ಹೊಳೆ ಅಧ್ಯಯನ ಶಿಬಿರಕ್ಕೆ ಚಾಲನೆ
ಕಾಸರಗೋಡು, ಜ.3: ಪರಿಸರದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪರಿಸರ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ಎರಡು ದಿನಗಳ ಹೊಳೆ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಕಾಸರಗೋಡು ಪಳ್ಳಂ ತೀರದಲ್ಲಿ ನಡೆದ ಶಿಬಿರವನ್ನು ಕಾಸರಗೋಡು ಕೇಂದ್ರ ವಿದ್ಯಾನಿಲಯದ ಉಪಕುಲಪತಿ ಡಾ.ಜಿ.ಗೋಪಕುಮಾರ್ ಉದ್ಘಾಟಿಸಿದರು.
ಟಿ.ಸಿ.ಮಾಧವ ಪಣಿಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಪಿ.ಟಿ. ಜಿ.ನಂಬ್ಯಾರ್, ಎ.ಗೋಪಿನಾಥ್, ಎಂ.ಗೋಪಾಲನ್, ಎಸ್.ಜಯಶ್ರೀ, ಅಂಬಲತ್ತರ ಕುಂಞಿಕೃಷ್ಣನ್ ಮೊದಲಾ ದವರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಪರಿಸರ, ಅದರಲ್ಲೂ ಹೊಳೆಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಲಾಗುತ್ತಿದೆ.
Next Story





