ಮಂಗಳೂರು ನೂತನ ಪೊಲೀಸ್ ಕಮೀಷನರ್ ಎಂ ಚಂದ್ರಶೇಖರ್ ಅಧಿಕಾರ ಸ್ವೀಕಾರ

ಮಂಗಳೂರು ಪೊಲೀಸ್ ಕಮೀಷನರೇಟ್‍ಗೆ ನೂತನ ಕಮೀಷನರ್ ಆಗಿ ನೇಮಕಗೊಂಡ ಎಂ ಚಂದ್ರಶೇಖರ್ ಇಂದು ಅಧಿಕಾರ ಸ್ವೀಕರಿಸಿದರು.
ನಿರ್ಗಮನ ಪೊಲೀಸ್ ಕಮೀಷನರ್ ಮುರುಗನ್ ನೂತನ ಕಮೀಷನರ್ ಗೆ ಅಧಿಕಾರ ಹಸ್ತಾಂತರಿಸಿದರು.
ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಈ ಸಂದರ್ಭದಲ್ಲಿ ಮಾತನಾಡಿದ ನೂತನ ಕಮೀಷನರ್ ಎಂ ಚಂದ್ರಶೇಖರ್ ಕಾನೂನು ಶಿಸ್ತು ಪಾಲನೆ ಮುಖ್ಯವಾಗಿಟ್ಟುಕೊಂಡು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ತರಲಾಗುವುದು. ಮಂಗಳೂರು ನಗರದ ಬಗ್ಗೆ ಅಧ್ಯಯನ ಕೈಗೊಂಡು ಪೊಲೀಸ್ ವ್ಯವಸ್ಥೆ ಪ್ರಬಲಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು,
Next Story





