ಇರಾನ್‌ನೊಂದಿಗೆ ಸಂಬಂಧ ಕಡಿದುಕೊಳ್ಳಲು ಸೌದಿ ನಿರ್ಧಾರ

ರಿಯಾದ್, ಜ.4: ಇರಾನ್‌ನೊಂದಿಗೆ ಎಲ್ಲ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳುವ ಬಗ್ಗೆ ಸೌದಿ ಅರೇಬಿಯಾ ನಿರ್ಧಾರ ಕೈಗೊಂಡಿದೆ.
ಶಿಯಾ ಧಾರ್ಮಿಕ ಗುರುವಿಗೆ ಮರಣದಂಡನೆ ವಿಧಿಸಿರುವುದನ್ನು ಪ್ರತಿಭಟಿಸಿ ಟೆಹ್ರಾನ್‌ನಲ್ಲಿರುವ ಸೌದಿ ಅರೇಬಿಯಾದ ರಾಯಭಾರ ಕಚೇರಿಗೆ ಗುಂಪು ದಾಳಿ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದಿನ 48 ಗಂಟೆಗಳ ಒಳಗಾಗಿ ಕಚೇರಿಯನ್ನು ಬಿಡುವಂತೆ ಅಲ್ಲಿನ ರಾಜತಾಂತ್ರಿಕರಿಗೆ ಆದೇಶ ನೀಡಲಾಗಿದೆ ಎಂದು ವಿದೇಶಾಂಗ ಸಚಿವ ಅದಿಲ್ ಅಲ್ ಝುಬೈರ್ ತಿಳಿಸಿದ್ದಾರೆ.
ರಾಯಭಾರಿ ಕಚೇರಿ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿ ಇರಾನ್ 44ಮಂದಿಯನ್ನು ಬಂಧಿಸಿದೆ.
Next Story