ವಿಟ್ಲ : ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಹುಬ್ಬುರ್ರಸೂಲ್ ಪ್ರಭಾಷಣ ಕಾರ್ಯಕ್ರಮ
ವಿಟ್ಲ : ಪಾಣೆಮಂಗಳೂರು ಸಮೀಪದ ಆಲಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‍ನಲ್ಲಿ ಮೌಲಿದ್ ಆಚರಣೆ ಹಾಗೂ ಹುಬ್ಬುರ್ರಸೂಲ್ ಪ್ರಭಾಷಣ ಕಾರ್ಯಕ್ರಮ ನಡೆಯಿತು.
ಶಾಖಾ ಉಪಾಧ್ಯಕ್ಷ ಹಾಜಿ ಪಿ.ಬಿ. ಹಾಮದ್ ಅಧ್ಯಕ್ಷತೆ ವಹಿಸಿದ್ದರು. ಪಾಣೆಮಂಗಳೂರು-ನೆಹರುನಗರ ಮಸೀದಿ ಖತೀಬ್ ಶುಕೂರ್ ದಾರಿಮಿ ಸಂದೇಶ ಭಾಷಣಗೈದರು.
ಈ ಸಂದರ್ಭ ಪಾಣೆಮಂಗಳೂರು ಎಸ್ಕೆಎಸ್ಸೆಸ್ಸೆಫ್ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಅಝೀಝ್ ಪಿ.ಐ., ಖಲೀಲ್ ದಾರಿಮಿ, ಅಬ್ದುಲ್ ಮಜೀದ್ ಬೋಗೋಡಿ, ಮುಹಮ್ಮದ್ ಹನೀಫ್ ಹಾಸ್ಕೋ, ಶಫೀಕ್ ಆಲಡ್ಕ, ಇಸ್ಹಾಕ್ ಫೇಶನ್‍ವೇರ್, ಮುಹಮ್ಮದ್ ಹನೀಫ್ ಬೋಗೋಡಿ, ನಝೀರ್ ಫಿಶ್ ನಂದಾವರ, ರಫೀಕ್ ಇನೋಳಿ, ಎನ್. ಅಬ್ಬೊನಾಕ ನಂದಾವರ, ಎನ್. ಮೋನಾಕ ನಂದಾವರ, ಬಿ. ಮುಹಮ್ಮದ್, ನೌಶಾದ್ ಯು., ಯು. ಝುಬೈರ್ ಆಲಡ್ಕ, ಸುಲೈಮಾನ್ ಬೋಗೋಡಿ, ನೌಶಾದ್, ಸಿರಾಜ್ ಫೈಝಿ, ಝಾಹಿದ್ ಫೈಝಿ, ರಿಝ್‍ವಾನ್ ನೆಹರುನಗರ, ಶಾಕಿರ್ ಅಕ್ಕರಂಗಡಿ ಮೊದಲಾದವರು ಉಪಸ್ಥಿತರಿದ್ದರು.
Next Story





