ಉಡುಪಿ ನಗರಸಭೆ ಸೇವೆಗೆ ಎರಡು ಟಿಪ್ಪರ್‌ಗಳ ಸೇರ್ಪಡೆ

ಉಡುಪಿ, ಜ.3: ಉಡುಪಿ ನಗರಸಭೆಗೆ 13ನೆ ಹಣಕಾಸು ನಿಧಿಯಿಂದ ಖರೀದಿಸಲಾದ 21.64 ಲಕ್ಷ ರೂ. ವೆಚ್ಚದ ಜೇಸಿಬಿ ಮತ್ತು 19.22 ಲಕ್ಷ ರೂ. ವೆಚ್ಚದ ಟಿಪ್ಪರ್ ವಾಹನವನ್ನು ಶಾಸಕ ಪ್ರಮೋದ್ ಮಧ್ವರಾಜ್ ಶನಿವಾರ ಉದ್ಘಾಟಿ ಸಿದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಪಿ. ಯುವರಾಜ್, ಉಪಾಧ್ಯಕ್ಷೆ ಅಮೃತ ಕೃಷ್ಣಮೂರ್ತಿ, ಪೌರಾಯುಕ್ತ ಡಿ.ಮಂಜುನಾಥಯ್ಯ ಹಾಗೂ ನಗರಸಭೆಯ ವಿವಿಧ ವಾರ್ಡ್‌ಗಳ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು..
Next Story





