ಕಾಸರಗೋಡು: ಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ

ಕಾಸರಗೋಡು : 56 ನೇ ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವಕ್ಕೆ ಸೋಮವಾರ ಕಾಸರಗೋಡು ಹಯರ್ ಸೆಕಂಡರಿ ಶಾಲೆ ಯಲ್ಲಿ ಚಾಲನೆ ಲಭಿಸಿದ್ದು , ಜ.8ರ ತನಕ ನಡೆಯಲಿದೆ .
ಮೊದಲ ದಿನ ವೇದಿಕೇತರ ಸ್ಪರ್ದೆಗಳು ನಡೆದಿದ್ದು, ಕುಂಬಳೆ ಮತ್ತು ಬೇಕಲ ಉಪ ಜಿಲ್ಲೆ ತಲಾ 28 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ.
ಹೊಸದುರ್ಗ , ಕಾಸರಗೋಡು , ಚೆರ್ವತ್ತೂರು , ಮಂಜೇಶ್ವರ , ಚಿತ್ತಾರಿಕಾಲ್ ಉಪಜಿಲ್ಲೆ ಗಳು ನಂತರದ ಸ್ಥಾನದಲ್ಲಿದೆ .
ಇಂದು ಬೆಳಿಗ್ಗೆ ಶಿಕ್ಷಣಾಧಿಕಾರಿ ವಿ . ವಿ ರಾಮಚಂದ್ರನ್ ಧ್ವಜ ರೋಹಣ ನೆರವೇರಿಸುವುದರೊಂದಿಗೆ ಕಲೋತ್ಸವಕ್ಕೆ ಚಾಲನೆ ನೀಡಲಾಯಿತು .
ಕಲೋತ್ಸವಕ್ಕೆ ಜ.5ರಂದು ಸಂಜೆ 5 ಗಂಟೆಗೆ ಅಧಿಕೃತ ಚಾಲನೆ ಲಭಿಸಲಿದೆ. ಶಾಸಕ ಎನ್ . ಎ ನೆಲ್ಲಿಕುನ್ನು ಉದ್ಘಾಟನೆ ನೆರವೇರಿಸುವರು . 8 ರಂದು ನಡೆಯುವ ಸಮಾರೋಪ ಸಮಾರಂಭವನ್ನು ಸಂಸದ ಪಿ. ಕರುಣಾಕರನ್ ಉದ್ಘಾಟಿಸುವರು.
Next Story





