ಹೆಡ್ ಟೂ ಹೆಡ್: ದ್ವೇಷದ ಜತೆಗೆ ಮುಖಾಮುಖಿ

ಕೋ ಪ ಮತ್ತು ಅಸಹಿಷ್ಣುತೆ ಎನ್ನುವುದು ಮೋಹನ್‌ದಾಸ್ ಕರಮಚಂದ ಗಾಂಧಿ ಕಂಡುಕೊಂಡಂತೆ, ಸಮರ್ಪಕ ಅರ್ಥೈಸಿಕೊಳ್ಳುವಿಕೆಯ ವಿರೋಧಾಭಾಸಗಳು. ಆಧುನಿಕ ಭಾರತದಲ್ಲಿ ಬದುಕಿದ್ದು ಒಂದು ವೇಳೆ ಮಹಾತ್ಮ ಗಾಂಧೀಜಿ ತಮ್ಮ ಟ್ವಿಟ್ಟರ್ ಹಾಗೂ ಫೇಸ್‌ಬುಕ್ ಪುಟದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಿದ್ದರಾ? ಬಹಳಷ್ಟು ಹಿಂದೆಯೇ ಭಕ್ತರು ಎಂದು ಕರೆದುಕೊಂಡಿದ್ದ ಹಾಗೂ ಭಾರತದ ವಿಚಕ್ಷಣಾ ದಳದ ಮಾಜಿ ಅಧಿಕಾರಿ ಬಿ.ರಾಮನ್ ಅವರಿಂದ ಅವಹೇಳನ, ದುರುದ್ದೇಶದ ಟೀಕೆ, ತಪ್ಪುಮಾಹಿತಿ ಹಾಗೂ ಚಾರಿತ್ರ ಹನನಕ್ಕೆ ಆಕ್ರೋಶಕ್ಕೆ ಗುರಿಯಾಗಿದ್ದ ದೇಶದ ಬಲಪಂಥೀಯ ಇಂಟರ್‌ನೆಟ್ ರಾಕ್ಷಸರ ಕ್ರೋಧ ಹಾಗೂ ಅಸಹಿಷ್ಣುತೆ ಬಗ್ಗೆ ಗಾಂಧಿ ಏನು ಮಾಡುತ್ತಿದ್ದರು?
ಭಕ್ತಸೇನೆಯ ಕೋಪದ ಬೂಟಾಟಿಕೆಯನ್ನು ದೂರದಿಂದ ನೋಡುವುದು ಒಂದಂಶ. ಇನ್ನೊಂದು ಕಡೆಯಲ್ಲಿ ಅವರ ಅಸಾಧ್ಯ ದ್ವೇಷ ಹಾಗೂ ಕ್ರೋಧ ಇನ್ನೊಂದು ಅಂಶ. ಕಳೆದ ಮೂರು ವರ್ಷಗಳಿಂದ ಅಲ್ ಜಝೀರಾ ಇಂಗ್ಲಿಷ್ ವಾಹಿನಿಯಲ್ಲಿ ಮೂಡಿಬರುತ್ತಿರುವ ಹೆಡ್ ಟೂ ಹೆಡ್ ಕಾರ್ಯಕ್ರಮದಲ್ಲಿ ನಾನು ವಿಶ್ವದ ಎಲ್ಲೆಡೆಯ ಗಣ್ಯವ್ಯಕ್ತಿಗಳನ್ನು ಸುಮಾರು 30 ನಿಮಿಷಗಳ ಕಾಲ ಸಂದರ್ಶಿಸುತ್ತೇನೆ. ಇಸ್ರೇಲಿ ಸೆಟ್ಲರ್ ಮುಖಂಡರ ದನಿ ದಯಾನ್‌ರಿಂದ ಹಿಡಿದು ಹೊಸ ವಿಜ್ಞಾನಿ ರಿಚರ್ಡ್ ಡಾಕಿನ್ಸ್, ಪಾಕಿಸ್ತಾನಿ ಐಎಸ್‌ಐ ಮುಖ್ಯಸ್ಥ ಅಸಾಧ್ ದುರಾನಿವರೆಗೂ ಸಂದರ್ಶನ ಮಾಡಿದ್ದೇನೆ.
