Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಾಮಾಜಿಕ ಚಳವಳಿಯ ಹರಿಕಾರೆ ಸಾವಿತ್ರಿಬಾಯಿ...

ಸಾಮಾಜಿಕ ಚಳವಳಿಯ ಹರಿಕಾರೆ ಸಾವಿತ್ರಿಬಾಯಿ ಫುಲೆ

ಬಸವರಾಜು ಮರಿಸ್ವಾಮಿಬಸವರಾಜು ಮರಿಸ್ವಾಮಿ3 Jan 2016 1:17 AM IST
share
ಸಾಮಾಜಿಕ ಚಳವಳಿಯ ಹರಿಕಾರೆ ಸಾವಿತ್ರಿಬಾಯಿ ಫುಲೆ

ಇಂದು ದೇಶದ ಮೊದಲ ಶಿಕ್ಷಕಿಯ ಜನ್ಮ ದಿನ

ಅಂದು ಎಲ್ಲಿ ನೋಡಿದರೂ ಕಿತ್ತು ತಿನ್ನುವ ಬಡತನ, ದೇಶದಲ್ಲಿ ಒಂದರ ಮೇಲೊಂದು ಕಾಯಿಲೆಗಳ ಸರಮಾಲೆ, ಎಲ್ಲಿ ನೋಡಿದರೂ ನೂರಾರು ಪಂಗಡಗಳು ತುಂಬಿ ತುಳುಕುತ್ತಿದ್ದ ಜಾತೀಯತೆ. ಎಲ್ಲರ ಮುಖದಲ್ಲೂ ಒಂದು ರೀತಿಯ ಅಸಹಾಯಕತೆ. ಅನಾಗರಿಕತೆಯೇ ತುಂಬಿ ತುಳುಕುತ್ತಿರುವ ಸಮಯದಲ್ಲಿ ಈ ದೇಶದ ಒಂದು ಅಮೂಲ್ಯ ರತ್ನ ಮಹರಾಷ್ಟ್ರದ ಪುಣೆ ಜಿಲ್ಲೆಯ ಖಂಡಾಲಾ ತಾಲೂಕಿನ ಶಿರವಳಿ ಹತ್ತಿರದ ನಾಯಗಡ್ ಎಂಬ ಹಳ್ಳಿಯಲ್ಲಿ ಲಕ್ಷೀಬಾಯಿ ಮತ್ತು ಖಂಡೋಜಿ ನವಸೆ ಪಾಟೀಲ್ ದಂಪತಿಯ ಜೇಷ್ಠ ಪುತ್ರಿಯಾಗಿ 1831ನೆ ಜನವರಿ 3 ರಂದು ಜನಿಸಿದ ಮಾತೆ ಸಾವಿತ್ರಿ ತನ್ನ ಬಾಲ್ಯವನ್ನು ತುಂಟತನದಿಂದ ಎಲ್ಲರ ಮನಗೆದ್ದು ಮನೆಯವರ ಅಚ್ಚುಮೆಚ್ಚಿನ ಮುದ್ದಿನ ಮಗಳಾಗಿ ಬೆಳೆದಳು.

