Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ4 Jan 2016 11:34 PM IST
share

ಇಂದು ಪೊಲೀಸ್ ದೂರು ಪರಿಹಾರ ಸಭೆ ಕಾಸರಗೋಡು, ಜ.4: ಜಿಲ್ಲಾಮಟ್ಟದ ಪೊಲೀಸ್ ಕಂಪ್ಲೇಂಟ್ ಅಥಾರಿಟಿಯ ಸಭೆಯು ಜ.5ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಬೆಳ್ಮ: ರಸ್ತೆ ಕಾಮಗಾರಿಗೆ ಶಿಲಾನ್ಯಾಸ
ಉಳ್ಳಾಲ, ಜ.4: ಸಚಿವ ಯು.ಟಿ. ಖಾದರ್ ಅನುದಾನದಿಂದ ಬೆಳ್ಮ ಗ್ರಾಮದ ರೆಂಜಾಡಿ ಬಡಕಬೈಲ್‌ನ ರಸ್ತೆ ಶಿಲಾನ್ಯಾಸವನ್ನು ಬೆಳ್ಮ ಗ್ರಾಪಂ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ ನೆರವೇರಿಸಿದರು.
ಜಿಪಂ ಸದಸ್ಯ ಎನ್.ಎಸ್. ಕರೀಂ, ಬೆಳ್ಮ ಗ್ರಾಪಂ ಉಪಾಧ್ಯಕ್ಷ ಸಿ.ಎಂ. ಸತ್ತಾರ್, ಮಾಜಿ ಅಧ್ಯಕ್ಷ ಯೂಸೂಫ್ ಬಾವ, ಸದಸ್ಯರಾದ ಅಬ್ದುಲ್ ರಝಾಕ್ ಕನೆಕ್ಕೆರೆ, ಸತೀಶ್ ಕುಮಾರ್, ಭವಾನಿ, ಕಬೀರ್.ಡಿ, ಎಂ.ಎಂ. ಅಬ್ದುಲ್ಲ, ಮುನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್, ಮಾಜಿ ತಾಪಂ ಸದಸ್ಯ ಸತ್ತಾರ್, ಸ್ಥಳೀಯರಾದ ಹುಸೈನ್ ಬಡಕಬೈಲ್, ಬಾವ, ರವೂಫ್ ರೆಂಜಾಡಿ, ಅಶ್ರಫ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಜ.6: ಪಲ್ಲಕ್ಕಿ ಉತ್ಸವ
ವಿಟ್ಲ, ಜ.4: ಬಂಟ್ವಾಳ ಸಮೀಪದ ಬಡ್ಡಕಟ್ಟೆ ಸದ್ಗುರು ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀಜಿ ಟ್ರಸ್ಟಿನ ಭಜನಾ ಮಂದಿರದಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಹಾಗೂ ಪಲ್ಲಕ್ಕಿ ಉತ್ಸವವು ಜ.6 ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಇಲಲ್ ಹಬೀಬ್ ರ್ಯಾಲಿಯ ಪ್ರಚಾರ ಸಭೆ
ಉಡುಪಿ, ಜ.4: ಎಸೆಸ್ಸೆಫ್ ಉಡುಪಿ ಡಿವಿಜನ್ ವತಿಯಿಂದ ವೌಲಿದ್ ಮಜ್ಲಿಸ್ ಹಾಗೂ ಉಡುಪಿ ಜಿಲ್ಲಾ ಇಲಲ್ ಹಬೀಬ್ ರ್ಯಾಲಿ ಪ್ರಚಾರ ಸಭೆಯು ಇತ್ತೀಚೆಗೆ ಅಜ್ಜರಕಾಡಿನಲ್ಲಿರುವ ಎಸ್ಸೆಸ್ಸೆಫ್ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಉಡುಪಿ ಡಿವಿಜನ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಸಅದಿ ಭದ್ರಗಿರಿ, ಕಟಪಾಡಿ ಸೆಕ್ಟರ್ ಅಧ್ಯಕ್ಷ ಅಬ್ದುರ್ರಶೀದ್ ಮುಸ್ಲಿಯಾರ್ ಕಟಪಾಡಿ, ಬ್ರಹ್ಮಾವರ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ರಂಗಿನಕೆರೆ, ಮಣಿಪಾಲ ಸೆಕ್ಟರ್ ಉಪಾಧ್ಯಕ್ಷ ಶಾಹುಲ್ ಹಮೀದ್ ದೊಡ್ಡಣಗುಡ್ಡೆ, ತಾಜುಲ್ ಉಲಮಾ ರಿಲೀಫ್ ಫಂಡ್ ಅಧ್ಯಕ್ಷ ರಝಾಕ್ ಉಸ್ತಾದ್ ಸಾಸ್ತಾನ, ಡಿವಿಜನ್ ಕೋಶಾಧಿಕಾರಿ ಸಿದ್ದೀಕ್ ಸಂತೋಷ್ ನಗರ, ನಝೀರ್ ಸಾಸ್ತಾನ, ಅನೀಶ್, ಇಮ್ತಿಯಾಝ್ ಉಪಸ್ಥಿತರಿದ್ದರು. ಉಡುಪಿ ಡಿವಿಜನ್ ಪ್ರಧಾನ ಕಾರ್ಯದರ್ಶಿ ನಾಸಿರ್ ಭದ್ರಗಿರಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಆಸಿಫ್ ಸರಕಾರಿಗುಡ್ಡೆ ವಂದಿಸಿದರು.

ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ
ಮೂಡುಬಿದಿರೆ, ಜ.4: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2015-16ನೆ ಶೈಕ್ಷಣಿಕ ಸಾಲಿನಲ್ಲಿ ನಡೆದ ರಾಜ್ಯಮಟ್ಟದ ಬಾಲಕರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಮೂಡುಬಿದಿರೆಯ ಕಾರ್ತಿಕ್ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಇಲ್ಲಿನ ಪ್ರಾಂತ್ಯದ ಸರಕಾರಿ ಪ್ರೌಢಶಾಲೆಯ 8ನೆ ತರಗತಿಯ ವಿದ್ಯಾರ್ಥಿಯಾಗಿರುವ ಇವರು ಜ.3ರಿಂದ ದೆಹಲಿಯಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಯೋಗಾಸನ ಸ್ಪರ್ಧೆಂುಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಉಚಿತ ರಕ್ತ ವರ್ಗೀಕರಣ ಶಿಬಿರ
ಕಡಬ, ಜ.4: ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲಾ ವಿದ್ಯಾರ್ಥಿಗಳ ಉಚಿತ ರಕ್ತ ವರ್ಗೀಕರಣ ಶಿಬಿರವು ಐತ್ತೂರು ಗ್ರಾಮದ ಸುಂಕದಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಕಡಬದ ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‌ನ ಸಹಕಾರದೊಂದಿಗೆ ಇತ್ತೀಚೆಗೆ ನಡೆಯಿತು.
 ಈ ಸಂದರ್ಭ ಜೇಸಿಐ ಕಡಬ ಕದಂಬ ಘಟಕದ ಅಧ್ಯಕ್ಷ ಜಯರಾಮ ಗೌಡ ಆರ್ತಿಲ, ಜೇಸಿ ವಲಯಾಧಿಕಾರಿ ಅಶೋಕ್‌ಕುಮಾರ್ ಪಿ., ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್ ಎನ್.ಕೆ., ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಝೀಝ್, ಶಾಲಾ ಮುಖ್ಯಶಿಕ್ಷಕಿ ವೀಣಾ, ಶಿಕ್ಷಕಿಯರಾದ ಸುಂದರಿ, ಸುಜಾತಾ, ಮಮತಾ, ಪದ್ಮಾ, ಜೀವಿತಾ ಉಪಸ್ಥಿತರಿದ್ದರು. ಪ್ರಯೋಗಾಲಯ ತಂತ್ರಜ್ಞರಾದ ಸರಿತಾ ಹಾಗೂ ಖೈರುನ್ನೀಸಾ ಶಿಬಿರವನ್ನು ನಡೆಸಿಕೊಟ್ಟರು.

