ಪಠಾಣ್‌ಕೋಟೆಯಲ್ಲಿ ಮುಂದುವರಿದ ಕಾರ್ಯಾಚರಣೆ ; ಇನಷ್ಟು ಉಗ್ರರು ಅಡಗಿಕೊಂಡಿರುವ ಶಂಕೆ

ದಿಲ್ಲಿ, ಜ.4: ಪಠಾಣ್‌ಕೋಟ್ ವಾಯು ನೆಲೆಯಲ್ಲಿ ಅಡಗಿಕೊಂಡಿರುವ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದ್ದು, ಬೆಳಗ್ಗೆ ಮೂರು ಬಾರಿ ಸ್ಪೋಟ, ಗುಂಡಿನ ದಾಳಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಉಗ್ರರು ಅಡಗಿಕೊಂಡಿರುವ ಶಂಕೆ ಮೂಡಿದೆ.
ಓರ್ವ ಉಗ್ರನನ್ನು ಭದ್ರತಾ ಪಡೆಗಳು ರವಿವಾರ ರಾತ್ರಿ ಹೊಡೆದುರುಳಿಸಿವೆ. ಇನ್ನೊಬ್ಬ ಉಗ್ರ ಅಡಗಿಗೊಂಡಿದ್ದಾನೆ ಎಂದು ಹೇಳಲಾಗಿದ್ದರೂ, ಬೆಳಗ್ಗೆ ಎರಡು ಕಡೆಗಳಿಂದ ಗುಂಡಿನ ದಾಳಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಉಗ್ರರು ಅಡಗಿಕೊಂಡಿರುವ ಮಾಹಿತಿ ಲಭಿಸಿದೆ. 160ಕ್ಕೂ ಅಧಿಕ ಯೋಧರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
. ಶನಿವಾರ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.
ಈ ಕಾರ್ಯಾಚರಣೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಇದುವರೆಗೆ ಎನ್‌ಎಸ್‌ಜಿಯ ಬಾಂಬ್ ನಿಷ್ಕ್ರಿಯ ದಳದ ಒಬ್ಬ ಲೆಫ್ಟಿನೆಂಟ್ ಕರ್ನಲ್ ಸೇರಿ ಏಳು ಯೋಧರು ಹುತಾತ್ಮರಾಗಿದ್ದಾರೆ.
ಮೃತ ಎನ್‌ಎಸ್‌ಜಿಯ ಬೆಂಗಳೂರಿನ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ . ಅವರ ಮೃತದೇಹ ಬೆಂಗಳೂರಿಗೆ ತಲುಪಿದ್ದು, ಬೆಂಗಳೂರಿನ ಮಲ್ಲಶ್ವರಂನಲ್ಲಿರುವ ಬಿ.ಪಿ. ಇಂಡಿಯನ್ ಸ್ಕೂಲ್ ಮೈದಾನದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, . ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಹಸ್ರಾರು ಮಂದಿ ಶ್ರದ್ಧಾಂಜಲಿ ಅರ್ಪಿಸಿದರು. ಮೃತದೇಹದ ಅಂತ್ಯಕ್ರಿಯೆ ಅವರ ಕೇರಳದ ಪಾಲಕ್ಕಾಡ್‌ನಲ್ಲಿ ನಡೆಯಲಿದೆ. ಮೃತದೇಹವನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 12:30ಕ್ಕೆ ಕೇರಳದ ಪಾಲಕ್ಕಾಡ್‌ಗೆ ಕೊಂಡೊಯ್ಯಲಾಗುವುದು
. ಎನ್‌ಎಸ್‌ಜಿಯ ಬೆಂಗಳೂರಿನ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಶನಿವಾರ ಭದ್ರತಾ ಪಡೆಯ ಗುಂಡಿನಿಂದ ಸತ್ತ ಉಗ್ರನ ಚೀಲದಲ್ಲಿದ್ದ ಸಜೀವ ಗ್ರೆನೇಡನ್ನು ಹೊರತೆಗೆಯುವಾಗ ಸ್ಫೋಟಗೊಂಡು ತೀವ್ರ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದರು.





