ಯುವಕನ ಕೊಲೆಗೆ ಯತ್ನ
ಮಂಗಳೂರು, ಜ.3: ಕ್ರಿಕೆಟ್ ವಿವಾದಕ್ಕೆ ಸಂಬಂಧಿಸಿ ಸಹೋದರರಿಬ್ಬರು ಯುವಕನನ್ನು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೋಂದೆಲ್‌ನಲ್ಲಿ ನಡೆದಿದೆ.
ಗಾಯಾಳು ಯುವಕನನ್ನು ಬೋಂದೆಲ್‌ನ ನಿವಾಸಿ ಮುಸ್ತಫಾ (37) ಎಂದು ಗುರುತಿಸಲಾಗಿದೆ. ಈತನ ಮೇಲೆ ಸತೀಶ್ ಹಾಗೂ ದಿನೇಶ್ ಎಂಬವರು ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲವು ದಿನಗಳ ಹಿಂದೆ ಕ್ರಿಕೆಟ್ ವಿಷಯಕ್ಕೆ ಸಂಬಂಧಿಸಿ ಮುಸ್ತಫಾ, ಸತೀಶ್ ಮತ್ತು ದಿನೇಶ್ ಎಂಬವರ ನಡುವೆ ಮನಸ್ತಾಪ ಇತ್ತೆನ್ನಲಾಗಿದೆ. ಇದೇ ದ್ವೇಷದಿಂದ ಸತೀಶ್ ಹಾಗೂ ದಿನೇಶ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
Next Story





