ನೂಜಿಲಕಿ್ಕ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತೆ್

ಬೆಳ್ತಂಗಡಿ, ಜ.3: ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ತಮ್ಮ ಮನೆಯ ಸಮೀಪದ ಸಂಬಂಧಿಕರ ತೋಟದಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಾಲು ಗ್ರಾಮದ ನೂಜಿಲಕ್ಕಿ ಎಂಬಲ್ಲಿ ರವಿವಾರ ನಡೆದಿದೆ. ಪುತ್ತೂರು ತಾಲೂಕಿನ ಕುಂಬ್ರ ತೊಟದಮೂಲೆ ನಿವಾಸಿ ಶ್ರೀನಿವಾಸ ಮಲೆಕುಡಿಯ ಎಂಬವರ ಪತ್ನಿ ಸುನಂದಾ(40), ಮಕ್ಕಳಾದ ಭರತ್(9) ಹಾಗೂ ಭುವಿತ್(6) ಆತ್ಮಹತ್ಯೆ ಮಾಡಿಕೊಂಡ ವರು. ಸುನಂದಾ ಖಾಸಗಿ ಉದ್ಯೋಗಿಯಾಗಿದ್ದರೆ, ಮಕ್ಕಳಿಬ್ಬರು ಪೆರಿಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಘಟನೆ ವಿವರ:
ತವರು ಮನೆಯಲ್ಲಿದ್ದ ಸುನಂದಾ ಇಂದು ಮಧ್ಯಾಹ್ನ ಮನೆಮಂದಿ ಹೊರಹೋಗಿದ್ದ ವೇಳೆ ಈ ಕೃತ್ಯ ಎಸಗಿದ್ದಾರೆ. ಮನೆಯಲ್ಲಿದ್ದ ಸಹೋ ದರನ ಪುತ್ರಿಯಲ್ಲಿ ಬಟ್ಟೆಗಳನ್ನು ಮಡಚಿಡಲು ಹೇಳಿ ಸುನಂದಾ ಇಬ್ಬರು ಮಕ್ಕಳೊಂದಿಗೆ ತೋಟದತ್ತ ತೆರಳಿದ್ದರು. ಈ ಮೂವರು ಬಹಳ ಹೊತ್ತಾದರೂ ತೋಟದಿಂದ ಹಿಂದಿರುಗದೆ ಇರುವುದರಿಂದ ಗಾಬರಿಗೊಂಡ ಮನೆಯವರು ಹುಡುಕಿದಾಗ ತೋಟದಲ್ಲಿರುವ ಕರೆಯ ಸಮೀಪ ಮಗುವಿನ ಆಟಿಕೆ ಸಿಕ್ಕಿದೆ. ಇದರ ಆಧಾರ ದಲ್ಲಿ ಕೆರೆಯಲ್ಲಿ ನೋಡಿದಾಗ ಮೃತ ದೇಹಗಳು ಪತ್ತೆಯಾಗಿದೆ. ಕಳೆದ 10 ವರ್ಷಗಳ ಹಿಂದೆ ಸುನಂದಾರನ್ನು ಶ್ರೀನಿವಾಸ ಮಲೆಕುಡಿಯರಿಗೆ ವಿವಾಹ ಮಾಡಿಕೊಡಲಾಗಿದ್ದು, ಇಬ್ಬರು ಮಕ್ಕಳೊಂದಿಗೆ ಅಲ್ಲಿ ವಾಸಿಸುತ್ತಿದ್ದರು. ಕಳೆದ 3 ವರ್ಷಗಳ ಹಿಂದೆ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗುವ ಕಾರಣ ಬೆಳಾಲುವಿನಲ್ಲಿರುವ ತವರು ಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ. ಗಾರೆ ಕೆಲಸ ಮಾಡುತ್ತಿರುವ ಪತಿ ಶ್ರೀನಿವಾಸ ತಿಂಗಳಿಗೊಮ್ಮೆ ಇಲ್ಲಿಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಗರ್ಭಕೋಶದಲ್ಲಿ ತೊಂದರೆಯಿಂದ ಬಳಲುತ್ತಿದ್ದ ಸುನಂದಾ ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ವಿಚಾರವಾಗಿ ಅವರು ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಸ್ಥಳಿೀಯರು ಹೇಳುತ್ತಿದ್ದಾರೆ. ಯಾವುದೇ ಕೌಟುಂಬಿಕ ಅಥವಾ ಆರ್ಥಿಕ ಸಮಸ್ಯೆ ಇದ್ದ ಮಾಹಿತಿ ಇಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಎಸ್ಸೈ ಸಂದೇಶ್ ಮತ್ತು ಸಿಬ್ಬಂದಿ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