ಎ.30: ಎನ್‌ಎಸ್‌ಟಿ ಸಂಭ್ರಮಾಚರಣೆ
 ಗುರುವಾಯನಕೆರೆ, ಜ.4: ಪ್ರಸಕ್ತ ವರ್ಷ ನಾಗರಿಕ ಸೇವಾ ಟ್ರಸ್ಟ್‌ಗೆ 40 ವರ್ಷ ತುಂಬಲಿದೆ. ಟ್ರಸ್ಟ್‌ನ ಬೆಳವಣಿಗೆಗೆ ಕಾರಣರಾದ ಎಲ್ಲ ಸಂಘ-ಸಂಸ್ಥೆ ಮತ್ತು ವ್ಯಕ್ತಿಗಳನ್ನು ಆಮಂತ್ರಿಸಿ ಕೃತಜ್ಞತೆ ಸಲ್ಲಿಸುವುದರೊಂದಿಗೆ ಶೋಷಿತರ ಧ್ವನಿಯಾಗಿ, ದುರ್ಬಲ ವರ್ಗದವರ ಸಶಕ್ತತೆಗಾಗಿ ಮುನ್ನಡೆಯುವ ಸಂಕಲ್ಪ ದೃಢಗೊಳಿಸಲು ಟ್ರಸ್ಟ್ ಕಚೇರಿಯಲ್ಲಿ ನಡೆದ ಬೋರ್ಡ್ ಆಫ್ ಟ್ರಸ್ಟೀಸ್ ಸಭೆಯಲ್ಲಿ ನಿರ್ಣಯಿಸಲಾಯಿತು.
1980ರಲ್ಲಿ ಉದಯವಾಣಿ ದಶಮಾನೋತ್ಸವ ಅಂಗವಾಗಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಜನಸಾಮಾನ್ಯರಿಗಾಗಿ ದುಡಿಯುವ ಉತ್ತಮ ಸೇವಾ ಸಂಸ್ಥೆ ಎಂದು ಡಾ.ಟಿ.ಎಂ.ಪೈ ಸ್ಮಾರಕ ಪ್ರಶಸ್ತಿ ನಾಗರಿಕ ಸೇವಾ ಸಮಿತಿಗೆ ಪ್ರಾಪ್ತವಾಗಿತ್ತು. 2016ರ ಎ.30ರಂದು ಸಂಭ್ರಮಾಚರಿಸಲು ಹಾಗೂ ಟ್ರಸ್ಟ್, ವಿವಿಧ ಕಾರ್ಯಕ್ರಮ-ವಿಚಾರಸಂಕಿರಣ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಶಿಷ್ಟವಾಗಿ ಏರ್ಪಡಿಸಲು ಹಾಗೂ ಎನ್‌ಎಸ್‌ಟಿ ನಡೆದು ಬಂದ ದಾರಿಯ ಸ್ಮರಣ ಸಂಚಿಕೆ ಪ್ರಕಟಿಸಲು ನಿರ್ಧರಿ ಸಲಾಯಿತು. ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್. ವಂದಿಸಿದರು.