 ಅಂದಿನ ಬಾಲ್ಯ ವಿವಾಹ ಪದ್ಧತಿಯ ಪ್ರಕಾರ ಕೇವಲ 9 ವರ್ಷದ ಮುಗ್ಧ ಬಾಲೆಯನ್ನು ಸುಮಾರು 13 ವರ್ಷ ವಯಸ್ಸಿನ ಜ್ಯೋತಿರಾವ್ ಫುಲೆಯವರೊಂದಿಗೆ 1840ರಲ್ಲಿ ವಿವಾಹ ಮಾಡಿಕೊಡಲಾಯಿತು. ಆದರೆ ಸಾವಿತ್ರಿ ಬಾಯಿ ತಂದೆಯ ಮನೆಯಲ್ಲಿ ಸೇವಾ ಮನೋಭಾವನೆಯನ್ನು ಕಲಿತ್ತಿದ್ದಳೇ ಹೊರತು ಅಕ್ಷರ ಕಲಿಕೆಗೆ ಅವಕಾಶವಿರಲಿಲ್ಲ. ನಂತರ ಮಹಾತ್ಮ ಜ್ಯೋತಿ ಬಾ ಫುಲೆಯವರು ಚಿಕ್ಕಮ್ಮನವರಾದ ಸುಗುಣಾಬಾಯಿ ಕ್ಷೀರಸಾಗರ ಮತ್ತು ಸಾವಿತ್ರಿಬಾಯಿಯವರಿಗೆ ಫುಲೆಯವರ ಮನೆಯಲ್ಲಿ ಸ್ವತಃ ತಾವೇ ಅಕ್ಷರಭ್ಯಾಸ ಮಾಡಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಬ್ರಿಟಿಷ್ ಮಹಿಳೆ ಮಿಚಲ್ ಸ್ಥಾಪಿಸಿದ್ದ ನಾರ್ಮಲ್ ಶಾಲೆಗೆ 3ನೆ ತರಗತಿಗೆ ಸೇರಿಸಿದರು. ಮುಂದೆ ಸಾವಿತ್ರಿಬಾಯಿಯವರು ಮುಕ್ತ ಮನಸ್ಸಿನಿಂದ ಶಿಕ್ಷಣದ ಜ್ಞಾನ ಪಡೆದರು, ವಿದ್ಯಾರ್ಥಿ ದೆಸೆಯಲ್ಲಿ ಸಾವಿತ್ರಿಬಾಯಿ ನೀಗ್ರೊಗಳ ವಿಮೋಚನೆಗಾಗಿ ಹೋರಾಡಿದ ಕ್ರಾಂತಿಕಾರಿ ಥಾಮಸ್ ಕ್ಲಾರ್ಕಸನ್‌ರ ಚರಿತ್ರೆಯನ್ನು ಓದಿ ಪ್ರಭಾವಿತರಾದರು. ಮುಂದೆ, ಭಾರತದ ಶೂದ್ರಾತಿ ಶೂದ್ರರನ್ನು ದೈಹಿಕ ಮತ್ತು ಮಾನಸಿಕ ಗುಲಾಮಗಿರಿಯಿಂದ ಮುಕ್ತಗೂಳಿಸಲು ಹೋರಾಡುತ್ತಿದ್ದ ತನ್ನ ಪತಿ ಮಹಾತ್ಮ ಜ್ಯೋತಿಬಾ ಫುಲೆಯವರೊಡನೆ ಕೈ ಜೋಡಿಸಿದರು.

ಶೂದ್ರಾತಿ ಶೂದ್ರರನ್ನು ಗುಲಾಮಗಿರಿಯಿಂದ ಮುಕ್ತಗೂಳಿಸಲು ಶಿಕ್ಷಣದ ಆವಶ್ಯಕತೆ ಇದೆಯೆಂದು ತಿಳಿದ ಮಹಾತ್ಮ ಜ್ಯೋತಿಬಾ ಫುಲೆಯವರು ಬುಧವಾರಪೇಟೆಯ ಭೀಡೆ ಎಂಬವರ ವಾಡಿಕೆಯಲ್ಲಿ (ಮನೆಯಲ್ಲಿ) ಇಡೀ ದೇಶದಲ್ಲೇ ಮೊಟ್ಟಮೊದಲ ಹೆಣ್ಣು ಮಕ್ಕಳ ಶಾಲೆಯನ್ನು 1848ನೆ ಜನವರಿ 1ರಂದು ತೆರೆದರು. ಆ ಶಾಲೆಗೆ ಶಿಕ್ಷಕಿಯಾಗಿ ಮಾತೆ ಸಾವಿತ್ರಿಬಾಯಿ ಫುಲೆಯವರನ್ನೇ ನೇಮಕ ಮಾಡಿದರು. ಹೀಗೆ ಭರತಖಂಡದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂಬ ಖ್ಯಾತಿಗಳಿಸಿದರು. ನಂತರದ ದಿನಗಳಲ್ಲಿ ಪುಣೆ ನಗರದಲ್ಲಿ ಅಸ್ಪಶ್ಯಕೇರಿಯಲ್ಲಿ ಅಸ್ಪಶ್ಯ ಮಕ್ಕಳಿಗೆ ಶಾಲೆಯೊಂದನ್ನು ತೆರೆದರು. ಈ ಶಾಲೆಗೆ ಶಿಕ್ಷಕಿಯಾಗಿ ಜ್ಯೋತಿಬಾ ಫುಲೆಯವರ ಚಿಕ್ಕಮ್ಮ ಸುಗುಣಾಬಾಯಿ ಕ್ಷೀರಸಾಗರ ನೇಮಕವಾದರು, ನಂತರ ಮಾತೆಯವರು ಇಲ್ಲಿಗೆ ಸೇರಿಕೊಂಡರು. ಇದು ದೇಶದಲ್ಲೇ ಅಸ್ಪಶ್ಯರಿಗಾಗಿಯೇ ತೆರೆದ ಮೊದಲ ಶಾಲೆ.

