ಐಕಳಬಾವಾ ಕಾಂತಾಬಾರೆ-ಬೂದಬಾರೆ ಜೋಡುಕೆರೆ ಕಂಬಳಕ್ಕೆ ಚಾಲನೆ

ಕಿನ್ನಿಗೋಳಿ: ತುಳುನಾಡ ಇತಿಹಾಸ ಪ್ರಸಿದ್ಧ ಐಕಳಬಾವಾ ಕಾಂತಾಬಾರೆ-ಬೂದಬಾರೆ ಜೋಡುಕೆರೆ ಕಂಬಳವನ್ನು ಐಕಳಬಾವಾ ಮನೆತನದ ಯಜಮಾನರು ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಐಕಳಬಾವ ದೋಗಣ್ಣ ಶೆಟ್ಟಿ ಸ್ಥಳದ ದೈವ ದೇವರುಗಳಿಗೆ, ಜೋಡುಕೆರೆಗೆ ಪೂಜೆ ಸಲ್ಲಿಸಿ ದೀಪಬೆಳಗುವ ಮೂಲಕ ಆದಿತ್ಯವಾರ ಚಾಲನೆ ನೀಡಿದರು.
ಇದೇ ವೇಳೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಗೈದಿರುವ ಅನಂತ ಕೃಷ್ಣಭಟ್‌ರವರನ್ನು ಸನ್ಮಾನಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮುಲ್ಕಿ ವಿಶೇಷ ತಹಾಶಿಲ್ದಾರ್ ಮುಹಮ್ಮದ್ ಇಸ್ಹಾಕ್, ಮುಂಬೈ ಕಂಬಳ ಸಮಿತಿಯ ಅಧ್ಯಕ್ಷ ಕುಶಾಲ್ ಭಂಡಾರಿ ಐಕಳಬಾವ, ಪ್ರಧಾನ ಕಾರ್ಯದರ್ಶೀ ಗಣನಾಥ ಜೆ.ಶೆಟ್ಟಿ, ಕೋಶಾಧಿಕಾರಿ ಪುರಂದರ ವಿ. ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾರ್ಯಧ್ಯಕ್ಷ ಚಿತ್ತರಂಜನ್ ಭಂಡಾರಿ, ಕೋಶಾಧಿಕಾರಿ ಪ್ರಕಾಶ್ ಪಡುಹಿತ್ಲು, ಕೃಷ್ಣಮಾರ್ಲ ಹಿರಿಮನೆ ಐಕಳ, ಸಂಚಾಲ ಮುರಳೀಧರ ಶೆಟ್ಟಿ ಐಕಳ, ಭಾಸ್ಕರ ಕೋಟ್ಯಾನ್, ಗುಣಪಾಲ ಕಡಂಬ, ಶರ್ವತ್ತೂರು ಭಾಸ್ಕರ್ ಶೆಟ್ಟಿ, ಬೆಳ್ಳಿಪಾಡಿ ಹರಿಪ್ರಸಾದ್ ರೈ, ಡಾ.ಎಡ್ವಿನ್ ಲೂಯಿಸ್, ಕರ್ನಾಟಕ ಬ್ಯಾಂಕ್‌ನ ಮ್ಯಾನೇಜರ್ ರಘುನಾಥ ಕಾರಂತ, ಭುವನಾಭಿರಾಮ ಉಡುಪ, ಯೋಗೀಶ್ ರಾವ್, ಸಂಜೀವ ಶೆಟ್ಟಿ ಐಕಳ, ಸಾಯಿನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.





