ದುಬೈನ "ದಿ ಅಡ್ರೆಸ್ ಡೌನ್‌ಟೌನ್ ಹೋಟೆಲ್ ನಲ್ಲಿ ಬೆಂಕಿ ಅನಾಹುತ ; 16 ಮಂದಿಗೆ ಗಾಯ

ದುಬೈ,ಜ.1: ಜಗತ್ತಿನ ಅತ್ಯಂತ ಎತ್ತರದ ಗಗನಚುಂಬಿ ಕಟ್ಟಡ ದುಬೈನ ಬುರ್ಜ್ ಖಲೀಫಾ ಬಳಿಯ ಪಂಚ ತಾರಾ ಹೋಟೆಲ್ ದಿ ಅಡ್ರೆಸ್ ಡೌನ್‌ಟೌನ್‌ನಲ್ಲಿ ಗುರುವಾರ ರಾತ್ರಿ ಹೊಸ ವರ್ಷದ ಸಂಭ್ರಮಾಚಾರಣೆ ಸಂದರ್ಭದಲ್ಲಿ ಬೆಂಕಿ ಬಿದ್ದ ಪರಿಣಾಮವಾಗಿ 16 ಮಂದಿಗೆ ಗಾಯವಾಗಿದೆ.
ಹೊಸ ವರ್ಷದ ಸಂಭ್ರಮಾಚಾರಣೆಯ ವೇಳೆ ಸಂಭವಿಸಿದ ಬೆಂಕಿ ಅನಾಹುತದಿಂದಾಗಿ ಭಾರೀ ನಷ್ಟ ಉಂಟಾಗಿದೆ.
302 ಮೀಟರ್ ಎತ್ತರದ ಹೋಟೆಲ್ ಕಟ್ಟಡಕ್ಕೆ ಬೆಂಕಿ ತಗಲಿದಾಗ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು.
Next Story