 ಸಾವಿರಾರು ವರ್ಷಗಳಿಂದ ವಿದ್ಯೆಯಿಂದ ವಂಚಿತ ರಾಗಿದ್ದ ಶೂದ್ರಾತಿ ಶೂದ್ರರು ಮತ್ತು ಹೆಣ್ಣು ಮಕ್ಕಳಿಗೆ ಶಾಲೆ ತೆರೆದುದನ್ನು ಊರಿನ ತತ್ವ ವಿರೋಧಿ ಕೆಲಸ ಎಂದು ಊರಿನ ಜನರೆಲ್ಲಾ ಸೇರಿ ಜ್ಯೋತಿಬಾರನ್ನು ಮನೆಯಿಂದ ಹೊರಗೆ ಹಾಕಿಸಿದರು. ಆಗ ಪತಿಯ ಕ್ರಾಂತಿಕಾರಿ ಕೆಲಸಗಳಿಗೆ ಹೆಗಲು ಕೊಟ್ಟು ಪತಿಯೊಡನೆ ತಾನೂ ಮನೆ ತೊರೆದ ಧೀರ ಮಹಿಳೆ ಮಾತೆ ಸಾವಿತ್ರಿಬಾಯಿ ಫುಲೆ.

ಮನೆ ತೊರೆದ ಫುಲೆ ದಂಪತಿಗೆ ಆಶ್ರಯ ನೀಡಿದ್ದು ಜ್ಯೋತಿಬಾರ ಸ್ನೇಹಿತ ಉಸ್ಮಾನ್ ಶೇಖ್. ಇವರು ಸಹ ಸಮಾಜ ಚಿಂತಕರಾಗಿದ್ದರು, ಇವರ ಸೋದರಿ ಫಾತಿಮಾಶೇಖ್ ಸಾವಿತ್ರಿ ಬಾಯಿಯವರೊಡನೆ ಸೇರಿ ಅಸ್ಪಶ್ಯರಿಗಾಗಿ ತೆರೆದ ಶಾಲೆಯ ಸಂಚಾಲಕಿಯಾದರು. ಮುಂದೆ ಅದೇ ಶಾಲೆಯ ಶಿಕ್ಷಕಿಯಾಗಿ ಸೇವೆಮಾಡಿ 19ನೆ ಶತಮಾನದ ಮೊದಲ ಮುಸ್ಲಿಮ್ ಶಿಕ್ಷಕಿಯಾದರು.

