ಬಜ್ಪೆ: ರಸ್ತೆ ದುರಸ್ತಿಗೆ ಆಗ್ರಹಿಸಿ ಎಸ್‌ಡಿಪಿಐ ಧರಣಿ
ಮಂಗಳೂರು, ಜ.4: ನಬಾರ್ಡ್ ಯೋಜನೆಯಡಿ ರಾಜ್ಯ ಹೆದ್ದಾರಿ 67ರ ಬಜ್ಪೆಪೇಟೆಯಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಉದ್ಘಾಟನೆಗೊಂಡು 4 ತಿಂಗಳು ಕಳೆದರೂ ಸೇತುವೆ ಮತ್ತು ರಸ್ತೆಯ ನಡುವಿನ ರಸ್ತೆಗೆ ಡಾಮರೀಕರಣ ಮಾಡದೆ ವಿಳಂಬ ಮಾಡಿರುವುದನ್ನು ಖಂಡಿಸಿ ಎಸ್‌ಡಿಪಿಐ ಇಂದು ಬಜ್ಪೆಯಲ್ಲಿ ಧರಣಿ ನಡೆಸಿತು.
ಧರಣಿನಿರತರನ್ನು ಉದ್ದೇಶಿಸಿ ಎಸ್‌ಡಿಪಿಐ ಮುಲ್ಕಿ-ಮೂಡುಬಿದಿರೆ ಕ್ಷೇತ್ರ ಸಮಿತಿಯ ಅಧ್ಯಕ್ಷ ಎ.ಕೆ.ಅಶ್ರಫ್ ಮಾತನಾಡಿದರು. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಶ್ರೀಧರ್ ಆಗಮಿಸಿ ಮನವಿ ಸ್ವೀಕರಿಸಿದರು. ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಇಸ್ಮಾಯೀಲ್ ಎಂಜಿನಿಯರ್, ಬಜ್ಪೆಗ್ರಾಪಂ ಸದಸ್ಯ ನಝೀರ್ ಕಿನ್ನಿಪದವು, ರಫೀಕ್ ಶಾಂತಿಗುಡ್ಡೆ, ಪಿಎಫ್‌ಐ ಮುಖಂಡರಾದ ಯಹ್ಯಾ, ಹಕೀಮ್ ಕೊಳಂಬೆ, ಸ್ಥಳೀಯ ಗಣ್ಯರಾದ ಉಂಞಾಕ ಪಯಣಿಗ, ಮೋನಾಕ ಮುಂತಾದವರು ಉಪಸ್ಥಿತರಿದ್ದರು. ಎಸ್‌ಡಿಪಿಐ ಕ್ಷೇತ್ರ ಜೊತೆ ಕಾರ್ಯದರ್ಶಿ ಜಮಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story