ಕಾಪು: ಪದಾಧಿಕಾರಿಗಳ ಆಯ್ಕೆ
ಕಾಪು, ಜ.4: ಪೊಲಿಪು ಜುಮಾ ಮಸೀದಿಯ ಅಧೀನದಲ್ಲಿರುವ ಖುವ್ವತ್ತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್‌ನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಮಸೀದಿಯಲ್ಲಿ ಜರಗಿತು. ಪಿ.ಬಿ.ಅಹ್ಮದ್ ಮುಸ್ಲಿಯಾರ್ ದುಆ ನೆರವೇರಿಸಿದರು. ಅಬ್ದುಲ್ ಹಮೀದ್ ಮಾಸ್ಟರ್ ಉಪಸ್ಥಿತರಿದ್ದರು. ಅಧ್ಯಕ್ಷರಾಗಿ ಬಶೀರ್ ಹುಸೇನ್ ಜನಪ್ರಿಯ, ಉಪಾಧ್ಯಕ್ಷರಾಗಿ ಆರಿಫ್ ಕಲ್ಯಾ, ಕಾರ್ಯದರ್ಶಿಯಾಗಿ ಅಕ್ರಮ್ ಗುಡ್‌ವಿಲ್, ಜೊತೆ ಕಾರ್ಯದರ್ಶಿಯಾಗಿ ಶಬೀರ್ ಅಹ್ಮದ್, ರಹೀಮ್ ಕಲ್ಯಾ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್, ವಿದ್ಯಾರ್ಥಿ ಪ್ರತಿನಿಧಿಯಾಗಿ ನಿಹಾಲ್, ಶರೀಫ್, ದಫ್ ತಂಡದ ಉಸ್ತುವಾರಿಯಾಗಿ ನಿಯಾಝ್, ಕಬೀರ್ ಜನಪ್ರಿಯ, ಸ್ವಯಂಸೇವಕ ತಂಡದ ಮೇಲುಸ್ತುವಾರಿಯಾಗಿ ರಜಬ್, ಸೈಯದ್‌ರನ್ನು ಆಯ್ಕೆ ಮಾಡಲಾಯಿತು. ಕೆ.ಎಂ.ಅಬ್ದುರ್ರಝಾಕ್, ರಜಬ್ ಉಮರಬ್ಬ, ಹುಸೈನಾರ್ ಅವರನ್ನು ಸಲಹೆಗಾರರಾಗಿ ನೇಮಿಸಲಾಯಿತು.

ಪ್ರವಾದಿ ಸಂದೇಶ ಕಾರ್ಯಕ್ರಮ
 ಉಳ್ಳಾಲ, ಜ.4: ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ವತಿಯಿಂದ ಪ್ರವಾದಿ ಮುಹಮ್ಮದ್(ಸ)ರವರ ಜೀವನ ಮತ್ತು ಸಂದೇಶದ ಪರಿಚ ಯದ ಪ್ರಯುಕ್ತ ಅಂಬ್ಲಮೊಗರಿನ ಸರಕಾರಿ ಹಿ.ಪ್ರಾ. ಮತ್ತು ಪ್ರೌಢ ಶಾಲೆಗೆ ಕಪಾಟನ್ನು ನೀಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಅಬೂಸಾಲಿ ಅಧ್ಯಕ್ಷತೆ ವಹಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಕ್, ಜ.ಇ.ಹಿಂದ್ ಉಳ್ಳಾಲ ಶಾಖೆಯ ಉಪಾಧ್ಯಕ್ಷ ಅಬ್ದುರ್ರಹೀಮ್, ತೊಕ್ಕೊಟ್ಟಿನ ಅಲ್ ಫುರ್ಕಾನ್ ಅರಬಿಕ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಇಸ್ಹಾಕ್ ಹಸನ್, ಜ.ಇ. ಹಿಂದ್ ಉಳ್ಳಾಲ ಶಾಖೆಯ ಕಾರ್ಯದರ್ಶಿ ಅಬ್ದುಲ್ ಕರೀಮ್, ಜ.ಇ.ಹಿಂದ್ ಉಳ್ಳಾಲದ ಜೊತೆ ಕಾರ್ಯದರ್ಶಿ ಅಹ್ಮದ್ ಶರೀಫ್, ಮುಖ್ಯ ಶಿಕ್ಷಕ ಜಗದೀಶ್ ಶೆಟ್ಟಿ, ಶಿಕ್ಷಕ ಅಹ್ಮದ್ ಕುಂಞಿ ಉಪಸ್ಥಿತರಿದ್ದರು

ಸುಳ್ಯ ತಾಲೂಕು ಮಟ್ಟದ ಸಾಮರ್ಥ್ಯ ಆಧಾರಿತ ಸ್ಪರ್ಧೆ
ಸುಳ್ಯ, ಜ.4: ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ‘ಓದು, ಬರಹ ಮತ್ತು ಅಭಿವ್ಯಕ್ತಿ’ ಸಾಮರ್ಥ್ಯ ಆಧಾರಿತ ಸ್ಪರ್ಧಾ ಕಾರ್ಯಕ್ರಮ ಐವರ್ನಾಡು ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶಿಕ್ಷಣ ಇಲಾಖೆ, ಐವರ್ನಾಡು ಸರಕಾರಿ ಶಾಲೆ ಹಾಗೂ ಶಾಲಾ ಶತಮಾನೋತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿ ಕೊಂಡ ‘ಚಿಗುರು- 2015’ಕಾರ್ಯಕ್ರಮವನ್ನು ಸಾಹಿತಿ ಟಿ.ಜಿ. ಮುಡೂರು ಉದ್ಘಾಟಿಸಿದರು.
