ಜ.8ರಿಂದ ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವ
ಕಾಸರಗೋಡು : ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವ ಜನವರಿ ನಾಲ್ಕರಿಂದ ಎಂಟರ ತನಕ ಕಾಸರಗೋಡು ಸರಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ ನಡೆಯಲಿದ್ದು , ಸಿದ್ದತೆ ಪೂರ್ಣಗೊಂಡಿದೆ ಎಂದು ಸ್ವಾಗತ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು . ನಾಲ್ಕರಂದು ವೇದಿಕೇತರ ಹಾಗೂ ಐದರಂದು ವೇದಿಕೆ ಸ್ಪರ್ಧೆಗಳು ನಡೆಯಲಿದೆ .
ಎಂಟು ವೇದಿಕೆಗಳಲ್ಲಿ ಸ್ಪರ್ಧೆ ನಡೆಯ ಲಿದ್ದು , ಪ್ರಾಥಮಿಕ , ಹೈಸ್ಕೂಲ್ , ಹಯರ್ ಸೆಕಂಡರಿ ವಿಭಾಗಗಳಲ್ಲಾಗಿ ೨೯೮ ಸ್ಪರ್ಧೆಗಳು ನಡೆಯಲಿದ್ದು , 4426 ಸ್ಪರ್ಧಾಳುಗಳು ಪಾಲ್ಗೊಳ್ಳುವರು .
ಬೆಳಿಗ್ಗೆ 9.30 ರಿಂದ ಸಂಜೆ 7 ಗಂಟೆ ತನಕ ಸ್ಪರ್ಧೆ ನಡೆಯಲಿದೆ .
ಕಲೋತ್ಸವ ವನ್ನು ಜನವರಿ ನಾಲ್ಕರಂದು ಸಂಜೆ ನಾಲ್ಕು ಗಂಟೆಗೆ ಶಾಸಕ ಎನ್ . ಎ ನೆಲ್ಲಿಕುನ್ನು ಉದ್ಘಾಟಿಸುವರು.
ಎಂಟರಂದು ನಡೆಯುವ ಸಮಾರೋಪ ಸಮಾರಂಭವನ್ನು ಸಂಸದ ಪಿ. ಕರುಣಾಕರನ್ ಉದ್ಘಾಟಿಸುವರು . ಸುದ್ದಿಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷೆ ಭೀಫಾತಿಮ್ಮ ಇಬ್ರಾಹಿಮ್ , ಪಾದೂರು ಕುನ್ಚಾಮು ಹಾಜಿ,ಮಿಶ್ರೀಯ ಹಮೀದ್, ಕೆ. ರತೀಶ್ , ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು