ಡಿಪಿಎಆರ್ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಅತೀಕ್ ನೇಮಕ

ಮಂಗಳೂರು, ಜ.2: ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಕರ್ನಾಟಕ ಸರಕಾರದ ಡಿಪಿಎಆರ್ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದು, ಜ.1ರಿಂದ ಕರ್ತವ್ಯ ಆರಂಭಿಸಿದ್ದಾರೆ. 3 ವರ್ಷಗಳಿಂದ ವಿಶ್ವ ಬ್ಯಾಂಕ್‌ನ ಹಿರಿಯ ಸಲಹೆಗಾರರಾಗಿ ಹಾಗೂ ಕಾರ್ಯನಿರ್ವಾಹಕ ನಿರ್ದೇ ಶಕರಾಗಿ ವಾಶಿಂಗ್ಟನ್ ಡಿ.ಸಿ.ಯಲ್ಲಿ ಸೇವೆ ಸಲ್ಲಿಸಿರುವ ಅತೀಕ್, ಈ ಹಿಂದೆ ಐದು ವರ್ಷ ಪ್ರಧಾನ ಮಂತ್ರಿಯ ಸಲಹೆ ಗಾರರಾಗಿ ಸೇವೆ ಸಲ್ಲಿಸಿದ್ದರು.
ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೃಷಿ ಕುಟುಂಬದಿಂದ ಬಂದಿರುವ ಎಲ್.ಕೆ.ಅತೀಕ್, ಮಂಗಳೂರು ಕಂದಾಯ ಉಪ ವಿಭಾಗದ ಅಸಿಸ್ಟೆಂಟ್ ಕಮಿಷನರ್ ಆಗಿ ಮೊದಲು ಕಾರ್ಯನಿರ್ವಹಿಸಿದ್ದು, ಬಳಿಕ ಮಂಡ್ಯ, ಹಾಸನ ಜಿಲ್ಲಾಧಿಕಾರಿಯಾಗಿ ಹಾಗೂ ಕರ್ನಾಟಕ ಸರಕಾರದ ಸರ್ವಶಿಕ್ಷಣ ಅಭಿಯಾನದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
Next Story





