿಯ ಸರಕಾರ ಹಾಗೂ ಬಂಡುಕೋರರ ನಡುವಿನ ಸಂಘರ್ಷವು ತಾರಕ ಸ್ಥಿತಿಯನ್ನು ಕಂಡ 2015ರಲ್ಲಿ ಸಾವಿರಾರು ಜನರು ಸಾವುನೋವು ಅನುಭವಿಸಿದ್ದಾರೆ. ಪ್ರಸಕ್ತ 13.5 ದಶಲಕ್ಷ ಜನರು ಮಾನವೀಯ ನೆರವಿನ ನಿರೀಕ್ಷೆಯಲ್ಲಿದ್ದಾರೆ.
43 ಲಕ್ಷ ಮಂದಿ ನಿರಾಶ್ರಿತರಾಗಿದ್ದು, 66 ಲಕ್ಷ ಜನರು ಸ್ಥಳಾಂತರಗೊಂಡಿರುವುದಾಗಿ ಅಂದಾಜಿಸಲಾಗಿದೆ.
ಬಹುತೇಕ ಸಿರಿಯ ನಿರಾಶ್ರಿತರು ಟರ್ಕಿ, ಲೆಬನಾನ್,ಜೋರ್ಡಾನ್,ಇರಾಕ್ ಹಾಗೂ ಈಜಿಪ್ಟ್ ಮೊದಲಾದ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪಲಾಯನಗೈದಿರುವುದಾಗಿ ಅಂದಾಜಿಸಲಾಗಿದೆ. ಸಿರಿಯ ಸಂಘರ್ಷದ ದುಷ್ಟರಿಣಾಮದಿಂದಾಗಿ ಸಾವಿರಾರು ಮಕ್ಕಳು ನ್ಯೂನಪೋಷಣೆ, ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯ ಎದುರಿಸುವಂತಾಗಿದೆ.ಲಕ್ಷಾಂತ ಮಕ್ಕಳು ಶಾಲೆಗಳನ್ನು ಅರ್ಧದಲ್ಲೇ ತೊರೆಯುವಂತಾಗಿ ಶಿಕ್ಷಣ ವಂಚಿತರಾಗಿದ್ದಾರೆ.
ನಿರಾಶ್ರಿತ ಸಿರಿಯನ್ನರಲ್ಲಿ ಶೇಕಡಾ 10ರಷ್ಟು ಮಂದಿ ಆಶ್ರಯಕ್ಕಾಗಿ ಯುರೋಪ್ ಪ್ರವೇಶಿಸಿದ್ದಾರೆ. ಸಿರಿಯದಲ್ಲಿ ಕದನ ವಿರಾಮ ಏರ್ಪಡಿಸಿ ಶಾಂತಿ ಸ್ಥಾಪಿಸುವ ಸಂಬಂಧ ಎಲ್ಲ ರಾಷ್ಟ್ರಗಳು ಅನುಸರಿಸಬೇಕಾದ ರಾಜತಾಂತ್ರಿಕ ಕ್ರಮಗಳ ಬಗ್ಗೆ ವಿಶ್ವಸಂಸ್ಥೆ ಸಮಾಲೋಚನೆ ನಡೆಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X