ರಾಜ್ಯ ಸರಕಾರದಿಂದ ಮೂಲಸೌಕರ್ಯಕ್ಕೆ ಒತ್ತು: ಸಚಿವ ರಮಾನಾಥ ರೈ

ಸುಬ್ರಹ್ಮಣ್ಯ, ಜ.4: ಮಲೆನಾಡಿನ ಪ್ರಾದೇಶಿಕ ಕೆಲ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳ ಬೇಡಿಕೆ ಪ್ರಮಾಣ ಹೆಚ್ಚಿದೆ. ಸಂಪರ್ಕ ಸೇತುವೆ ಸೇರಿದಂತೆ ನೀರು, ರಸ್ತೆ ಇತ್ಯಾದಿ ಮೂಲ ಸೌಕರ್ಯಕ್ಕೆ ಒತ್ತು ನೀಡುವ ಕಾರ್ಯ ರಾಜ್ಯ ಸರಕಾರ ನಡೆಸುತ್ತಿದೆ. ಬಡ ಕುಟುಂಬಗಳ ಅಭಿವೃದ್ಧಿಗೆ ಹಲವಾರು ಯೋಜನೆ ತರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಎಂಬಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದರು.ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪಗೌಡ, ರಾಜೀವ್ ಗಾಂಧಿ ವಿವಿಯ ಸಿಂಡಿಕೇ
ಟ್ ಸದಸ್ಯ ಡಾ. ರಘು, ಜಿಪಂ ಸದಸ್ಯ ರಾದ ಕೆ.ಎಸ್. ದೇವರಾಜ್, ಸರಸ್ವತಿ ಕಾಮತ್, ತಾಪಂ ಸದಸ್ಯೆ ತಾರಾ ಮಲ್ಲಾರ, ಮಾಜಿ ಜಿಪಂ ಸದಸ್ಯರಾದ ರಾಜೀವಿ ಆರ್.ರೈ, ಪಿ.ಸಿ. ಜಯರಾಮ್, ದ.ಕ. ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಮಹೇಶ್, ತಾಪಂ ಇಒ ಆರ್. ಮಧುಕುಮಾರ, ಗ್ರಾಪಂ ಸದಸ್ಯರಾದ ಶೇಖರ ಅಂಬೆಕಲ್ಲು, ವಿಜಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು. ಕೊಲ್ಲಮೊಗ್ರು ಗ್ರಾಪಂ ಸದಸ್ಯ ಬಿ.ಸಿ. ವಸಂತ ವಂದಿಸಿ ದರು. ದಿನೇಶ್ ಮಡ್ಲಿಲ ಕಾರ್ಯಕ್ರಮ ನಿರೂಪಿಸಿದರು..





