ಮಂಗಳೂರು ವಿವಿಯಲ್ಲಿ ಮಾಧ್ಯಮ ಕೇಂದ್ರ ಉದ್ಘಾಟನೆ

ಕೊಣಾಜೆ, ಜ.2: ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಪತ್ರಕರ್ತರಿಗಾಗಿ ವಿವಿಯ ನೇತ್ರಾವತಿ ಅತಿಥಿಗೃಹದಲ್ಲಿ ತೆರೆಯಲಾದ ಮಂಗಳೂರು ವಿವಿ ಮಾಧ್ಯಮ ಕೇಂದ್ರವನ್ನು ಶನಿವಾರ ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ, ‘ಮಂಗಳ ಯೋಜನೆ’, ಮಂಗಳೂರು ವಿವಿ ಪ್ರಾರಂಭಿಸಲಿರುವ ವಿನೂತನ ಗ್ರಾಮ ದತ್ತು ಕಾರ್ಯಕ್ರಮದ ಕಿರುಪರಿಚಯ ಮಾಡಿದರು. ಬಳಿಕ ಮಾಧ್ಯಮ ಸ್ಪಂದನ ಸಂವಾದ ಕಾರ್ಯಕ್ರಮ ನಡೆಯಿತು. ಕುಲಸಚಿವ ಪ್ರೊ.ಟಿ.ಡಿ.ಕೆಂಪರಾಜು, ಹಣಕಾಸು ಅಕಾರಿ ಡಾ.ರೇಗೊ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ಹಾಗೂ ಉಪ ಕುಲಸಚಿವರು, ಡೀನ್, ಪ್ರೊೆಸರ್‌ಗಳು ಹಾಗೂ ವಿವಿಧ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು. ಮಂಗಳೂರು ವಿವಿ ಸಮೂಹ ಸಂವಹನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ. ಜಿ.ಪಿ.ಶಿವರಾಂ ಸ್ವಾಗತಿಸಿದರು.
Next Story