ಇಷ್ಟಾಗಿಯೂ ಕಳೆದ ಕೆಲ ದಿನಗಳಿಂದ ನನಗೆ ಆನ್‌ಲೈನ್‌ನಲ್ಲಿ ಬರುತ್ತಿರುವ ಇಷ್ಟು ಪ್ರಮಾಣದ ದಾಳಿಯನ್ನು ನಾನು ಇದುವರೆಗೂ ಕಂಡಿಲ್ಲ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಆರೆಸ್ಸೆಸ್‌ನ ಮಾಜಿ ವಕ್ತಾರ ರಾಮ್‌ಮಾಧವ್ ಅವರ ಸಂದರ್ಶನಕ್ಕೆ ಪ್ರತಿಯಾಗಿ ಇದು ವ್ಯಕ್ತವಾಗುತ್ತಿರುವುದು. ನೈಜೀರಿಯ, ಇಸ್ರೇಲ್, ಈಜಿಪ್ಟ್, ಪಾಕಿಸ್ತಾನ, ಫೆಲೆಸ್ತೀನ್, ಅಮೆರಿಕ ಅಥವಾ ಬ್ರಿಟನ್‌ನಿಂದಲ್ಲ. ಬಹುಶಃ ನರಕ ಎನ್ನುವುದು ಹಿಂದೂ ರಾಷ್ಟ್ರೀಯವಾದಿಗಳು ಧಿಕ್ಕರಿಸುವಷ್ಟು ಘೋರವಲ್ಲ. ನನ್ನನ್ನು ನಿಕಟ ಇಸ್ಲಾಮಿಕ್‌ವಾದಿ, ಐಸಿಸ್‌ಗೆ ನೆರವು ನೀಡುತ್ತಿರುವವ ಎಂದು ತೆಗಳಿ ಮಾನಹಾನಿ ಮಾಡಲಾಗಿದೆ. ಭಕ್ತಿ ರಾಜಕೀಯದಲ್ಲಿ ಅವಹೇಳನದ ಅತ್ಯುನ್ನತ ಪದ ಎನಿಸಿದ ‘ಪಾಕಿಸ್ತಾನಿ’ ಎಂದು ನನ್ನನ್ನು ಜರೆಯಲಾಗಿದೆ.
ವಾಸ್ತವವವಾಗಿ ನಾನು ಪಾಕಿಸ್ತಾನದ ಜೊತೆ ಯಾವ ನಂಟನ್ನೂ ಹೊಂದಿಲ್ಲ. ನಾನು ಭಾರತದ ಪುತ್ರ ಎಂದು ಹೇಳಬಹುದು. ಹುಟ್ಟಿ ಬೆಳೆದದ್ದು ಬ್ರಿಟನ್‌ನಲ್ಲಿ. ಆದರೆ ನನ್ನ ತಂದೆ- ತಾಯಿ ಹುಟ್ಟಿ ಬೆಳೆದದ್ದು ಭಾರತದಲ್ಲಿ. ನಾನು ಮಗುವಾಗಿ ನನ್ನ ಬಹುತೇಕ ಬೇಸಿಗೆ ರಜೆಗಳನ್ನು ಹೈದರಾಬಾದ್‌ನಲ್ಲಿ ಕಳೆದಿದ್ದೇನೆ ಹಾಗೂ ನಾನು ವಿವಾಹವಾಗಿರುವುದೂ ಅಲ್ಲಿಯೇ.
