Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಹಗ್ಗಿನ ಹನಿ

ಹಗ್ಗಿನ ಹನಿ

ಕಾರುಣ್ಯಾಕಾರುಣ್ಯಾ5 Jan 2016 12:09 AM IST
share
ಹಗ್ಗಿನ ಹನಿ

 ಕಾಯಕದ ನಗರವೆಂದೇ ಖ್ಯಾತಿಯನ್ನು ಪಡೆದಿರುವ ಮುಂಬೈಯಲ್ಲಿ, ಕನ್ನಡ ರೂಪುಗೊಂಡಿದ್ದು ಬದುಕಿನ ಅನಿವಾರ್ಯತೆಯ ಜೊತೆಗೆ. ಒಳನಾಡಿನ ಆರ್ಥಿಕ ಏರು ಪೇರುಗಳು, ಕರಾವಳಿಯ ಬೇರೆ ಬೇರೆ ಸಮುದಾಯಗಳು ಬದುಕು ಅರಸುತ್ತಾ ಮುಂಬೈಯ ಕಡೆಗೆ ನಡೆದವು. ಅಲ್ಲಿ ಅವರು ತುಳು ಮತ್ತು ಕನ್ನಡ ಎರಡು ಅಸ್ಮಿತೆಗಳ ಮೂಲಕ ತಮ್ಮನ್ನು ಜಾಹೀರು ಪಡಿಸಿದರು. ಮುಂಬೈಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿದು ಬೆಳೆದದ್ದು ತುಳುವ ತೊಟ್ಟಿಲಿನಲ್ಲಿ. ವೃತ್ತಿಯಿಂದ ಹೊಟೇಲ್ ಉದ್ಯಮಿಯಾಗಿರುವ ಬಾಬು ಶಿವ ಪೂಜಾರಿಯವರೂ ಈ ಹಿನ್ನೆಲೆಯಿಂದಲೇ ಬಂದವರು. ಉದ್ಯಮಿಯಾಗಿದ್ದರೂ, ಅವರ ಓದಿನ ಬೀಸು ದೊಡ್ಡದು. ವೇದದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೂ ಆಸಕ್ತಿ ಬೆಳೆಸಿಕೊಂಡ ಇವರು ಒಂದೇ ಧರ್ಮ, ಒಂದೇ ದೇವರು, ಒಂದೇ ಜಾತಿ ಎಂಬ ನಾರಾಯಣಗುರು ಆಶಯದಲ್ಲಿ ಬೆಳೆದವರು. ‘ಹಗ್ಗಿನ ಹನಿ’ ಬಾಬು ಶಿವಪೂಜಾರಿಯವರು ಪತ್ರಕರ್ತರಾಗಿ ವರ್ತಮಾನವನ್ನು ಹೇಗೆ ನೋಡಿದ್ದಾರೆ ಎನ್ನುವುದನ್ನು ಪ್ರಕಟಪಡಿಸುತ್ತದೆ. ಮುಂಬೈಯ ‘ಗುರುತು’ ಮಾಸ ಪತ್ರಿಕೆಯ ಸಂಪಾದಕರಾಗಿ ಇವರು ಬರೆದ ಸಂಪಾದಕೀಯ ಬರಹಗಳ ಸಂಗ್ರಹವೇ ಈ ‘ಹಗ್ಗಿನ ಹನಿ’. ಹಗ್ಗಿನ ಹನಿ ಕುಂದಾಪುರ ಗ್ರಾಮ್ಯ ಕನ್ನಡದಲ್ಲಿ ಬಳಕೆಯಲ್ಲಿರುವ ವಿಶಿಷ್ಟ ಪದಪುಂಜ. ಮುಂಗಾರಿನ ಮೊದಲ ದಿನಗಳ ಅಂದರೆ ಹಗ್ಗಿನ ತಿಂಗಳ ಮಳೆ ಹನಿಯನ್ನು ಹೀಗೆ ಕರೆಯುತ್ತಾರೆ.

ಕಾದ ಭೂಮಿಗೆ ಸುರಿದ ಮಳೆಯ ಹನಿಯಂತೆಯೇ ಇಲ್ಲಿರುವ ಎಲ್ಲ ಬರಹಗಳೂ ವೈಚಾರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಮ್ಮನ್ನು ಮುಟ್ಟುತ್ತವೆ. ಸ್ತ್ರೀ ಚಳವಳಿ, ಡಾ. ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್, ಮತಾಂತರ, ಮಂದಾರ್ತಿ, ಬೆನ್ನಿಹಿನ್, ಭ್ರಷ್ಟಾಚಾರ, ವೌಢ್ಯ...ಹೀಗೆ ಹತ್ತು ಹಲವು ವಿಷಯಗಳೆಡೆಗೆ ಸಂಪಾದಕೀಯದ ನೋಟ ಹರಿಯುತ್ತದೆ. ಇಲ್ಲಿ ಬಾಬು ಶಿವಪೂಜಾರಿಯವರ ಲೇಖನದ ಎಲ್ಲ ಉದ್ದೇಶಗಳೂ ನಾರಾಯಣ ಗುರುಗಳ ಆಶಯಕ್ಕೆ ಪೂರಕವಾಗಿಲ್ಲ ಎನ್ನುವುದೂ ಕೆಲವೆಡೆ ಮನದಟ್ಟಾಗುತ್ತದೆ. ಬಹುಶಃ ಅವರ ಬಾಲ್ಯದ ಓದಿನಲ್ಲಿ ವೈದಿಕ ಪ್ರಭಾವ ದಟ್ಟವಾಗಿರುವುದು ಇದಕ್ಕೆ ಕಾರಣವಾಗಿರಬಹುದು.

ಆದುದರಿಂದಲೇ ಅವರ ಕೆಲವು ಲೇಖನಗಳ ವಿಚಾರಗಳು ವಿರೋಧಾಭಾಸಗಳಿಂದ ಕೂಡಿವೆ. ಶೋಷಿತ ಸಮುದಾಯದಿಂದ ಬಂದ ಬಾಬು ಶಿವಪೂಜಾರಿ, ಆ ಶೋಷಣೆಗೆ ಕಾರಣವಾಗಿರುವ ವೈದಿಕ ಸಂಚನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳುವಲ್ಲಿ ಭಾಗಶಃ ಸೋತಿದ್ದಾರೇನೋ ಎಂದು ಅನಿಸುತ್ತದೆ. ಕೆಲವು ವಿಚಾರಗಳಿಗೆ ಸಂಬಂಧ ಪಟ್ಟಂತೆ, ವಿಷಯದ ಆಳಕ್ಕಿಳಿಯದೆ, ಮೇಲಿಂದ ಮೇಲಕ್ಕೆ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಆದರೂ ಇಲ್ಲಿರುವ ಹೆಚ್ಚಿನ ಲೇಖನಗಳು ನಮ್ಮನ್ನು ವಿಚಾರಕ್ಕೆ, ವಿಮರ್ಶೆಗೆ ಹಚ್ಚುವುದರಲ್ಲಿ ಅನುಮಾನವಿಲ್ಲ.
ಬಿಲ್ಲವ ಜಾಗೃತಿ ಬಳಗ ಮುಂಬೈ ಇವರು ಹೊರತಂದಿರುವ ಕೃತಿಯ ಮುಖಬೆಲೆ 300 ರೂ. ಆಸಕ್ತರು 2264 1816 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X