ಐವರು ದುಷ್ಟರನ್ನು ಹೊಡೆದುರುಳಿಸಲಾಗಿದೆ: ಎನ್‌ಎಸ್‌ಜಿ

ಪಂಜಾಬ್, ಜ.4: ..ಪಠಾಣ್‌ಕೋಟೆ ವಾಯುನಲೆಯಲ್ಲಿ ಉಗ್ರರ ವಿರುದ್ಧ ದಾಳಿ ಮುಂದುವರಿಸಲಾಗಿದ್ದು, ಉಗ್ರರ ವಿರುದ್ಧ ಎನ್‌ಕೌಂಟರ್ ಸರಿಯಾಗಿಯೇ ಸಾಗಿದೆ . ಕಾರ್ಯಾಚರಣೆಯಲ್ಲಿ ಐವರು ಉಗ್ರರು ಸಾವಿಗೀಡಾಗಿದ್ದಾರೆ ಎಂದು ಎನ್‌ಎಸ್ ಜಿ ಕಮಾಂಡರ್ ದುಷ್ಯಂತ್ ಸಿಂಗ್ ತಿಳಿಸಿದ್ದಾರೆ .
ಎನ್‌ಎಸ್‌ಜಿ ಮತ್ತು ಭಾರತೀಯ ವಾಯುಸೇನಾ ಅಧಿಕಾರಿಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ " ಉಗ್ರರ ವಿರುದ್ಧ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ. ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲ. ವಾಯುನೆಲೆಯಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದರು.
ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್‌ಎಸ್‌ಜಿ ಮತ್ತು ಭಾರತೀಯ ವಾಯುಸೇನಾ ಅಧಿಕಾರಿಗಳು " ಉಗ್ರ ವಿರುದ್ಧ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ. ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲ. ವಾಯುನೆಲೆಯಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.
57 ಗಂಟೆ ಕಳೆದರೂ ಕಾರ್ಯಾಚರಣೆ ಮುಗಿದಿಲ್ಲ.ಇದು ಮುಗಿಯಲು ಇನ್ನಷ್ಟು ಕಾಲಾವಕಾಶಬೇಕು. ವಾಯುನಲೆಯಲ್ಲಿಇಬ್ಬರು ಉಗ್ರರು ಇನ್ನೂ ಅಡಗಿಕೊಂಡಿರುವ ಮಾಹಿತಿ ಲಭ್ಯವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.