ಅದಾಗ್ಯೂ ಇಂದಿನ ಮೋದಿ ನೇತೃತ್ವದ ಭಾರತದಲ್ಲಿ, ದಿಟ್ಟವಾಗಿ ಮಾತನಾಡುವ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ತೆರಳುವಂತೆ ಹೇಳುತ್ತಾರೆ. ಅಸಹಿಷ್ಣುತೆಯ ವಾತಾವರಣ ಸೃಷ್ಟಿಸಿದ ಬಿಜೆಪಿಯನ್ನು ಟೀಕಿಸುವ ಧೈರ್ಯ ಮಾಡುವ ಉದಾರವಾದಿಗಳು ಅಥವಾ ಎಡಪಂಥೀಯರನ್ನು ಅವರು ಸರಕಾರವನ್ನು ವೃಥಾ ಟೀಕಿಸುವ ಮೂಲಕ ದೇಶದ ಇಮೇಜ್ ಹಾಳುಮಾಡುವವರು ಎಂದು ಕರೆಯುತ್ತಾರೆ. ನನ್ನ ಕಾರ್ಯಕ್ರಮದಲ್ಲಿ ರಾಮ್‌ಮಾಧವ್ ಹೇಳಿದ್ದನ್ನು ಉಲ್ಲೇಖಿಸುವುದಾದರೆ, ಆ ಮೂಲಕ ಆಡಳಿತಾರೂಢ ಬಿಜೆಪಿಯನ್ನು ಭಾರತ ದೇಶದ ಜತೆ ಸಂಯೋಜನೆಗೊಳಿಸಲಾಗುತ್ತಿದೆ.
ಇಸ್ಲಾಮ್‌ವಾದದ ನಗೆಪಾಟಲೆನಿಸುವ ಆರೋಪದ ಬಗ್ಗೆ ಹೇಳುವುದಾದರೆ, ನಾನು ಬರೆದ ಒಂದು ಕೃತಿಯ ಶೀರ್ಷಿಕೆ, ದೇರ್‌ಈಸ್ ನಥಿಂಗ್ ಇಸ್ಲಾಮಿಕ್ ಅಬೌಟ್ ಎ ಸ್ಟೇಟ್. 2014ರಲ್ಲಿ ಪ್ರಸಾರವಾದ ಇಸ್ಲಾಮಿ ಚಿಂತಕ ತಾರಿಕ್ ರಮದಾನ್ ಅವರ ಸಂದರ್ಶನದ ಹೆಡ್ ಟೂ ಹೆಡ್ ಕಾರ್ಯಕ್ರಮದ ಶೀರ್ಷಿಕೆ ರಾಜಕೀಯ ಇಸ್ಲಾಂ ವಿಫಲವಾಗಿದೆಯೇ? ಎನ್ನುವುದು. (ಹೌದು ಒಂದು ದಶಕದ ಹಿಂದೆ, ನಾನು ಮಾಡಿದ ಒಂದು ಭಾಷಣದಲ್ಲಿ, ವಿಷಾದನೀಯ ಹಾಗೂ ಮೂರ್ಖತನದಿಂದ ಕುರ್‌ಆನ್‌ನ ಒಂದು ಸಾಲನ್ನು ಉಲ್ಲೇಖಿಸಿ ಅದರ ಪ್ರಕಾರ, ಆಲಂಕಾರಿಕವಾಗಿ, ಚಿಂತನಾಶೂನ್ಯ ಮುಸಲ್ಮಾನೇತರರು ಪಶುಗಳು ಎಂದು ಹೇಳಿದೆ. ಅಂದರೆ ನಾನು ಅದೇ ಕುರ್‌ಆನ್‌ನಿಂದ ಚಿಂತನಾಶೂನ್ಯ ಮುಸಲ್ಮಾನರು ಕೂಡಾ ಪಶು ಸಮಾನರು ಎನ್ನುವುದನ್ನೂ ಉಲ್ಲೇಖಿಸಿದ್ದೆ).
