500 ಅಂಶಗಳಷ್ಟು ಕುಸಿದ ಶೇರು ಸೂಚ್ಯಂಕ
ಮುಂಬೈ, ಜ. 4: ಮುಂಬೈ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ಸೋಮವಾರ ಮಧ್ಯಾಹ್ನದ ಹೊತ್ತಿಗೆ 500 ಅಂಶಗಳಷ್ಟು ಕುಸಿದು, 26,000ದ ಮಟ್ಟದಲ್ಲಿ ನೆಲೆಸಿತು. ಜಾಗತಿಕ ರಾಜಕೀಯ ಮತ್ತು ಆರ್ಥಿಕ ತಳಮಳಗಳು ಹೂಡಿಕೆದಾರರ ಮನಸ್ಸಿನ ಮೇಲೆ ಪರಿಣಾಮ ಬೀರಿರುವುದು ಇದಕ್ಕೆ ಕಾರಣವೆನ್ನಲಾಗಿದೆ.
ಚೀನಾದ ಉತ್ಪಾದಕತೆ ಕುರಿತ ಅಂಕಿಅಂಶಗಳು ಸತತ ಐದನೆ ತಿಂಗಳು ನಿರಾಶಾದಾಯಕ ಚಿತ್ರಣ ನೀಡಿದ ಹಿನ್ನೆಲೆಯಲ್ಲಿ ಏಶ್ಯದ ಶೇರು ಮಾರುಕಟ್ಟೆಗಳು ಅಸ್ಥಿರಗೊಂಡವು.
ಸೌದಿ ಅರೇಬಿಯ ಇರಾನ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ 2 ಶೇಕಡ ಏರಿಕೆ ಉಂಟಾಗಿದ್ದು ಭಾರತೀಯ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿತು.
Next Story





