ಕಾಸರಗೋಡು: ನೋರ್ಕಾ ಕಚೇರಿ ಉದ್ಘಾಟನೆ
ಕಾಸರಗೋಡು, ಜ.4: ವಿದೇಶಕ್ಕೆ ತೆರಳುವವರಿಗೆ ಪ್ರಮಾಣ ಪತ್ರಗಳನ್ನು ಅಟೆಸ್ಟ್ ಮಾಡುವ ಸೌಲಭ್ಯವನ್ನು ಕಾಸರಗೋಡಿನಲ್ಲಿ ಆರಂಭಿಸಲಾಗುವುದು ಎಂದು ಕೇರಳ ಗ್ರಾಮೀಣ ಅಭಿವೃದ್ಧಿ ನೋರ್ಕಾ ಸಚಿವ ಕೆ.ಸಿ.ಜೋಸೆಫ್ ಹೇಳಿದರು.
ಅವರು ಸೋಮವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋರ್ಕಾ ಕಚೇರಿಯನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು.
ಆರಂಭದಲ್ಲಿ ಅಟೆಸ್ಟ್ ಸೌಲಭ್ಯವನ್ನು ಎರಡು ವಾರಗಳಿಗೊಮ್ಮೆ ನಡೆಸಲಾಗುವುದು. ಬಳಿಕ ವಾರಕ್ಕೊಮ್ಮೆ ವ್ಯವಸ್ಥೆ ಮಾಡಿ ಜಾರಿಗೆ ತರುವ ಉದ್ದೇಶ ಹೊಂದಿದೆ. ವಿದೇಶಕ್ಕೆ ತೆರಳುವವರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಮನಗಂಡು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು .
ಶಾಸಕ ಎನ್.ಎ. ನೆಲ್ಲಿಕುನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಎ.ಜಿ.ಸಿ. ಬಶೀರ್, ನಗರಸಭಾ ಅಧ್ಯಕ್ಷೆ ಬೀಫಾತಿಮಾ ಇಬ್ರಾಹೀಂ, ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಎಚ್. ಮುಹಮ್ಮದ್ ಕುಂಞಿ, ನೋರ್ಕಾ ಅಧಿಕಾರಿ ಐಸಾಕ್ ಥಾಮಸ್ ಮಾತನಾಡಿದರು. ಆರ್.ಎಸ್. ಕಣ್ಣನ್ ಮತ್ತು ಬಿ. ಶಿವಪ್ರಸಾದ್ ವಂದಿಸಿದರು.
Next Story