ಆದರೆ ಸಂದೇಶ ನೀಡಿದವರ ಮೇಲೆ ನೀವು ದಾಳಿ ಮಾಡಲು ಅವಕಾಶವಿರುವಾಗ ಸಂದೇಶದ ಬಗ್ಗೆ ಗಮನ ಕೇಂದ್ರೀಕರಿಸುತ್ತೀರಿ? ಸ್ಪಷ್ಟವಾಗಿ ಹೇಳಬೇಕೆಂದರೆ, ಮಾಧವ್ ಅಥವಾ ಬಿಜೆಪಿ ವಿರುದ್ಧ ಯಾವ ಸಂಚೂ ಇರಲಿಲ್ಲ. ಆಕ್ಸ್‌ಫರ್ಡ್‌ನಲ್ಲಿ ಡಿಸೆಂಬರ್ 7ರಂದು ರೆಕಾರ್ಡ್ ಮಾಡಲಾದ ಕಾರ್ಯಕ್ರಮವನ್ನು ಡಿಸೆಂಬರ್ 25ರಂದು ಪ್ರಸಾರ ಮಾಡಲಾಯಿತು. ಆ ದಿನ ಭಾರತದ ಪ್ರಧಾನಿ ಪಾಕಿಸ್ತಾನದ ಪ್ರಧಾನಿಯನ್ನು ಭೇಟಿ ಮಾಡಲು ಲಾಹೋರ್‌ಗೆ ಬಂದಿದ್ದರು. ನೀವು ನಂಬುವುದಾದರೆ ನಂಬಿ ಇಲ್ಲದಿದ್ದರೆ ಬಿಡಿ; ಪ್ರಧಾನಿ ನರೇಂದ್ರ ಮೋದಿ, ನವಾಝ್ ಷರೀಫ್ ಅವರಿಗೆ ವೈಯಕ್ತಿಕವಾಗಿ ಹುಟ್ಟುಹಬ್ಬದ ಶುಭಾಶಯ ಹೇಳುವ ತಮ್ಮ ರಹಸ್ಯ ಯೋಜನೆಯನ್ನು ಅಲ್ ಜಝೀರಾ ಜತೆ ಅವರು ಹಂಚಿಕೊಂಡಿರಲಿಲ್ಲ.
ಎರಡನೆಯದಾಗಿ ಹೆಡ್ ಟೂ ಹೆಡ್ ಕಾರ್ಯಕ್ರಮಕ್ಕೆ ಬರುವ ಮುನ್ನ ರಾಮ್‌ಮಾಧವ್ ಅವರಿಗೆ ವೈಯಕ್ತಿಕವಾಗಿ ನನ್ನ ನಿರ್ಮಾಪಕ ಸಿಬ್ಬಂದಿ, ಈ ಕಾರ್ಯಕ್ರಮದ ಹರಿತವಾದ ಅಗುಲಿನ ಬಗ್ಗೆ ಮಾಹಿತಿ ನೀಡಿದ್ದರು. ಹಿಂದಿನ ಕಾರ್ಯಕ್ರಮದಲ್ಲಿ ಜನರಲ್ ದುರಾನಿ ಜೊತೆಗಿನ ಕಾರ್ಯಕ್ರಮವನ್ನು ನೋಡಿ ತಾನು ಆನಂದಪಟ್ಟಿದ್ದಾಗಿ ರಾಮ್‌ಮಾಧವ್ ಹೇಳಿಕೊಂಡಿದ್ದರು. (ಬಹುಶಃ ಅವರು ಮತ್ತು ಅವರ ಬೆಂಬಲಿಗರು ನಾನು ಪಾಕಿಸ್ತಾನಿಗಳಿಗೆ ಕಠಿಣ ಪ್ರಶ್ನೆಗಳನ್ನು ಕೇಳುತ್ತಿದ್ದ ಸಂದರ್ಶನವನ್ನಷ್ಟೇ ಆನಂದಿಸಿರಬೇಕು)
ಮೂರನೆಯದಾಗಿ ಈ ಸಂದರ್ಶನ ಕಾರ್ಯಕ್ರಮದ ಶೀರ್ಷಿಕೆ, ಭಾರತ ಫ್ಯಾಶಿಸಂನ ಸೋಗಿನಲ್ಲಿದೆಯೇ? ಎನ್ನುವುದು. ಇದು ಖಂಡಿತವಾಗಿಯೂ ನನ್ನ 2014ರ ಕಾರ್ಯಕ್ರಮದಲ್ಲಿ ಮಹಿಳಾವಾದಿ ಮೋನಾ ಎಲ್ತಾವಿ ಅವರ ಸಂರ್ದಶನದ, ಅರಬ್ ಪುರುಷರು ಮಹಿಳೆಯರನ್ನು ದ್ವೇಷಿಸುತ್ತಾರೆಯೇ ಅಥವಾ 2013ರ ಕಾರ್ಯಕ್ರಮದಲ್ಲಿ ಲೇಖಕ ಇರ್ಷಾದ್ ಮಾಂಜಿ ಅವರ ಸಂದರ್ಶನದ ಇಸ್ಲಾಮ್‌ನಲ್ಲಿ ಇಂದು ಏನು ತಪ್ಪಾಗಿದೆ ಎಂಬ ಶೀರ್ಷಿಕೆಗಳಿಗೆ ಹೋಲಿಸಿದರೆ ಪ್ರಚೋದನಾಕಾರಿ ಅಥವಾ ಪಕ್ಷಪಾತದಿಂದ ಕೂಡಿದ್ದಲ್ಲ.
