ಸಚಿವ ಜೈನ್‌ರಿಂದ ನಂದಿನಿ ನದಿಗೆ ಬಾಗಿನ ಸಮರ್ಪಣೆ

ಕಟೀಲು, ಜ.3: ಇಲ್ಲಿನ ಅಜಾರು ಜಳಕದಕಟ್ಟೆ ಬಳಿಯ ನಂದಿನಿ ನದಿಗೆ ಮೀನುಗಾರಿಕಾ ರಾಜ್ಯ ಸಚಿವ ಅಭಯಚಂದ್ರ ಜೈನ್ ರವಿವಾರ ಬಾಗಿನ ಅರ್ಪಿಸಿದರು. ಕಟೀಲು ದೇಗುಲದ ಅನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣ ದಾಸ ಆಸ್ರಣ್ಣ, ಜಿಪಂ ಸದಸ್ಯ ಈಶ್ವರ ಕಟೀಲ್, ತಾಪಂ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಕಟೀಲು ಪಂಚಾಯತ್ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಸದಸ್ಯರಾದ ಜನಾರ್ದನ ಕಿಲೆಂಜೂರು, ಪದ್ಮಲತಾ, ರಮಾನಂದ ಪೂಜಾರಿ, ಎಪಿಎಂಸಿ ಅಧ್ಯಕ್ಷ ಮೋನಪ್ಪಶೆಟ್ಟಿ, ಎಪಿಎಂಸಿ ಸದಸ್ಯ ಪ್ರಮೋದ್‌ಕುಮಾರ್, ಬೇಬಿ, ಜಯಂತಿ, ತಿಮ್ಮಪ್ಪ ಕೋಟ್ಯಾನ್, ಶೈಲಾ ಸಿಕ್ವೇರ, ಡಾಲ್ಫಿ ಸಾಂತುಮೊಯರ್, ನವೀನ್‌ಕುಮಾರ್, ಪಿಡಿಒ ಪ್ರಕಾಶ್ ಬಿ., ಎಇಇ ಷಣ್ಮುಗಂ ಮತ್ತಿತರರು ಉಪಸ್ಥಿತರಿದ್ದರು.
Next Story