ಮಾತೆ ಸಾವಿತ್ರಿಬಾಯಿಯವರು ಶಾಲೆಗೆ ತೆರಳುವಾಗ ಇಲ್ಲ ಸಲ್ಲದ ತೊಂದರೆಗಳನ್ನು ನೀಡಿದ ಊರಿನ ಜನರು ಅವಹೇಳನಕಾರಿಯಾಗಿ ನಡೆದುಕೊಳ್ಳುತ್ತಿದ್ದರು, ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರು, ಕೆಲವರು ಉಗುಳುತ್ತಿದ್ದರು, ಮೊಟ್ಟೆ, ಕಲ್ಲು, ಸೆಗಣಿ-ಗಂಜಳವನ್ನು ಮೈ ಮೇಲೆ ಎಸೆಯುತ್ತಿದ್ದರು. ಇಷ್ಟೆಲ್ಲಾ ತೊಂದರೆಯ ನಡುವೆ ಸಾವಿತ್ರಿಬಾಯಿಯವರು ಶಾಲೆಗೆ ತುಂಬಾ ಆತಂಕದಿಂದಲೇ ಹೋಗುತ್ತಿದ್ದರು. ಮನೆಗೆ ಬಂದಾಗ ಪತಿಯವರೊಡನೆ ಈ ಎಲ್ಲಾ ಕಿರುಕುಳಗಳನ್ನು ತಿಳಿಸುತ್ತಿದ್ದರು, ಇವೆಲ್ಲದಕ್ಕೂ ಜ್ಯೋತಿ ಬಾ ಫುಲೆಯವರು ಮಡದಿಗೆ ಧೈರ್ಯ ತುಂಬಿ ಒಂದು ಒಳ್ಳೆಯ ಕೆಲಸ ಮಾಡುವಾಗ ಇಂತಹ ಎಷ್ಟೋ ಕಷ್ಟಗಳು ಬರುತ್ತವೆ, ಅದಕ್ಕೆಲ್ಲಾ ಹೆದರಬಾರದು, ಧೈರ್ಯಗೆಡಬಾರದು, ಮುಂದೆ ಇನ್ನೂ ಹವಾರು ಆಡಚಣೆಗಳು, ತೊಂದರೆಗಳು ಬರಬಹುದು. ಎಲ್ಲವನ್ನೂ ಎದುರಿಸಿ ಮುಂದೆ ಸಾಗಬೇಕೆಂದು ಧೈರ್ಯತುಂಬಿ ಶಾಲೆಗೆ ಕಳುಹಿಸುತ್ತಿದ್ದರು. ಶಾಲೆಗೆ ಹೋಗುವಾಗ ತಮ್ಮ ಕೈ ಚೀಲದಲ್ಲಿ ಪುಸ್ತಕಗಳ ಜೊತೆಗೆ ಮತ್ತೊಂದು ಜೊತೆ ಸೀರೆ, ರವಿಕೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಶಾಲೆಗೆ ಹೋದ ಕೂಡಲೆ ಕೊಳಕಾದ ಸೀರೆಯನ್ನು ತೆಗೆದು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದ ಸೀರೆಯನ್ನು ತೊಟ್ಟು ತರಗತಿಗೆ ತೆರಳುತ್ತಿದ್ದರು. ಹೀಗೆ ಮಾತೆ ಸಾವಿತ್ರಿಬಾಯಿ ಫುಲೆಯವರು ವಿವಿಧ ಸಂಕಷ್ಟಗಳನ್ನು ಬಹುಕಾಲ ಅನುಭವಿಸಬೇಕಾಯಿತು.

ಸಾವಿತ್ರಿಬಾಯಿ ಫುಲೆಯವರು ಶಾಲೆಗೆ ಹೋಗುವಾಗ ಕಲ್ಲನ್ನು ಎಸೆದವರಿಗೆ ಮೃದುವಾಗಿಯೇ ಉತ್ತರ ನೀಡುತ್ತಿದ್ದರು. ‘‘ನಾನು ನನ್ನ ಸಹೋದರಿಯರಿಗೆ ವಿದ್ಯೆ ಕಲಿಸಲು ಹೋಗುತ್ತಿರುವೆ. ನೀವು ಎಸೆಯುವ ಒಂದೊಂದು ಕಲ್ಲು, ಮೊಟ್ಟೆ, ಸೆಗಣಿ ನನಗೆ ಹೂವಿನ ಸಮಾನ. ನಾನು ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸುವುದನ್ನು ಬಿಡದೆ ಮುಂದುವರಿಸುತ್ತೇನೆ’’ ಎಂದು ತಿರುಗಿ ಹೇಳುವ ಛಲವು ಅವರಲ್ಲಿ ಬೆಳೆಯಿತು. ಹೀಗೆ ಶಿಕ್ಷಕಿಯಾಗಿ ಮುಂದುವರಿದ ಅವರು ಕ್ರಮೇಣ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

share
ಬಸವರಾಜು ಮರಿಸ್ವಾಮಿ
ಬಸವರಾಜು ಮರಿಸ್ವಾಮಿ
Next Story
X