ಈ ಭಕ್ತರಿಗೆ ಅರಗಿಸಿಕೊಳ್ಳಲಾಗದ ಸತ್ಯವೆಂದರೆ, ಹಿರಿಯ ಬಿಜೆಪಿ ಪದಾಧಿಕಾರಿ, ತಮ್ಮ ಮುಸ್ಲಿಮ್ ಸಂದರ್ಶಕನನ್ನು ತೋರಿಸಿ, ನಿಮ್ಮ ಐಸಿಸ್ ಎಂದು ಹೇಳಿದ್ದು. ಮಾತ್ರವಲ್ಲದೇ, ಅಖಂಡ ಭಾರತದ ಕುರಿತು ಆರೆಸ್ಸೆಸ್ ಹೊಂದಿರುವ ದೃಷ್ಟಿಕೋನವನ್ನು ಬೆಂಬಲಿಸುತ್ತೇನೆ ಎಂದು ಸಮರ್ಥಿಸಿಕೊಂಡದ್ದಾಗಿತ್ತು. ಅಂದರೆ ಇದರಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಭಾರತದ ಜೊತೆ ಮತ್ತೆ ಸೇರಬೇಕಾಗಿದೆ. ಆದರೆ ಮಾಧವ್ ಅವರ ಅಭಿಪ್ರಾಯಗಳನ್ನು ಅಲ್ಲಗಳೆಯುವ ಒತ್ತಡಕ್ಕೆ ಬಿಜೆಪಿ ಒಳಗಾಯಿತು. ವಾಸ್ತವವಾಗಿ ಮೋದಿಯವರ ಪಾಕಿ ಸ್ತಾನ ಭೇಟಿಯನ್ನು ಮಹತ್ವವನ್ನು ಕೀಳಂದಾಜಿಸುವುದಾಗಿತ್ತು ಮತ್ತು ಅದು ವಿರೋಧ ಪಕ್ಷಗಳಿಗೆ ಹಿಂದುತ್ವ ವಿರೋಧಿ ಅಸ್ತ್ರವನ್ನು ಒದಗಿಸಿಕೊಟ್ಟಿತು. ಮಾಧವ್ ಅವರು ಇತ್ತೀಚಿನ ಸಮರ್ಥನೆಯಾದ ಅಖಂಡ ಭಾರತ ಕುರಿತ ಅಭಿಪ್ರಾಯಗಳು ಸಾಂಸ್ಕೃತಿಕ ಪರಿಕಲ್ಪನೆಗೆ ಸಂಬಂಧಿಸಿದ್ದು ಎನ್ನುವುದು ಅರ್ಥಹೀನ. ಯಾಕೆಂದರೆ ಹೆಡ್ ಟೂ ಹೆಡ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಖಂಡ ಭಾರತ ಪರಿಕಲ್ಪನೆಯನ್ನು ಸ್ಪಷ್ಟವಾಗಿ ರಾಜಕೀಯ, ಸಾಂಸ್ಕೃತಿಕ ಒಗ್ಗೂಡುವಿಕೆಯಲ್ಲ ಎಂದು ಹೇಳಿದ್ದರು. ಎರಡು ಜರ್ಮನಿಗಳು ಜತೆ ಸೇರುವುದಾದರೆ, ಎರಡು ವಿಯೇಟ್ನಾಂಗಳು ಒಗ್ಗೂಡುವುದಾದರೆ, ಪಾಕಿಸ್ತಾನ ಹಾಗೂ ಭಾರತ ಒಗ್ಗೂಡುವುದಿಲ್ಲ ಎಂದು ಹೇಗೆ ನೀವು ಯೋಚಿಸುತ್ತೀರಿ?
