‘ಜಿಪಂ, ತಾಪಂ ಚುನಾವಣೆಗೆ ಒಮ್ಮತದ ಅಭ್ಯರ್ಥಿಗಳ ಆಯ್ಕೆ’

ಉಡುಪಿ, ಜ.2: ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯ ಪ್ರಯುಕ್ತ ಗ್ರಾಮಮಟ್ಟದಲ್ಲಿ ಕಾರ್ಯಕರ್ತರ ಸಭೆಯನ್ನು ಕರೆದು ಆಕಾಂಕ್ಷಿಗಳನ್ನು ಗುರುತಿಸುವ ಕೆಲಸ ಶೀಘ್ರದಲ್ಲೇ ನಡೆಯ ಬೇಕು. ಪ್ರತಿ ಕ್ಷೇತ್ರಕ್ಕೂ ಸರ್ವಸಮ್ಮತ ಅಭ್ಯರ್ಥಿಗಳ ಆಯ್ಕೆ ನಡೆಯಬೇಕು ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದ ಜಿಪಂ ಹಾಗೂ ತಾಪಂ ಚುನಾವಣಾ ವೀಕ್ಷಕರ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಕಾರಿಗಳ ಸಭೆಯಲ್ಲಿ ಪ್ರಮೋದ್ ಮಧ್ವರಾಜ್ ಮಾತನಾಡುತ್ತಿದ್ದರು. ಇದಕ್ಕಾಗಿ ಈಗಾಗಲೇ ವೀಕ್ಷಕರನ್ನು ನೇಮಿಸಲಾಗಿದ್ದು, ಒಮ್ಮತದ ಅಭ್ಯರ್ಥಿ ಗಳನ್ನು ಗುರುತಿಸುವಲ್ಲಿ ಅವರು ಕಾರ್ಯೊ ೀನ್ಮುಖರಾಗಬೇಕೆಂದು ಎಂದು ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಜಿಪಂ ಸದಸ್ಯ ದಿವಾಕರ ಕುಂದರ್, ಮಾಜಿ ನಗರಸಭಾ ಉಪಾಧ್ಯಕ್ಷ ಕುಶಲ್ ಶೆಟ್ಟಿ ಚುನಾವಣೆ ಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮಾನದಂಡ ಹಾಗೂ ಒಮ್ಮತದ ಆಯ್ಕೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ನಗರಸಭಾ ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಕೇಶವ ಕೋಟ್ಯಾನ್, ಮುರಳಿ ಶೆಟ್ಟಿ, ಬಿ. ನರಸಿಂಹಮೂರ್ತಿ, ದಿನೇಶ್ ಪುತ್ರನ್, ಪ್ರಕಾಶ್ ಕೊಡವೂರು, ಮನೋಜ್ ಕರ್ಕೇರಾ, ಸುಜಯ ಪೂಜಾರಿ, ಪ್ರಶಾಂತ್ ಪೂಜಾರಿ, ಮೀನಾಕ್ಷಿ ಮಾಧವ ಬನ್ನಂಜೆ, ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಸೆಲಿನ್ ಕರ್ಕಡ, ಯತೀಶ್ ಕರ್ಕೇರಾ, ಪೃಥ್ವಿರಾಜ್ ಶೆಟ್ಟಿ, ಶೋಭಾ ಪೂಜಾರಿ, ಶಶಿರಾಜ್ ಕುಂದರ್, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ನಾರಾಯಣ ಕುಂದರ್, ಶಾಂತರಾಮ ಸಾಲ್ವಾಂಕರ್, ಜಾನ್ ಮಣಿಪಾಲ್ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಕೆ.ಜನಾರ್ದನ ಭಂಡಾರ್ಕರ್ ಕಾರ್ಯಕ್ರಮ ನಿರೂಪಿಸಿ, ವಕ್ತಾರ ಭಾಸ್ಕರ್‌ರಾವ್ ಕಿದಿಯೂರು ವಂದಿಸಿದರು.