ತಾಪಂ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಜಿಪಂ ಸದಸ್ಯ ನವೀನ್ ಕುಮಾರ್ ಮೇನಾಲ ಅತಿಥಿಯಾಗಿದ್ದರು. ಐವರ್ನಾಡು ಗ್ರಾಪಂ ಅಧ್ಯಕ್ಷೆ ರಾಜೀವಿ ಪರ್ಲಿಕಜೆ ಅಧ್ಯಕ್ಷತೆ ಹಿಸಿದ್ದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಚಂದ್ರಶೇಖರ ಪೇರಾಲು, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ದಿನೇಶ್ ಮಡ್ತಿಲ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕೆಂಪಲಿಂಗಪ್ಪ, ಸಮನ್ವಯಾಧಿಕಾರಿ ಎಂ.ಟಿ.ವೀಣಾ, ನೋಡಲ್ ಅಧಿಕಾರಿ ರೇಖಾ ಎಸ್.ಶೇಟ್, ಮುಖ್ಯ ಶಿಕ್ಷಕಿ ಬಿ.ಪಿ. ಗಿರಿಜಮ್ಮ, ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಗೌಡ ಉಪಸ್ಥಿತರಿದ್ದರು.

ದಾರುಲ್ ಹುದಾ ಹಳೆ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ
ಸುಳ್ಯ, ಜ.4: ಬೆಳ್ಳಾರೆಯ ದಾರುಲ್ ಹುದಾ ಹಳೆ ವಿದ್ಯಾರ್ಥಿ ಸಂಘವನ್ನು ಇತ್ತೀಚೆಗೆ ರಚಿಸಲಾಯಿತು. ಗೌರವಾಧ್ಯಕ್ಷ ಸೈಯದ್ ಹಸನುಲ್ ಅಹ್ದಲ್ ತಂಙಳ್ ನೇತೃತ್ವದಲ್ಲಿ ನಡೆದ ಸಭೆಯನ್ನು ಖಾಲಿದ್ ಅಮ್ಜದಿ ಉಸ್ತಾದ್ ಉದ್ಘಾಟಿಸಿದರು. ಸಂಘದ ನಿರ್ದೇಶಕರಾಗಿ ಸೈಯದ್ ಹಸನುಲ್ ಅಹ್ದಲ್ ತಂಙಳ್ ಖಾಲಿದ್ ಅಮ್ಜದಿ ಅಲ್ ಅಫ್ಲಲಿ, ಅಧ್ಯಕ್ಷರಾಗಿ ಅಬ್ದುಲ್ಲಾ ಝುಹ್ರಿ ಸುಳ್ಯ, ಉಪಾಧ್ಯಕ್ಷರಾಗಿ ಸಿದ್ದೀಕ್ ಸುಂಕದಕಟ್ಟೆ, ಸಿರಾಜ್ ಕಾಡುಮನೆ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಟಿ.ಎಸ್ ಎಣ್ಮೂರು, ಜೊತೆ ಕಾರ್ಯದರ್ಶಿಯಾಗಿ ಉಬೈದ್ ಮೊಗರ್ಪಣೆ, ಮುಸ್ತಫಾ ಕಳಂಜ, ಕೋಶಾಧಿಕಾರಿಯಾಗಿ ಮನ್ಸೂರ್ ಮಾಲೆಂಗೇರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಶೀರ್ ಝುಹ್ರಿ, ಸಲೀಮ್‌ಝುಹ್ರಿ, ಕಲಾಮ್ ಝುಹ್ರಿ, ಸಿದ್ದೀಕ್ ಹಾಸನ, ರಫೀಕ್ ಜೋಗಿಬೆಟ್ಟು, ಮುಹಮ್ಮದ್ ಅಲಿ ಮರ್ದಾಲ, ಸಿರಾಜ್ ಅಲೆಕ್ಕಾಡಿ, ರಾಶಿದ್ ಪೆರುವಾಜೆ, ಸ್ವಾಲಿಹ್ ಗಟ್ಟಮನೆ, ಹಾರಿಸ್ ಪರಪ್ಪುರವರನ್ನು ಆರಿಸಲಾಯಿತು.