ಈ ಪ್ರಮುಖ ಒಪ್ಪಿಗೆಗೆ ನಾನು ಈಗ ವೈಯಕ್ತಿಕ ಬೆಲೆ ತೆರಬೇಕಾಗಿದೆ. ಭಕ್ತಸೇನೆ ಸಾಮಾಜಿಕ ಜಾಲತಾಣದ ಮೂಲಕ ನನ್ನ ಮೇಲೆ ದಾಳಿ ಮಾಡುತ್ತಿದೆ. ಆದ್ದರಿಂದ ರಾಮ್‌ಮಾಧವ ಅವರನ್ನು ಸಂದರ್ಶಿಸಿದ್ದಕ್ಕೆ ನಾನು ವಿಷಾದ ವ್ಯಕ್ತಪಡಿಸಬೇಕೇ? ಖಂಡಿತಾ ಸಾಧ್ಯವಿಲ್ಲ. ಹಳೆಯ ನಾಣ್ನುಡಿ ಹೇಳುವಂತೆ, ಪತ್ರಕರ್ತನ ಕೆಲಸವೆಂದರೆ, ಬಳಲಿದವರನ್ನು ಆರಾಮವಾಗಿರುವಂತೆ ಮಾಡುವುದು ಹಾಗೂ ಆರಾಮವಾಗಿರುವವರನ್ನು ಬಳಲುವಂತೆ ಮಾಡುವುದು. ಇದು ನಾನು ಪ್ರತಿ ಸಂದರ್ಶನದಲ್ಲಿ ಅಳವಡಿಸಿಕೊಂಡ ತತ್ವ; ಅದು ಇಸ್ರೇಲಿನ ಮಾಜಿ ಪ್ರಧಾನಿಯಾಗಿರಬಹುದು ಅಥವಾ ಕತಾರ್‌ನ ಹಾಲಿ ವಿದೇಶಾಂಗ ಸಚಿವರೇ ಇರಬಹುದು. ಇದೀಗ ಮಾಧವ್ ಹೆಡ್ ಟೂ ಹೆಡ್ ಕಾರ್ಯಕ್ರಮಕ್ಕೆ ಹಾಜರಾದ್ದಕ್ಕೆ ವಿಷಾದ ವ್ಯಕ್ತಪಡಿಸಲಿದ್ದಾರೆಯೇ ಎನ್ನುವುದು ಬೇರೆ ವಿಚಾರ. ಅಖಂಡ ಭಾರತದ ವಿವಾದದಲ್ಲಿ, ಮಾಜಿ ಆರೆಸ್ಸೆಸ್‌ನ ಸ್ಪಿನ್ನಿಂಗ್ ಡಾಕ್ಟರ್‌ಗೆ ತಿರುಗಿಸಲು ಇನ್ನೂ ಸಾಕಷ್ಟು ಅಂಶಗಳಿವೆ. (ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್)







