ಪಾಣೆಮಂಗಳೂರಿನಲ್ಲಿ ಸರಣಿ ಅಪಘಾತ

ವಿಟ್ಲ, ಜ.3: ಫೋಕ್ಸ್‌ವೇಗನ್, ಸ್ವಿಫ್ಟ್ಟ್ ಹಾಗೂ ಮಾರುತಿ 800 ಕಾರುಗಳ ಮಧ್ಯೆ ಸರಣಿ ಅಪಘಾತ ನಡೆದ ಘಟನೆ ಪಾಣೆಮಂಗಳೂರು ನೂತನ ನೇತ್ರಾವತಿ ಸೇತುವೆಯಲ್ಲಿ ರವಿವಾರ ನಡೆದಿದೆ. ಕಲ್ಲಡ್ಕ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ತೆರಳುತ್ತಿದ್ದ ವೇಳೆ, ಎದುರಿನಿಂದ ಬರುತ್ತಿದ್ದ ಕಾರೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಫೋಕ್ಸ್‌ವೇಗನ್ ಕಾರಿನ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ಅದರ ಹಿಂದಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಫೋಕ್ಸ್‌ವೇಗನ್‌ಗೆ ಢಿಕ್ಕಿಯಾಗಿದೆ. ಅದರ ಹಿಂದುಗಡೆಯಿದ್ದ ಮಾರುತಿ 800 ಕಾರು ಸ್ವಿಫ್ಟ್‌ಗೆ ಢಿಕ್ಕಿ ಹೊಡೆದು ಈ ಸರಣಿ ಅಪಘಾತ ಸಂಭವಿಸಿದೆ. ಘಟನೆಯಿಂದ ಮೂರು ವಾಹನಗಳೂ ಜಖಂಗೊಂಡಿದ್ದು, ಚಾಲಕ- ಪ್ರಯಾಣಿಕರೆಲ್ಲರೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಅಪಘಾತ ದಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
Next Story