ದಮ್ಮಾಮ್: ಪ್ರಸ್ತುತ ಓದುಗರ ಸಂಜೆ ಕಾರ್ಯಕ್ರಮ
ದಮ್ಮಾಮ್, ಜ.4: ಪ್ರಸ್ತುತ ಪಾಕ್ಷಿಕ ದಶಮಾನೋತ್ಸವದ ಅಂಗವಾಗಿ ಪ್ರಸ್ತುತ ರೀಡರ್ಸ್ ಫೋರಂ ಈಸ್ಟರ್ನ್ ಪ್ರೊವಿನ್ಸ್ ಸೌದಿ ಅರೇಬಿಯಾ ಸಮಿತಿ ವತಿಯಿಂದ ದಮ್ಮಾಮ್ನ ಹೋಟೆಲ್ ಪ್ಯಾರಗನ್ ಸಭಾಂಗಣದಲ್ಲಿ ‘ಪ್ರಸ್ತುತ ಓದುಗರ ಸಂಜೆ’ ಕಾರ್ಯಕ್ರಮವು ನಡೆಯಿತು.
ಡಾ.ಮುರಳೀಧರ್ ಹಾಗೂ ಡಾ.ಗೀತಾ ದಂಪತಿ ಪುತ್ರಿ ಗ್ರೀಶ್ಮಾ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 ‘ಮಾಧ್ಯಮ ಮತ್ತು ಪ್ರಜಾಪ್ರಭುತ್ವ’ ವಿಷಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ‘ಪ್ರಸ್ತುತ’ ಸಂಪಾದಕ ಮಂಡಳಿಯ ಸದಸ್ಯ ಅಬ್ದುರ್ರಝಾಕ್ ಕೆಮ್ಮಾರ,‘ಭಾರತದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕಾಗಿದ್ದ ಮಾಧ್ಯಮಗಳು ಕಾರ್ಪೊರೇಟ್ ಕಂಪೆನಿಗಳ, ರಾಜಕೀಯ ಪಕ್ಷಗಳ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದರು.ಪ್ರಸ್ತುತ ರೀಡರ್ಸ್ ಫೋರಂ ಅಧ್ಯಕ್ಷ ಫಯಾಝ್ ಎನ್. ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತುತ ಪಾಕ್ಷಿಕ ನಿಕಟಪೂರ್ವ ಸಂಪಾದಕ ಮುಹಮ್ಮದ್ ಶಬೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಸ ಅಸೋಸಿಯೇಶನ್ ಅಧ್ಯಕ್ಷ ನರೇಂದ್ರ ಶೆಟ್ಟಿ ಶುಭ ಹಾರೈಸಿದರು. ‘ಪ್ರಸ್ತುತ ವರ್ಷದ ವ್ಯಕ್ತಿ-2015’ಯಾಗಿ ಆಯ್ಕೆಯಾದ ಸಾಮಾಜಿಕ ಕಾರ್ಯಕರ್ತ ನೌಶಾದ್ ಕಾಟಿಪಳ್ಳರನ್ನು ಅಬ್ದುರ್ರಝಾಕ್ ಕೆಮ್ಮಾರ ಸನ್ಮಾನಿಸಿದರು.
