ನಾಳೆ ಪಟ್ಟಿಕ್ಕಾಡ್ ಜಾಮಿಯ ಸಮ್ಮೇಳನಕ್ಕೆ ಚಾಲನೆ

ಮಂಗಳೂರು, ಜ.4: ಕೇರಳದ ಪಟ್ಟಿಕ್ಕಾಡ್ ಜಾಮಿಯ ನೈರುತ್ಯ ಅರೆಬಿಕ್ ಕಾಲೇಜಿನ ವಾರ್ಷಿಕ ಸನದುದಾನ ಸಮ್ಮೇಳನ ಜ.6ರಿಂದ 10ರವರೆಗೆ ೈಝಾಬಾದ್ ಪಿಎಂಎಸ್‌ಎ ಪೂಕೋಯ ತಂಳ್ ನಗರದಲ್ಲಿ ನಡೆಯಲಿದೆ ಎಂದು ಫೈಝೀಸ್‌ನ ಕಾರ್ಯನಿರತ ಕಾರ್ಯದರ್ಶಿ ಎ.ಎಂ.ಅಬೂಸ್ವಾಲಿಹ್ ೈಝಿ ಅಕ್ಕರಂಗಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಜ.6ರಂದು ಸಂಜೆ ಕೇರಳ ಮುಸ್ಲಿಂ ಲೀಗ್ ಅಧ್ಯಕ್ಷ, ಸಮಸ್ತ ಉಪಾಧ್ಯಕ್ಷರಾದ ಹೈದರಲಿ ಶಿಹಾಬ್ ತಂಳ್ ಪಾಣಕ್ಕಾಡ್ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಅಸ್ಸಾಂನ ಕೃಷಿ ಸಚಿವ ಸಿದ್ದೀಕ್ ಅಹ್ಮದ್ ಸಮ್ಮೇಳನ ಉದ್ಘಾಟಿಸಲಿದ್ದಾರೆ ಹಾಗೂ ಈ ಸಂದರ್ಭ ಪದ್ಮಶ್ರೀ ಎಂ.ಎ.ಯೂಸ್ು ಅಲಿ ಒಂದು ಕೋಟಿ ರೂ. ದಾನ ಮಾಡಿ ನಿರ್ಮಿಸಿದ ಗ್ರಂಥಾಲಯದ ಲೋಕಾರ್ಪಣೆ ನಡೆಯಲಿದೆ ಎಂದು ಅವರು ಹೇಳಿದರು.
ಡಿ. 10ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸೇರಿದಂತೆ 225 ವಿದ್ಯಾರ್ಥಿಗಳಿಗೆ ಸನದುದಾನ ನೀಡಲಾಗುವುದು. ಐದು ದಿನಗಳ ಕಾಲ ಮಜ್‌ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ, ಮಾಧ್ಯಮ ಸಮ್ಮೇಳನ, ವಿದ್ಯಾಭ್ಯಾಸ ಸಮ್ಮೇಳನ, ಗ್ರಾಂಡ್ ಸಲ್ಯೂಟ್, ಆದರ್ಶ ವಿಶದೀಕರಣ, ಕನ್ನಡ ಸಂಗಮ, ವಿದ್ಯಾರ್ಥಿ ೆಸ್ಟ್ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ೈಝೀಸ್ ದ.ಕ. ಜಿಲ್ಲಾಧ್ಯಕ್ಷ ಹಾಜಿ ಎಸ್.ಪಿ.ಉಮರ್ ೈಝಿ ಸಾಲ್ಮರ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಎಂ.ಶರ್ೀ ೈಝಿ ಕಡಬ, ಉಪಾಧ್ಯಕ, ಅಬ್ದುರಹ್ಮಾನ್ ೈಝಿ ಕಜೆಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