 ‘ಪ್ರಸ್ತುತ ಕ್ಯಾಲೆಂಡರ್-2016’ನ್ನು ಇಂಡಿಯಾ ಫ್ರಟರ್ನಿಟಿ ಫೋರಂ, ಈಸ್ಟರ್ನ್ ಪ್ರೊವಿನ್ಸ್-ಕರ್ನಾಟಕ ಅಧ್ಯಕ್ಷ ಇಮ್ತಿಯಾಝ್ ಬಿಡುಗಡೆಗೊಳಿಸಿದರು. ಅಶ್ರಫ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
ಕವಿ ಜಲೀಲ್ ಮುಕ್ರಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅಬ್ದುಲ್ ಖಾದರ್ ಮರವೂರು, ಅನ್ವರ್ ಮಠ, ಅಬ್ದುಲ್ ರಝಾಕ್ ಕೆಮ್ಮಾರ, ಎ.ಎಂ.ಆರೀಫ್ ಜೋಕಟ್ಟೆ, ಫಯಾಝ್ ಎನ್. ಕವನ ವಾಚಿಸಿದರು.
‘ಪ್ರಸ್ತುತ ಓದುಗರ ಸಂಜೆ’ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶಾಕಿರ್ ಅಕ್ಕರಂಗಡಿ ಹಾಗೂ ಕವನ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಿಜಾಮುದ್ದೀನ್ ತಬೂಕುರಿಗೆ ಬಹುಮಾನ ನೀಡಲಾಯಿತು,
ಅನಿವಾಸಿ ಭಾರತೀಯ ಪ್ರತಿಭೆಗಳಿಗೆ ಏರ್ಪಡಿಸಲಾಗಿದ್ದ ಬಹುಭಾಷಾ ಹಾಡು ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಿಸಾರ್ ಜುಬೈಲ್ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಅಬ್ದುಲ್ ಖಾದರ್‌ರಿಗೆ ಬಹುಮಾನ ವಿತರಿಸಲಾಯಿತು.
ಅಝರುದ್ದೀನ್ ತೋಡಾರ್, ಅಶ್ರಫ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಇರ್ಶಾದ್ ಮಂಗಳೂರು ವಂದಿಸಿದರು.

ಕಿನ್ಯ: ಹಣ್ಣು ಹಂಪಲು ವಿತರಣೆ
 ಉಳ್ಳಾಲ, ಜ.4: ಕಿನ್ಯ ಅನ್ಸಾರುಲ್ ಮಸಾಕೀನ್ ಅಸೋಸಿಯೇಶನ್ ವತಿಯಿಂದ ಪ್ರವಾದಿ ಜನ್ಮದಿನದ ಪ್ರಯುಕ್ತ ಅಸೈಗೋಳಿಯಲ್ಲಿರುವ ಅಭಯಾಶ್ರ ಯದಲ್ಲಿರುವ ನಿವಾಸಿಗಳಿಗೆ ಉಚಿತ ಹಣ್ಣುಹಂಪಲು ವಿತರಿಸಲಾಯಿತು.
ಕಿನ್ಯ ಜುಮಾ ಮಸೀದಿ ಇಮಾಮ್ ಖಾಸಿಂ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಕಲ್ಲಾಂಡ, ಕಾರ್ಯದರ್ಶಿ ನಝೀರ್ ಕಲ್ಲಾಂಡ,ಕಲಂದರ್ ಕೂಡಾರ, ಕಿನ್ಯ ಗ್ರಾಪಂ ಸದಸ್ಯ ಫಾರೂಕ್ ಕಿನ್ಯ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಂತೋಷ್ ಕುಮಾರ್ ಅಸೈಗೋಳಿ, ಸಿದ್ದೀಕ್ ಮೀಂಪ್ರಿ, ನೌಫಾಲ್ ಕಿನ್ಯ, ಸಂಘದ ಸದಸ್ಯರಾದ ರಿಯಾಝ್ ಕೂಡಾರ, ಮುಷಾಯಿದ್ ಕಿನ್ಯ, ಶೇಖಬ್ಬ ಕೂಡಾರ ಉಪಸ್ಥಿತರಿದ್ದರು. ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಹಮೀದ್ ಕಿನ್ಯ ಸ್ವಾಗತಿಸಿದರು. ಅಭಯಾಶ್ರಯದ ಮ್ಯಾನೇಜರ್ ರಮ್ಯಾ ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X